ಹುಟ್ಟುಹಬ್ಬದ ಪ್ರಯುಕ್ತ ಕರಿ ಚಿರತೆಯನ್ನು ದತ್ತು ಪಡೆದ 'ಬಂಪರ್' ಚಿತ್ರದ ನಟ ಧನ್ವೀರ್.

ಹುಡುಗಿಯರ ಹೃದಯ ಕದ್ದ 'ಬಜಾರ್' ಚಿತ್ರದ ನಟ ಧನ್ವೀರ್‌ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಮೈಸೂರು ಮೃಗಾಲಯದಲ್ಲಿ ಕರಿ ಚಿರತೆಯನ್ನು ದತ್ತು ಪಡೆದುಕೊಂಡಿದ್ದಾರೆ. 

ಹ್ಯಾಪಿ ಬರ್ತಡೇ ಧನ್ವೀರ್; 'ಬಂಪರ್' ಟೀಸರ್‌ ವೈರಲ್! 

 ಸೆಪ್ಟೆಂಬರ್‌8ರಂದು ಮೃಗಾಲಯಕ್ಕೆ ಭೇಟಿ ನೀಡಿ 35 ಸಾವಿರ ರೂಪಾಯಿ ನೀಡಿ ಒಂದು ವರ್ಷದ ಅವಧಿಗೆ ಕರಿಚಿರತೆಯನ್ನು ದತ್ತು ಪಡೆದು ಸಿಬ್ಬಂದಿಗಳಿಂದ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

ಧನ್ವೀರ್‌ ಅಭಿನಯಿಸಿರುವ ಒಂದು ಸಿನಿಮಾ 'ಬಜಾರು' ರಿಲೀಸ್‌ ಆಗಿ ಸೂಪರ್ ಹಿಟ್ ಆಗಿದೆ ಮತ್ತೊಂದು ಸಿನಿಮಾ 'ಬಂಪರ್' ಟೀಸರ್ ರಿಲೀಸ್ ಮಾಡಿದೆ. ಮಾಡಿರುವುದು ಎರಡೇ ಸಿನಿಮಾವಾದರೂ ಧನ್ವೀರ್‌ಗೆ ಇರುವ ಫ್ಯಾನ್ ಕ್ರೇಜ್‌ ಯಾವ ಸ್ಟಾರ್ ನಟರಿಗೂ ಕಡಿಮೆ ಇಲ್ಲ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವೆಂದು ಪುಷ್ಪಾಭಿಷೇಕ ಮಾಡಿದ್ದಾರೆ. ಅಲ್ಲದೆ ಮೈಸೂರು ಸುತ್ತ ಮುತ್ತ ಜಾಗದಲ್ಲಿ ಸುತ್ತಾಡಿದ ಧನ್ವೀರ್‌ನನ್ನು ಭೇಟಿ ಮಾಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಸಿಕ್ಕಾಪಟ್ಟೆ ಸ್ಟೈಲಿಶ್‌ ಆಗಿರುವ ಧನ್ವೀರ್‌ನನ್ನು ಅನೇಕ ಅಭಿಮಾನಿಗಳು ಫ್ಯಾಷನ್ ರೋಲ್ ಮಾಡಲ್ ಆಗಿ ಸ್ವೀಕರಿಸಿದ್ದಾರೆ. 

ಪೌರ ಕಾರ್ಮಿಕರ ಕಾಲು ತೊಳೆದು ಪೂಜೆ ಮಾಡಿ ಕೃತಜ್ಞತೆ ಸಲ್ಲಿಸಿದ ಬಜಾರ್ ನಟ ಧನ್ವೀರ್!

View post on Instagram

ಕೆಲ ದಿನಗಳ ಹಿಂದೆ ಶಿವರಾಜ್‌ಕುಮಾರ್ ಕೂಡ ಮೈಸೂರು ಮೃಗಾಲಯದಿಂದ ಪಾರ್ವತಿ ಎಂಬ ಆನೆಯನ್ನು ಒಂದು ವರ್ಷದ ಅವಧಿಗೆ ದತ್ತು ಪಡೆದುಕೊಂಡಿದ್ದಾರೆ.