Asianet Suvarna News Asianet Suvarna News

ವೈದ್ಯರ ಎಡವಟ್ಟಿನಿಂದ ತಂದೆ ಸಾವು; ನಿಗೂಢ ಸತ್ಯ ಬಿಚ್ಚಿಟ್ಟ ನಟ ದರ್ಶನ್

 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ನಟ ದರ್ಶನ್ ಹಳೆ ವಿಡಿಯೋಗಳು. ವೈದ್ಯರು ನಿರ್ಲಕ್ಷ್ಯಯಿಂದ ಏನಾಯ್ತು?

Kannada actor Darshan talks about father health and doctor treatment vcs
Author
First Published Nov 6, 2023, 10:12 AM IST | Last Updated Nov 6, 2023, 10:13 AM IST

ಲೈಟ್ ಬಾಯ್ ಆಗಿ ಚಿತ್ರರಂಗಕ್ಕೆ ಪ್ರವೇಶಿಸಿ ಈಗ ಸ್ಯಾಂಡಲ್‌ವುಡ್‌ ಸೂಪರ್ ಸ್ಟಾರ್ ಚಾಲೆಂಜಿಂಗ್ ಸ್ಟಾರ್ ಅಗಿ ಬೆಳೆದಿರುವ ನಟ ದರ್ಶನ್ ಹಳೆಯ ವಿಡಿಯೋ ಸೊಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದಿವಂಗತ ನಟ ತೂಗುದೀಪ ಶ್ರೀನಿವಾಸ್ ಆರೋಗ್ಯ ಸಮಸ್ಯೆ ಹಾಗೂ ವೈದ್ಯರು ಮಾಡಿದ ಎವಟ್ಟಿನಿಂದ ಏನಾಯ್ತು ಎಂದು ಬೇಸರ ತೋಡಿಕೊಂಡಿದ್ದಾರೆ.

ಸುಮಾರು ಏಳೆಂಟು ವರ್ಷಗಳ ಹಿಂದೆ ಪುಟ್ಟ ಅಭಿಮಾನಿಯೊಬ್ಬ ದರ್ಶನ್‌ರನ್ನು ಭೇಟಿ ಮಾಡಿ ವೈದ್ಯರ ನಿರ್ಲಕ್ಷ್ಯಯಿಂದ ತಮ್ಮ ಮಗನಿಗೆ ಆರೋಗ್ಯ ಸಮಸ್ಯೆ ಆಗಿದೆ ಎಂದು ನೋವು ತೋಡಿಕೊಂಡರು. ಆಗ ದರ್ಶನ್‌ ತಮ್ಮ ತಂದೆ ವಿಚಾರ ನೆನಪಿಸಿಕೊಂಡಿದ್ದಾರೆ.

ಡ್ರೋನ್ ಪ್ರತಾಪ್ ಬೇಜಾನ್ ಕೊಬ್ಬು ತೋರಿಸ್ತಾ ಇದ್ದಾನೆ ಇಷ್ಟ್ರಲ್ಲೇ ಕೊಡ್ತೀನಿ; ಹೊಡೆಯುವ ಪ್ಲ್ಯಾನ್‌ನಲ್ಲಿದ್ರಾ ರಕ್ಷಕ್?

'ನಮ್ಮ ತಂದೆ ವಿಚಾರವನ್ನೇ ಹೇಳ್ತೀನಿ ಕೇಳಿ. ಅವರಿಗೆ ಕಿಡ್ನಿ ಸಮಸ್ಯೆ ಇರಲಿಲ್ಲ. ಹಾರ್ಟ್ ಆಪರೇಷನ್ ಅಂತ ಬೆಂಗಳೂರಿಗೆ ಕರ್ಕೊಂಡು ಹೋದರು. ಹಾರ್ಟ್ ಅಲ್ಲಿ ಏನೋ ಬ್ಲಾಕ್ ಇದೆ ಅಂತ ಅವರಿಗೆ ಹೆಚ್ಚು ಕಮ್ಮಿ 30 ವರ್ಷ ಡಯಾಬಿಟೀಸ್ ಇತ್ತು. ದೇಹದ ಒಳಗೆ ಒಂದು ಡೈಸ್ ಹಾಕುತ್ತಾರೆ. ಕ್ಯಾಮೆರಾ ಕಳಿಸೋಕೆ ಅದನ್ನು ಹಾಕುತ್ತಾರೆ. ಆ ಡೈ ಸೀದಾ ಹೋಗಿ ನಮ್ಮ ತಂದೆಯ ಕಿಡ್ನಿ ಮೇಲೆ ಕೂತಿತ್ತು. ಕಿಡ್ನಿ ಇದ್ದಕ್ಕಿದ್ದಂತೆ ಮುದುಡಿಕೊಂಡುಬಿಟ್ಟಿತ್ತು. ಅಷ್ಟೇ. ನಾವು ತೋರಿಸೋಕೆ ಹೋಗಿದ್ದೇ ಏನೋ. ಈ ಟ್ರೈನಿ ಡಾಕ್ಟರ್‌ಗಳನ್ನು ಬಿಡ್ತಾರೆ. ಯಾರೋ ಕಲಿತ್ತಿರ್ತಾರೆ. ಜೊತೆಗೆ ಒಬ್ಬ ಡಾಕ್ಟರ್ ನಿಂತುಕೊಳ್ಳಲ್ಲ. ವೈದ್ಯರ ನಿರ್ಲಕ್ಷ್ಯಯಿಂದ ಹೀಗೆ ಆಗುತ್ತದೆ' ಎಂದು ದರ್ಶನ ಬೇಸರ ಮಾಡಿಕೊಂಡಿದ್ದರು. ಈ ವಿಚಾರವನ್ನು ಕನ್ನಡದ ವೆಬ್‌ ಪೋರ್ಟಲ್ ಸುದ್ದಿ ಮಾಡಿದೆ.

