ಬಡವ ರಾಸ್ಕಲ್ ಯಶಸ್ಸಿನಲ್ಲಿ ತೇಲುತ್ತಿರುವ ಡಾಲಿ ಧನಂಜಯ್. ಸಕ್ಸಸ್ ಪ್ರೆಸ್‌ಮೀಟ್‌ನಲ್ಲಿ ಗಣ್ಯರಿಗೆ ಧನ್ಯವಾದ ಹೇಳಿದ ನಟ

ಕನ್ನಡ ಚಿತ್ರರಂಗದ (Sandawood) ನಟ ರಾಕ್ಷಸ ಡಾಲಿ ಧನಂಜಯ್ (Dhananjay) ನಟನೆಯ ಬಡವ ರಾಸ್ಕಲ್ ಸಿನಿಮಾ ರಿಲೀಸ್ ಆಗಿ, 50 ದಿನಗಳನ್ನು ಪೂರೈಸಿದೆ. ಸಕ್ಸಸ್ ಮೀಟ್ ಹಮ್ಮಿಕೊಂಡ ನಟ ಇಡೀ ಚಿತ್ರರಂಗಕ್ಕೆ ಧನ್ಯವಾದಗಳನ್ನು ತಿಳಿಸಿದೆ. ವೇದಿಕೆ ಮೇಲೆ ಭಾವುಕ ಕ್ಷಣಗಳು ಎದುರಾದವು. ತಮ್ಮ ಮೊಬೈಲ್ ನಂಬರ್ ಹೇಗೆ ಜನರಲ್ಲಿ ವೈರಲ್ ಆಗಿದೆ ಎಂದು ಹೇಳಿದ್ದಾರೆ.

ಧನು ಮಾತು:
'ಬಡವರಾಸ್ಕಲ್ (BadavaRascal) ಸಿನಿಮಾ ಅಂತ ಬಂದಾಗ ಯಾರ್ ಯಾರಿಗೆ ಥ್ಯಾಂಕ್ಸ್‌ ಹೇಳಬೇಕು ಅಂತ ಬಂದ್ರೆ ದೊಡ್ಡ ಲಿಸ್ಟ್‌ ಇದೆ. ಅಷ್ಟು ಜನರು ನಮ್ಮ ಸಿನಿಮಾದ ಹಿಂದೆ, ನಮ್ಮ ಜೊತೆಗೆ ನಿಂತಿರುವವರೂ ಇದ್ದಾರೆ. ಮೊದಲನೇ ಪ್ರೊಡಕ್ಷನ್‌ನಲ್ಲಿ (Daali Pictures) 50ನೇ ದಿನ ಆಚರಿಸುತ್ತಿರುವುದು ನಮಗೆಲ್ಲಾ ಖುಷಿ ಇದೆ. ನಮ್ಮ ತಂಡದ ಪ್ರತಿಯೊಬ್ಬ ಕಾರ್ಮಿಕನೂ ಬಡವರಾಸ್ಕಲ್ ಶುರುವಾದಾಗ ತುಂಬಾ ನಿಸ್ವಾರ್ಥದಿಂದ ಕೆಲಸ ಮಾಡಿದ್ದರು, ಫಸ್ಟ್‌ ಟೈಂ ಮಾಡ್ತಿದ್ಯಾ, ಅಣ್ಣ ಮಾಡು, ನಾವು ಸಹಾಯ ಮಾಡ್ತೀವಿ ಅಂದರು. ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಮತ್ತು ವಿತರಕರು ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಅವರಿಗೆ ದೊಡ್ಡ ಧನ್ಯವಾದಗಳು. ಗೀತಕ್ಕ, ಶಿವಣ್ಣ (Shivarajkumar) ಮತ್ತು ನಮ್ಮ ಪ್ರೀ-ರಿಲೀಸ್ ಕಾರ್ಯಕ್ರಮ (Pre Release Programme) ಬಂದು ಸಪೋರ್ಟ್ ಮಾಡಿದ ವಿಜಯ್ ಸರ್ (Duniya Vijay), ವಸಿಷ್ಠ, ಲೂಸ್ ಮಾದ ಯೋಗಿ (Loose mada Yogi), ರಚಿತಾ ರಾಮ್ (Rachita Ram) ಮತ್ತು ನಿಧಿ (Nidhi Subbaiah) ಹೀಗೆ ದೊಡ್ಡ ಜನರ ಗುಂಪಿದೆ. ನಾನು ಧನ್ಯವಾದಗಳನ್ನು ಹೇಳಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಜನರು ಇದನ್ನು ಪರ್ಸನಲ್ ಆಗಿ ತೆಗೆದುಕೊಂಡು ಸಿನಿಮಾವನ್ನು ಗೆಲ್ಲಿಸಿದ್ದಾರೆ. 220 ಮೊಮೆಂಟೊಗಳಿವೆ. ಒಬ್ಬರಾದ ಮೇಲೆ ಒಬ್ಬರ ಹೆಸರು ಸೇರಿಕೊಳ್ಳುತ್ತಲೇ ಹೋಗಬೇಕು. ಅಪ್ಪಿತಪ್ಪಿಯೂ ನಾನು ಮಿಸ್ ಮಾಡಿದ್ದರೆ ನನಗೆ ಪರ್ಸನಲ್ ಆಗಿ ಮೆಸೇಜ್ ಮಾಡಿ ಹೇಳಿ. ನಾನೇ ನಿಮ್ಮ ಬಳಿ ತೆಗೆದುಕೊಂಡು ಬರ್ತೀನಿ,' ಎಂದು ಧನಂಜಯ್ ಮಾತನಾಡಿದ್ದಾರೆ.

