ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಒಡೆಯ' ಚಿತ್ರ ರಾಜ್ಯದಾದ್ಯಂತ  ತೆರೆ ಕಂಡು ಎಲ್ಲ ಚಿತ್ರಮಂದಿರಗಳು ಹೌಸ್ ಫುಲ್ ಆಗಿದೆ. ಈ ವೇಳೆ ದರ್ಶನ್ ತಾಯಿ ಮತ್ತು ಅಕ್ಕನ ಮಗ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ್ದಾರೆ. 

ಇಂದು ದರ್ಶನೋತ್ಸವ;ಒಡೆಯ ಪಕ್ಕಾ ಕಮರ್ಷಿಯಲ್‌ ಸಿನಿಮಾ!

'ಒಡೆಯ' ಚಿತ್ರ  ತಮಿಳು 'ವೀರಂ' ಚಿತ್ರದ ರಿಮೇಕ್ ಎನ್ನಲಾಗಿದೆ ಅಷ್ಟೇ. ಅಲ್ಲದೆ ಕೆಲ ಮೂಲಗಳ ಪ್ರಕಾರ 3 ಕೋಟಿ  ಕಲೆಕ್ಷನ್ ಮಾಡಿದೆ. ಇನ್ನು ಚಿತ್ರದ ನಾಯಕಿ ಆಯ್ಕೆ ಮಾಡುವುದರ ಬಗ್ಗೆ ದರ್ಶನ್ ತಾಯಿ ಅವರದು ಮುಖ್ಯ ಪಾತ್ರವಿದೆ. 

ವೀನಾ ತೂಗುದೀಪ್ ಅವರ ಸ್ನೇಹಿತೆ ಮಗಳಾಗಿರುವ ಸನಾ ತಿಮ್ಮಯ್ಯ ಅವರು ದರ್ಶನ್ ಜೊತೆ ಅಭಿನಯಿಸಬೇಕು ಹಾಗೂ ಇದು ಆಕೆಯ ಮೊದಲ ಚಿತ್ರವಾಗಬೇಕು ಎಂದು ನಿರ್ಧರಿಸಿ ಸಂದೇಶ್ ಅವರ ಬಳಿ ಮಾತನಾಡಿ ಅವಕಾಶ ಕೊಡಿಸಿದರಂತೆ!  

ದರ್ಶನ್ ಬಗ್ಗೆ ಈ ರೀತಿ ಹೇಳಿದ್ರಾ 'ಒಡೆಯ' ನಟಿ?

ಆ್ಯಕ್ಷನ್, ಕಾಮಿಡಿ, ಲವ್ ಎಲ್ಲಾ ಸೇರಿ ಪ್ರೇಕ್ಷಕರನ್ನು ಮನರಂಜಿಸುತ್ತಿರುವ ಒಡೆಯ ಮತ್ತೊಮ್ಮೆ  ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದರಲ್ಲಿ ಅನುಮಾನವಿಲ್ಲ.