Asianet Suvarna News Asianet Suvarna News

ಹೆಣ್ಣುಮಕ್ಕಳು ದುಡಿಯಬೇಕು ರೀ....ನನಗೂ ಮಗಳಿದ್ದಾಳೆ ಈಗ: ಧ್ರುವ ಸರ್ಜಾ

ನನ್ನ ಪತ್ನಿನೇ ನನ್ನ ಬೆಸ್ಟ್‌ಫ್ರೆಂಡ್ ಆಕೆಯೊಟ್ಟಿಗೆ ಪ್ರತಿಯೊಂದನ್ನು ಹಂಚಿಕೊಳ್ಳುತ್ತೀನಿ ಎಂದು ಮಾರ್ಟಿನ್ ಸಿನಿಮಾ ಪ್ರಚಾರದ ವೇಳೆ ಧ್ರುವ ಸರ್ಜಾ ಮಾತನಾಡಿದ್ದಾರೆ. 

Kannada actor Dhruva Sarja talks about wife Prerana and women empowerment vcs
Author
First Published Aug 6, 2024, 10:21 AM IST | Last Updated Aug 6, 2024, 10:21 AM IST

ಆಕ್ಷನ್ ಪ್ರಿನ್ಸ್‌ ಧ್ರುವ ಸರ್ಜಾ ನಟಿಸಿರುವ ಮಾರ್ಟಿನ್ ಸಿನಿಮಾ ಆಗಸ್ಟ್‌ 11ರಂದು ರಿಲೀಸ್ ಆಗುತ್ತಿದೆ. ಕೆಲವು ದಿನಗಳ ಹಿಂದೆ ಮುಂಬೈನಲ್ಲಿ ಪ್ಯಾನ್‌ ಇಂಡಿಯಾ ಟೀಸರ್ ಟ್ರೈಲರ್ ಲಾಂಚ್ ಕಾರ್ಯಕ್ರಮ ನಡೆಯಿತ್ತು. ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧ್ರುವ ಸರ್ಜಾ ತಮ್ಮ ಪತ್ನಿ ಪ್ರೇರಣಾ ಸಪೋರ್ಟ್‌ ಬಗ್ಗೆ ಹಂಚಿಕೊಂಡಿದ್ದಾರೆ.

'ನನ್ನ ಪತ್ನಿ ಪ್ರೇರಣಾಳಿಗೆ ಸಿನಿಮಾಗಳ ಮೇಲೆ ಆಸಕ್ತಿ ತುಂಬಾನೇ ಕಡಿಮೆ ಆದರೆ ನನ್ನ ಸಿನಿಮಾಗಳ ಬಗ್ಗೆ ಸಂಪೂರ್ಣ ಅಪ್ಡೇಟ್‌ ಇರುತ್ತಾಳೆ. ಆಕೆ ನನ್ನ ಬೆಸ್ಟ್‌ ಫ್ರೆಂಡ್ ಆಗಿರುವುದರಿಂದ ಪ್ರತಿಯೊಂದನ್ನು ಹೇಳಿಕೊಳ್ಳುತ್ತೀನಿ....ಕಾರಿನಲ್ಲಿ ಪ್ರಯಾಣ ಮಾಡುವಾಗ ಪೋನ್ ಮಾಡಿದ್ದಳು ಎಲ್ಲಿದ್ದೀನಿ ಎಂದು ಹೇಳಿದೆ. ಗಂಡ ಹೆಂಡತಿ ಅನ್ನೋದಕ್ಕಿಂತ ನಾವಿಬ್ಬರೂ ಇನ್ನೂ ಸ್ನೇಹಿತರಾಗಿದ್ದೀವಿ. ಆಕೆ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವುದರಿಂದ ಕಾಲೇಜ್‌ ಹೇಗಿತ್ತಮ್ಮಾ ಎಂದು ಹೇಳುತ್ತೀನಿ ಅದೇ ರೀತಿ ನನಗೂ ಶೂಟಿಂಗ್ ಹೇಗಿತ್ತು ಎಂದು ಕೇಳುತ್ತಾಳೆ. ಇವತ್ತಿನ ದಿನ ಕೆಲಸ ಮಾಡಿದ್ದೀರಿ ನಿಮ್ಮ ಕಾಂಟ್ರಿಬ್ಯೂಷನ್ ಏನಿತ್ತು ಎಂದು ಕೇಳಿದಾಗ ಒಬ್ರು ಟೀಚರ್ ಬಂದಿರಲಿಲ್ಲ ಆ ಕ್ಲಾಸ್‌ನ ನಾನು ತೆಗೆದುಕೊಂಡೆ ಅದೇ ಕಾಂಟ್ರಿಬ್ಯೂಷನ್ ಎನ್ನುತ್ತಾಳೆ. ನಿಂದು ಏನು ಎಂದು ಕೇಳುತ್ತಾಳೆ ನಂದು ಏನೂ ಇಲ್ಲ ಎಂದು ನಗುತ್ತೀನಿ' ಎಂದು ಧ್ರುವ ಸರ್ಜಾ ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಈ ಮಳೆಯಲ್ಲಿ ಗೋವಾಗೆ ಹೊರಟ ಸೋನು ಗೌಡ; ಲಾಕರ್‌ನ ಓವನ್‌ ಅನ್ಬೇಡ ತಾಯಿ ಎಂದು ಕಾಲೆಳೆದ ನೆಟ್ಟಿಗರು!