Badava Rascal Movie:ಡಾಲಿ ಧನಂಜಯ್‌ಗೆ ಜನಪದ ಕಲಾವಿದರಿಂದ ಅದ್ಧೂರಿ ಸ್ವಾಗತ

ಡಾಲಿ ನಂಬರ್:
'ನಿನ್ನೆ ತೆಲುಗು (Telugu Badava Rascal) ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮ ನಡೆಯಿತು. ನಾನು ಅಲ್ಲೊಂದು ಮಾತು ಹೇಳಿದೆ. ನಾನು ಸಿನಿಮಾ ಶುರು ಮಾಡುವಾಗ ನಮ್ಮ ಬಳಿ ಹಣ ಇರಲಿಲ್ಲ. ವಿಲನ್ ಆಗಿ ಮಾಡಿದ ಎಲ್ಲಾ ಹಣವನ್ನೂ ತೆಗೆದುಕೊಂಡು ಹೋಗಿ ಸಿನಿಮಾ ಮೇಲೆ ಹಾಕಿದ್ದೀನಿ. ದುಡ್ಡು ಇದ್ದಾಗ ಎಲ್ಲರೂ ಪ್ರಾಪರ್ಟಿ (Property) ಮೇಲೆ ಹಾಕುತ್ತಾರೆ. ನಾನು ನಮ್ಮ ಟ್ಯಾಲೆಂಟ್‌ಗಳ ಮೇಲೆ ಇನ್ವೆಸ್ಟ್‌ ಮಾಡಿದೆ. ಅದ್ಭುತವಾದ ಟ್ಯಾಲೆಂಟ್ ನನಗೆ ಸಿಕ್ಕಿದ್ದಾರೆ. ಈ ಸಿನಿಮಾದಲ್ಲಿರುವ ಎಲ್ಲಾ ಪ್ರತಿಭೆಗಳೂ independent ಆಗಿ ನಿಲ್ಲುವಷ್ಟು ಶಕ್ತಿ ಮತ್ತು ತಾಕತ್ತು ಇರುವ ಪ್ರತಿಭೆಗಳು. ಅವರಿಂದ ನಮ್ಮ ಸಿನಿಮಾ ಚೆನ್ನಾಗಿದೆ ದುಡಿದು ಕೊಟ್ಟಿದೆ. ಇನ್ನೂ ಸಿನಿಮಾ ಮಾಡುವ ಶಕ್ತಿ ಕೊಟ್ಟಿದ್ದಾರೆ. ನಾನು ಮೇಸೇಜ್ ಮಾಡಿ ಅಂತ ಹೇಳಿದೆ ಅಲ್ವಾ, ಈಗ ಎಲ್ಲರೂ ಫೋನ್‌ ನಂಬರ್ (Dhananjay mobile number) ತೆಗೆದುಕೊಂಡಿದ್ದಾರೆ, ನನ್ನದೊಂದು ನಂಬರ್ ಇದೆ. ಅದು ಎಲ್ಲರೊಂದಿಗೂ ಇದೆ. ನನ್ನ ಫೋಟೋ ತೆಗೆದುಕೊಂಡು, ನನಗೆ ವಾಟ್ಸಪ್‌ನಲ್ಲಿ ಮೆಸೇಜ್ ಕಳುಹಿಸಿರುತ್ತಾರೆ. ಟೀ ಅಂಗಡಿಗೆ ಹೋಗಿ ಕೇಳಿದರೂ ನನ್ನ ನಂಬರ್ ಕೊಡ್ತಾರೆ ಈಗ,' ಎಂದು ಧನಂಜಯ್ ಹೇಳಿದ್ದಾರೆ.

