ಡಾಲಿ ಧನಂಜಯ್‌ ಅಭಿನಯದ ಬಹುನಿರೀಕ್ಷಿತ 'ಬಡವ ರಾಸ್ಕಲ್‌' ಚಿತ್ರ ತೆರೆಗೆ ಬರಲು ಸಜ್ಜಾಗಿದ್ದು, ಇದೀಗ ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. 

‘ಬಡವ ರಾಸ್ಕಲ್‌ ಮಿಡಲ್‌ ಕ್ಲಾಸ್‌ ಮಾಸ್‌ ಎಂಟರ್‌ಟೈನರ್‌. ಮಿಡಲ್‌ ಕ್ಲಾಸ್‌ ಮಕ್ಕಳಿಗೆ ತಂದೆ ತಾಯಿನೇ ಹೀರೋ ಹೀರೋಯಿನ್‌. ಇಂಥಾ ಪ್ರತೀ ಹುಡುಗನ ಲೈಫಲ್ಲೂ ಎಜುಕೇಶನ್‌ ಮುಗಿಸಿದ, ಕೆಲಸ ಇನ್ನೂ ಸಿಗದ ಪೇಸ್‌ ಬಹಳ ಚಾಲೆಂಜಿಂಗ್‌. ಆ ಸೂಕ್ಷ್ಮ ಎಳೆಯಿಟ್ಟುಕೊಂಡು ಮಾಡಿದ ಚಿತ್ರವಿದು. ನಗಿಸುವ, ಕಣ್ಣಂಚು ಒದ್ದೆ ಮಾಡೋ ಈ ಸಿನಿಮಾವನ್ನು ಗೆಳೆಯರನ್ನು ಬೆಳೆಸಿ ನಾನೂ ಬೆಳೆಯಬೇಕು ಅಂತ ಮಾಡಿದ್ದು. ಬಡವ ರಾಸ್ಕಲ್‌ ನಮ್ಮನ್ನೆಲ್ಲ ಬೆಳೆಸುವ ಚಿತ್ರವಾಗಲಿ’ ಎಂದು ಹೇಳಿದ್ದು ಬಡವ ರಾಸ್ಕಲ್‌ ಚಿತ್ರದ ಹೀರೋ ಕಂ ನಿರ್ಮಾಪಕ ಡಾಲಿ ಧನಂಜಯ.

ಈ ಚಿತ್ರದ ಟ್ರೈಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಿತ್ರದ ಟ್ರೇಲರ್‌ ಆನಂದ್‌ ಆಡಿಯೋ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆ ಆಗಿದೆ.

ನಿರ್ದೇಶಕ ಶಂಕರ್‌ ಅವರು ಮನೆಯಲ್ಲಿ ಕಷ್ಟವಿದ್ದ ಕಾರಣ 10ನೇ ಕ್ಲಾಸ್‌ ಮುಗಿದೊಡನೆ ಕೊರಿಯರ್‌ ಬಾಯ್‌ ಆದರು. ಈವ್ನಿಂಗ್‌ ಕಾಲೇಜಲ್ಲಿ ಓದುತ್ತಿದ್ದರು. ಅವರ ಸ್ಕಿ್ರಪ್ಟ್‌ ನನಗೆ ಬಹಳ ಇಷ್ಟ. ಮಧ್ಯಮ ವರ್ಗದ ಬದುಕಿನ ಅನುಭವಗಳನ್ನು ಈ ಚಿತ್ರದಲ್ಲಿ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.- ಧನಂಜಯ್‌