'ಪ್ರತಿಯೊಂದು ಹೆಣ್ಣಿಗೂ ಸ್ವಾತಂತ್ರ್ಯ ಇರುತ್ತದೆ ಕೆಲಸ ಮಾಡಬೇಡಿ ಎಂದು ಹೇಳುವುದಕ್ಕೆ ನಾವು ಯಾರು? ಆ ಕಾಲದಲ್ಲಿ ನನ್ನ ಅಜ್ಜಿ ಟೀಚರ್ ಆಗಿದ್ದರು ಈಗ ನನ್ನ ಹೆಂಡತಿ ಪ್ರೊಫೆಸರ್ ಆಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಹೆಣ್ಣು ಮಕ್ಕಳು ದುಡಿಯಬೇಕು ರೀ...ಅವರ ಕಾಲುಗಳ ಮೇಲೆ ಅವರು ನಿಲ್ಲ ಬೇಕು ಯಾರ ಮೇಲೂ ಡಿಪೆಂಟ್ ಆಗಬಾರದು. ನನಗೂ ಮಗಳು ಆದಮೇಲೆ ಯೋಚನೆಗಳು ಜಾಸ್ತಿ ಆಗಿದೆ ಹೆಣ್ಣು ಮಕ್ಕಳ ಶಕ್ತಿ ಬಗ್ಗೆ ಮಹತ್ವ ಸಾರಬೇಕು' ಎಂದು ಧ್ರುವ ಸರ್ಜಾ ಹೇಳಿದ್ದಾರೆ.

'ಗೆಳತಿ ಪತ್ನಿಯಾಗಿ ಬಂದ ಮೇಲೆ ಜೀವನ ಚೆನ್ನಾಗಿದೆ, ಕೆಲಸ ಮತ್ತು ಫ್ಯಾಮಿಲಿ ಎರಡಕ್ಕೂ ಸರಿಯಾಗಿ ಸಮಯ ಕೊಡಬೇಕು. ಯಾರಿಗೆ ಏನಾಗುತ್ತದೆ ಎಂದು ಗೊತ್ತಿಲ್ಲ ನೆಗೆಟಿವ್ ಅಲ್ಲ ಪಾಸಿಟಿವ್ ಆಗಿ ಯೋಚನೆ ಮಾಡಬೇಕು ಅಯ್ಯೋ ನಾನು ಸಮಯ ಕೊಡಬೇಕಿತ್ತು ಅಂತ ಯೋಚನೆ ಮಾಡುವ ಬದಲು ಸಮಯ ಕೊಡಬೇಕು. ಫ್ರೆಂಡ್ ಹೆಂಡತಿಯಾಗಿ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಕೆಲವೊಂದು ಹೇಳದೆನೇ ಅರ್ಥವಾಗುತ್ತದೆ. ಯಾವ ಸಂದರ್ಭದಲ್ಲಿ ನನ್ನ ಹೆಂಡತಿ ಏನು ಅಂದುಕೊಳ್ಳುತ್ತಾರೆ ಅದು ಹೇಳುವ ಮುನ್ನವೇ ನನಗೆ ಅರ್ಥವಾಗುತ್ತದೆ. ನನ್ನ ಸಿನಿಮಾಗಳ ಬಗ್ಗೆ ಏನೂ ಹೇಳುವುದಿಲ್ಲ ಆದರೆ ಚರ್ಚೆ ಮಾಡುತ್ತೀವಿ. ನನ್ನ ಪ್ಯಾನ್ ಇಂಡಿಯಾ ಕಾರ್ಯಕ್ರಮದಲ್ಲಿ ಫ್ಯಾಮಿಲಿ ಭಾಗಿಯಾಗುವುದಿಲ್ಲ ಅಲ್ಲದೆ ಪತ್ನಿಗೆ ಕ್ಯಾಮೆರಾ ಅಂದ್ರೆ ದೂರ ಸೆರೆಯುತ್ತಾರೆ' ಎಂದಿದ್ದಾರೆ ಧ್ರುವ ಸರ್ಜಾ. 

 

Latest Videos
Follow Us:
Download App:
  • android
  • ios