ಅದ್ಧೂರಿಯಾಗಿ ವಿವಾಹ ವಾರ್ಷಿಕೋತ್ಸವ ಮಾಡಿಕೊಂಡ ದರ್ಶನ್- ವಿಜಯಲಕ್ಷ್ಮಿ. ಕರ್ಮ ರಿಟರ್ನ್ಸ್‌ ವಿಡಿಯೋ ಹಾಕಿದ ಪವಿತ್ರಾ..... 

ಕನ್ನಡದ ನಟ ದರ್ಶನ್ ಮತ್ತು ಪತ್ನಿ ವಿಜಯ ಲಕ್ಷ್ಮಿ ಕೆಲವು ದಿನಗಳ ಹಿಂದೆ ಅದ್ಧೂರಿಯಾಗಿ ವೆಡ್ಡಿಂಗ್ ಆನಿವರ್ಸರಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಪೋಸ್ಟ್‌ ಹಾಕದೇ ಪ್ರೈವೇಟ್ ಆಗಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳ ಪೇಜ್‌ನಲ್ಲಿ ಅಲ್ಲೊಂದು ಇಲ್ಲೊಂದು ಫೋಟೋ ನೋಡಬಹುದು. ಹ್ಯಾಪಿ ಫ್ಯಾಮಿಲಿಗಳ ನಡುವೆ ಹ್ಯಾಪಿ ಸೆಲೆಬ್ರೇಷನ್‌ ನಡೆಯುತ್ತಿದೆ, ಇದೇ ಸಮಯಕ್ಕೆ ಪವಿತ್ರಾ ಗೌಡ ಕರ್ಮ್‌ ರಿಟರ್ನ್‌ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. 

ಹೌದು! ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರಾ ಗೌಡ ನಡುವೆ ಇರುವ ಮನಸ್ಥಾಪ ಹಾಗೂ ಕೋಲ್ಡ್‌ ವಾರ್‌ ಎಲ್ಲರಿಗೂ ಗೊತ್ತಿದೆ. ಕೆಲವು ದಿನಗಳಿಂದ ಮಗಳ ಜೊತೆ ಕಾಶ್ಮೀರದಲ್ಲಿ ಇರುವ ಪವಿತ್ರಾ ಗೌಡ ಇದ್ದಕ್ಕಿದ್ದಂತೆ ದರ್ಶನ್ ಹಳೆ ವಿಡಿಯೋ ಒಂದು ಶೇರ್ ಮಾಡಿಕೊಂಡಿದ್ದಾರೆ. ಅದೇ ಕರ್ಮ ರಿಟರ್ಸನ್‌. 'ಕರ್ಮ ಅನ್ನೋದು ಬ್ಯಾಗೇಜ್‌ ರೀತಿ. ನಾವು ಏನು ಮಾಡುತ್ತೀವಿ ಅದು ನಮಗೆ ರಿಟರ್ನ್‌ ಆಗುತ್ತದೆ ಅಂತ. ನಾವು ಸಣ್ಣವರು ಇದ್ದಾಗ ಅಜ್ಜಿ ತಾತ ಹೇಳುತ್ತಿದ್ದರು ಈಗ ನೀನು ಮಾಡುತ್ತಿರುವೆ ಮುಂದಿನ ಜನ್ಮದಲ್ಲಿ ಇರುತ್ತೆ ನಿನಗೆ ಅಂತ ಆದರೆ ಈಗ ಹಾಗಲ್ಲ...ಅಲ್ಲೇ ಡ್ರಾ ಅಲ್ಲೇ ಬಹುದುಮಾನ' ಎಂದು ದರ್ಶನ್ ವಿಡಿಯೋದಲ್ಲಿ ಹೇಳಿದ್ದಾರೆ. 

ದರ್ಶನ್-ಅತ್ತಿಗೆ ಜಗಳದಿಂದ ರಿಲೀಸ್‌ಗೆ ಭಯ ಆಗಿತ್ತು; ಸಾರಥಿ ಯಶಸ್ಸಿನ ಗುಟ್ಟು ಬಿಚ್ಚಿಟ್ಟ ದಿನಕರ್ ತೂಗುದೀಪ

ಕೆಲವು ತಿಂಗಳ ಹಿಂದೆ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ಸೋಷಿಯಲ್ ಮೀಡಿಯಾ ವಾರ್ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಆದರೆ ದರ್ಶನ್ ಅಭಿಮಾನಿಗಳು ಮಾತ್ರ ನಾವು ಅತ್ತಿಗೆಗೆ ಸಪೋರ್ಟ್ ಮಾಡುವುದು ಎಂದು ಬಿಟ್ಟರು. ಈ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಇಂದು ಇವಳಿರ್ತಾಳೆ ನಾಳೆ ಅವಳಿರ್ತಾಳೆ ಎನ್ನುವ ಹೇಳಿಕೆ ಕೊಟ್ಟು ಸುಮ್ಮನಾಗಿಬಿಟ್ಟರು. ವಿಚಾರ ಅಲ್ಲಿಗೆ ನಿಂತಿತ್ತು ಕೂಡ ಆದರೆ ಈಗ ಇವರಿಬ್ಬರ ಅನಿವರ್ಸರಿ ದಿನ ಪೋಸ್ಟ್ ಮಾಡಿದ್ದು ತಪ್ಪು ಎಂದು ಪವಿತ್ರಾ ವಿರುದ್ಧ ಅಭಿಮಾನಿಗಳು ಗರಂ ಆಗಿದ್ದಾರೆ. 

ಟ್ರಾವಲ್ ಫ್ರೀ ಆಗಿರುವ ವಿಜಯಲಕ್ಷ್ಮಿ ಕೆಲವು ದಿನಗಳ ಹಿಂದೆ ಮಗನ ಜೊತೆ ವಿದೇಶ ಪ್ರವಾಸ ಮಾಡಿದ್ದರು. ಅದಾದ ಮೇಲೆ ಪತಿ ದರ್ಶನ್ ಮತ್ತು ಆಪ್ತ ಸ್ನೇಹಿತರ ಜೊತೆ ಅನಿವರ್ಸರಿ ಆಚರಿಸಿಕೊಂಡಿದ್ದಾರೆ. ಇತ್ತೀಚಿಗೆ ಏನೇ ಕಾರ್ಯಕ್ರಮ ಇರಲಿ, ಆಚರಣೆ ಇರಲಿ ಅಥವಾ ಸುಮ್ಮನೆ ಪ್ರಯಾಣ ಮಾಡಿದರೂ ದರ್ಶನ್ ಮತ್ತು ವಿಜಯಲಕ್ಷ್ಮಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.