ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್‌ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಫ್ಯಾನ್ ಒಬ್ರಾ, ಇಬ್ರಾ? ಫ್ಯಾನ್ಸ್ ಕಹಾ ಹೇ ಅಂದ್ರೆ ಊರ್ತುಂಬಾ ಹೇ! ಅನ್ನೋಕೆ ಇವರೇ ಸಾಕ್ಷಿ ನೋಡಿ. ದರ್ಶನ್‌ ಅಪ್ಪಟ ಅಭಿಮಾನಿ ಮನೆ ಕಟ್ಟುತ್ತಿದ್ದು, ಮನೆಗೆ ಇಟ್ಟ ಹೆಸರು ಕೇಳಿ ದರ್ಶನ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಮನೆಗೆ ವಿಶೇಷವಾಗಿ ಹೆಸರಿಟ್ಟ ಅಭಿಮಾನಿ ಯಾರು? ಯಾವ ಊರು ಎಂಬ ಮಾಹಿತಿ ಇಲ್ಲವಾದರೂ ಫೋಟೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರಲ್ಲಿ ಗೃಹ ನಿರ್ಮಾಣಕ್ಕೆ ಕೈ ಹಾಕಿರುವ ಅಭಿಮಾನಿ ಮರದ ದಿಬ್ಬದ ಮೇಲೆ ನಿಂತು ಪೋಸ್ ನೀಡಿದ್ದಾರೆ.  ಈ ಹಿಂದೆ ಚಿತ್ರದುರ್ಗದಲ್ಲಿ ಯೋಗಿ ಎಂಬ ದರ್ಶನ್ ಅಭಿಮಾನಿ 2018ರಲ್ಲಿ ತಮ್ಮ ನಿವಾಸಕ್ಕೆ 'ಚಾಲೆಂಜಿಂಗ್' ಎಂದು ಹೆಸರಿಟ್ಟಿದ್ದರು. ಒಂದು  ಅಂತಸ್ತಿನ ಮನೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ದರ್ಶನ್ ಟ್ರೆಂಡಿಂಗ್:
ಪ್ರಾಣಿ, ಪಕ್ಷಿ ಹಾಗೂ ಅಭಿಮಾನಿಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ ಡಿ-ಬಾಸ್ ಏನೇ ಮಾಡಿದರೂ ಟ್ರೆಂಡ್‌ ಆಗುತ್ತಾರೆ, ಎಂಬುದಕ್ಕೆ ಇಲ್ಲಿದೆ ಅನೇಕ ಉದಾಹರಣೆಗಳು. ಲಾಕ್‌ಡೌನ್‌ ಪ್ರಾರಂಭದಲ್ಲಿಯೇ ಫಾರ್ಮ್‌ಹೌಸ್‌ ಕಡೆ ಮುಖ ಮಾಡಿದ ದರ್ಶನ್ ತಮ್ಮ ಹಸು,ಕುದುರೆ ಹಾಗೂ ಹೈನುಗಾರಿಕೆ ಮಾಡಿಕೊಂಡು ಬ್ಯುಸಿಯಾದರು. ಅವರ ಅಭಿಮಾನಿಗಳೂ ದಾಸನ ಕೆಲಸಗಳನ್ನು ನೋಡಿ ತಮ್ಮ ಊರಿನಲ್ಲಿ ಪ್ರಾಣಿ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು.

ಇನ್ನು ರಿಲೀಸ್ ಆಗುತ್ತಿರುವ ರಾಬರ್ಟ್ ಸಿನಿಮಾ ಹಂತ ಹಂತವಾಗಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ. ಕೊರೋನಾ ವೈರಸ್‌ನಿಂದ ಜನರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಸಮಯದಲ್ಲಿ ಡಿ-ಬಾಸ್ ಅಭಿಮಾನಿಗಳು ಉಚಿತವಾಗಿ 'ರಾಬರ್ಟ್' ಚಿತ್ರದ ಹೆಸರಿನ ಮಾಸ್ಕ್‌ ಮಾರಿದ್ದರು. 

ರಾಜ್‌ಕುಮಾರ್‌ ನಂತರ ಹೆಚ್ಚಿನ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ದರ್ಶನ್! 

ಇತ್ತೀಚಿಗೆ ಧಾರಾವಾಡ ಮಾಜಿ ಸಚಿವ ವಿನಯ್ ಕುಲಕರ್ಣಿ ನಿವಾಸಕ್ಕೆ ಭೇಟಿ ನೀಡಿದ ದರ್ಶನ್‌ ಚಕ್ಕಡಿ ಓಡಿಸಿ ಸಂಭ್ರಮಿಸಿದ್ದರು. ಅವರಂತೇ ಅಭಿಮಾನಿಗಳು ಚಕ್ಕಡಿ ಓಡಿಸಿ ವಿಡಿಯೋ ಮಾಡಿ ದರ್ಶನ್‌ನನ್ನು ಟ್ಯಾಗ್ ಮಾಡಿದ್ದಾರೆ. ಒಟ್ಟಿನಲ್ಲಿ ಚಿತ್ರರಂಗದಲ್ಲಿ ದರ್ಶನ್‌ಗೆ ಇರುವ ಫ್ಯಾನ್‌ ಕ್ರೇಜ್ ಅನ್ನು ಯಾರೂ ಮೀರಿಸಲು ಸಾಧ್ಯವಾಗುವುದಿಲ್ಲ.

"