‘ನಿರ್ದೇಶಕರು ಈ ಕತೆ ಹೇಳಿದಾಗ ಬಹಳ ಸೂಕ್ಷ್ಮವಾದದ್ದು ಅನಿಸಿತು. ಇದನ್ನು ಹೊರಗಿನ ನಿರ್ಮಾಪಕರು ಅರ್ಥ ಮಾಡಿಕೊಳ್ಳೋದು ಕಷ್ಟ. ಹೀಗಾಗಿ ಸುಮ್ಮನೆ ಒಳ್ಳೆಯ ಸಿನಿಮಾಕ್ಕೆ ಅನ್ಯಾಯ ಆಗುವುದು ಬೇಡ ಅಂತ ನಿರ್ಮಾಣಕ್ಕೂ ಮುಂದಾದೆ. ಸಿನಿಮಾ ಬ್ಯುಸಿನೆಸ್‌ ಕೂಡ ಆಗಿರುವ ಕಾರಣ ರಿಸ್ಕ್‌ ತಗೊಳ್ಳೋದು ಅನಿವಾರ್ಯ’ ಎಂದೂ ಧನಂಜಯ ಹೇಳಿದರು.

ನಿರ್ದೇಶಕ ಶಂಕರ್‌, ‘ಕಲಿಕೆ ಮುಗಿಸಿ ಏನೋ ಮಾಡಬೇಕು ಅನ್ನೋ ಹುಮ್ಮಸ್ಸಿನಲ್ಲಿರುವ ಹುಡುಗರ ಕತೆ. ಇನ್ನೊಂಥರದಲ್ಲಿ ಗೆಳೆಯರಿಗಾಗಿ ಗೆಳೆಯರೇ ಮಾಡಿದ ಗೆಳೆತನದ ಚಿತ್ರ. ಧನಂಜಯ ಹಾಗೂ ಗೆಳೆಯರೆಲ್ಲರನ್ನೂ ಹತ್ತು ವರ್ಷಗಳಿಂದ ಹತ್ತಿರದಿಂದ ನೋಡಿರುವ ಕಾರಣ ಇವರಿಗಾಗಿಯೇ ಕತೆ ಬರೆದೆ’ ಎಂದರು.

Dhananjay: ಡಾಲಿಯ 'ಬಡವ ರಾಸ್ಕಲ್' ಚಿತ್ರಕ್ಕೆ ವಿಭಿನ್ನ ರೀತಿಯ ಪ್ರಚಾರ

ನಾಯಕಿ ಅಮೃತಾ ಅಯ್ಯಂಗಾರ್‌, ಸ್ಪರ್ಶ ರೇಖಾ, ರಂಗಾಯಣ ರಘು, ನಾಗಭೂಷಣ, ಸಿನಿಮಾಟೋಗ್ರಾಫರ್‌ ಪ್ರೀತಾ ಜಯರಾಮನ್‌, ಸಂಗೀತ ನಿರ್ದೇಶಕ ವಾಸುಕಿ ವೈಭವ ಹಾಗೂ ಚಿತ್ರತಂಡದವರು ಹಾಜರಿದ್ದರು.

'ಬಡವ ರಾಸ್ಕಲ್‌' ಚಿತ್ರವು ದೇ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿದೆ. ವಿಶೇಷವಾಗಿ ಈ ಚಿತ್ರದ ಪ್ರಚಾರಕ್ಕಾಗಿ ಚಿತ್ರತಂಡವು ಜನಸಾಮಾನ್ಯರನ್ನೇ ಬಳಸಿಕೊಂಡು ವಿಭಿನ್ನವಾಗಿ ಹೆಜ್ಜೆ ಇಟ್ಟಿದೆ. ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಎಳನೀರು ಗಾಡಿ, ಕಾರು ಗ್ಯಾರೇಜ್, ಬಿರಿಯಾನಿ ಹೋಟೆಲ್‌, ಆಟೋ ಚಾಲಕರವರೆಗೂ ಸೇರಿದಂತೆ ಹೀಗೆ ಎಲ್ಲೆಂದರಲ್ಲಿ ಇದೀಗ 'ಬಡವ ರಾಸ್ಕಲ್‌' ಪ್ರೊಮೋಷನ್ಸ್‌ ನಡೆಯುತ್ತಿದೆ. 'ಡಿ.24ಕ್ಕೆ ಬಡವ ರಾಸ್ಕಲ್‌' ಎನ್ನುವ ಸ್ಲೇಟ್‌ ಫಲಕ ಎಲ್ಲೆಡೆ ರಾರಾಜಿಸುತ್ತಿದೆ. 

YouTube video player