'ಈ ಆಸ್ಪತ್ರೆಗಳಲ್ಲಿ ಏನಾಗುತ್ತೆ? ಪ್ರಾಕ್ಟೀಸ್‌ಗೆ ಅಂತ ಬರ್ತಾರೆ. ನುರಿತ ವೈದ್ಯರು ಮುಂದೆ ನಿಂತು ಅವರಿಗೆ ಹೇಳಿಕೊಡಲ್ಲ. ಜನ ಇವತ್ತು ಕಷ್ಟಪಟ್ಟು ಯಾರೂ ಉದ್ಧಾರ ಆಗುತ್ತಿಲ್ಲ. ಇಲ್ಲ ಸ್ಕೂಲ್ ಕಟ್ಟಿಸಬೇಕು. ಇಲ್ಲ ಆಸ್ಪತ್ರೆ ಕಟ್ಟಿಸಬೇಕು ಅಥವಾ ದೇವಸ್ಥಾನ ಕಟ್ಟಿಸಬೇಕು. ಈ ಮೂರರಲ್ಲೇ ದುಡ್ಡು ಇರೋದು. ಇನ್ನು ಯಾವವುದರಲ್ಲೂ ಇಲ್ಲ' ಎಂದು ದರ್ಶನ್ ಹೇಳಿದ್ದರೆ.

ರಾಣಿಬೆನ್ನೂರಿನಲ್ಲಿ D-ಬಾಸ್; ಅಬ್ಬಬ್ಬಾ!!! ಗರಡಿ ಟ್ರೇಲರ್ ಲಾಂಚ್‌ನಲ್ಲಿ ಏನಾಯ್ತು ನೋಡಿ

'ನಾನು ಹುಟ್ಟಿದ ಬಳಿಕ 17 ವರ್ಷಗಳಲ್ಲಿ ಅಬ್ಬಬ್ಬಾ ಅಂದರೆ ಒಂದು ವರ್ಷ ಹೆಚ್ಚು ಸಮಯ ಅವರೊಟ್ಟಿಗೆ ಕೆಳೆದಿರಬಹುದು. ಉಳಿದಂತೆ ಸದಾ ಅವರು ಸಿನಿಮಾ ಶೂಟಿಂಗ್ ಅಂತ ಬೆಂಗಳೂರಿನಲ್ಲಿ ಇರುತ್ತಿದ್ದರು. ತಿಂಗಳಿಗೆ ಅಬ್ಬಬ್ಬಾ ಅಂದರೆ ಎರಡ್ಮೂರು ದಿನ ಮೈಸೂರಿಗೆ ಬರುತ್ತಿದ್ದರು. ನಾವು ಬೆಳಗ್ಗೆ ಪೋನ್‌ನಲ್ಲಿ ಮಾತನಾಡುತ್ತಿದ್ದರು. ಏನಾದರೂ ಬೇಕಿದ್ದರೆ ಹೇಲಿ ಅಮ್ಮನ ಬಳಿ ಅನುಮತಿ ಪಡೆದುಕೊಳ್ಳುತ್ತಿದ್ದೆವು ಅಷ್ಟೆ. ಆದರೆ ಆರೋಗ್ಯ ಸಮಸ್ಯೆ ಆಗಿ ಒಂದು ವರ್ಷ ಮನೆಯಲ್ಲಿದ್ದರು. ಆ ಒಂದು ವರ್ಷ ತಂದೆಯವರೊಟ್ಟಿಗೆ ಒಡನಾಟ ಹೆಚ್ಚಾಗಿತ್ತು' ಎಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ದರ್ಶನ್ ಹೇಳಿದ್ದರು. 

Latest Videos
Follow Us:
Download App:
  • android
  • ios