ಕೆಲವರು ನನ್ನನ್ನ Unlucky ಅಂದ್ರೂ ಶಿವಣ್ಣ ಮಾತ್ರ ಲಕ್ಕಿ ಅಂತಾರೆ: ಡಾಲಿ ಧನಂಜಯ್

ಟೈಟಲ್ ಆಯ್ಕೆ:
'ಟೈಟಲ್ ಬಡವ ರಾಸ್ಕಲ್ ಅಂತ ಅಯ್ಕೆ ಮಾಡಿದ್ದೇಕೆ ಅಂದ್ರೆ ಡಾ. ರಾಜ್‌ಕುಮಾರ್ (Dr. Rajkumar) ಅಣ್ಣಾವ್ರ ಬಾಯಲ್ಲಿ ಅಷ್ಟು ಚೆನ್ನಾಗಿ ಕೇಳಿಸುತ್ತಿದ್ದು ಈ ಪದಗಳು. ಅವು ಮನೆ ಮನೆಗೂ ತಲುಪಿತ್ತು. ಸಿನಿಮಾದಲ್ಲಿ ಆ ಪಾತ್ರಕ್ಕೆ ಸೂಟ್ ಆಯ್ತು. ತುಂಬಾ ಪ್ರೀತಿಯಿಂದಲೂ ಆ ರೀತಿ ಕರೆಯುತ್ತಾರೆ. ತೆಲುಗು ತಮಿಳಿನಲ್ಲಿ ಕೂಡ ಅದೇ ಅರ್ಥದಲ್ಲಿ ಕರೆಯುತ್ತಾರೆ. ಮುದ್ದಾದ ಬೈಗುಳ ಅಂತ ಅಲ್ಲಿನ ಜನರು ಹೇಳಿದ್ದರು. ನಾನು ವಿಲನ್ ಆಗಿ ಮಾಡಿಕೊಂಡು ಬಂದು, ಒಳ್ಳೆಯ ಹುಡುಗ ಟೈಟಲ್ ಇಡುವುದಕ್ಕೆ ಆಗುವುದಿಲ್ಲ ಅದಕ್ಕೆ ಈ ಟೈಟಲ್ ಕೊಟ್ಟೆ,' ಎಂದು ಡಾಲಿ ಹೇಳಿದ್ದಾರೆ.