‘ಒಡೆಯ’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲೇ ಡಿ.12ರಂದು ಧನ್ವೀರ್‌ ಅವರ ‘ಬಂಪರ್‌’ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ದರ್ಶನ್‌ ಅವರೇ ಮುಖ್ಯ ಅತಿಥಿ. ‘ಭರಾಟೆ’ ಚಿತ್ರದ ನಂತರ ಸುಪ್ರೀತ್‌ ಅವರು ಕೈಗೆತ್ತಿಕೊಂಡು ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು. ಅಲೆಮಾರಿ ಸಂತು ಅಲಿಯಾಸ್‌ ಹರಿ ಸಂತೋಷ್‌ ಈ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ.

'ಬಜಾರ್‌'ನಲ್ಲಿ ಮಿಂಚಿದ ಧನ್ವೀರ್‌ ರಿಯಲ್ ಲೈಫ್‌ ಹುಡ್ಗಿ ಯಾರ್ಗೊತ್ತಾ? .

ಸಿಂಪಲ್‌ ಸುನಿ ನಿರ್ದೇಶನದ ‘ಬಜಾರ್‌’ ಚಿತ್ರದ ಮೂಲಕ ಕನ್ನಡಕ್ಕೆ ಬಂದವರು ಧನ್ವೀರ್‌. ‘ಇದೊಂದು ಪಕ್ಕಾ ಆ್ಯಕ್ಷನ್‌ ಕಂ ಮಾಸ್‌ ಸಿನಿಮಾ. ದರ್ಶನ್‌ ಅವರ ಬೆಂಬಲದ ಜತೆಗೆ ಸುಪ್ರೀತ್‌ ಅವರ ಅದ್ದೂರಿ ನಿರ್ಮಾಣ ಇದೆ. ಈ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಈ ಸಿನಿಮಾ ಮೇಕಿಂಗ್‌ ಮಾಡುವ ಯೋಜನೆ ಇದೆ’ ಎಂಬುದು ನಿರ್ದೇಶಕರ ಮಾತು.