Asianet Suvarna News Asianet Suvarna News

ನಟಿ ಪವಿತ್ರಾ ಗೌಡ ಮಗಳ ಬರ್ತಡೇಯಲ್ಲಿ ದರ್ಶನ್; ಡ್ಯಾನ್ಸ್‌ ವಿಡಿಯೋ ವೈರಲ್!

ನಟಿ ಪವಿತ್ರಾ ಗೌಡ ಮಗಳ ಜೊತೆ ಡ್ಯಾನ್ಸ್ ಮಾಡಿದ ದಾಸ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್....

Kannada actor Darshan celebrates Pavitra Gowda daughter birthday vcs
Author
First Published Nov 8, 2023, 12:14 PM IST

ಕನ್ನಡ ಚಿತ್ರರಂಗದ ಜಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ಕಾಟೇರ ಸಿನಿಮಾ ಚಿತ್ರೀಕರಣದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ತೋಟದ ಮನೆ, ಸ್ನೇಹಿತರ ಜೊತೆ ಸುತ್ತಾಟ ಹಾಗೂ ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಹುಲಿ ಉಗುರು ವಿಚಾರವಾಗಿ ಹಾಗೂ ಮಹಿಳೆಯೊಬ್ಬರಿಗೆ ತಮ್ಮ ಪ್ರೀತಿಯ ನಾಯಿ ಕಚ್ಚಿದ ವಿಚಾರವಾಗಿ ದರ್ಶನ್ ಸುದ್ದಿಯಲ್ಲಿದ್ದರು. ಆದರೆ ಈಗ ಕೂಲ್ ವಿಡಿಯೋ ಒಂದು ವೈರಲ್ ಆಗುತ್ತಿದೆ. 

ಹೌದು! ನಟಿ ಪವಿತ್ರಾ ಗೌಡ ಅವರ ಮುದ್ದಿನ ಮಗಳ ಬರ್ತಡೇಯಲ್ಲಿ ದರ್ಶನ್ ಭಾಗಿಯಾಗಿದ್ದರು. ಅತಿ ದೊಡ್ಡ ಹೂ ಗುಚ್ಛ ಕೊಟ್ಟಿದ್ದಾರೆ. ಆನಂತರ ಒಟ್ಟಿಗೆ ಎರಡು ಕೇಕ್‌ಗಳನ್ನು ಕಟ್ ಮಾಡಿದ್ದಾರೆ. ಅದಾದ ಮೇಲೆ ಇಬ್ಬರು ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾರೆ. ಹ್ಯಾಪಿ ಬರ್ತಡೇ ಬ್ಯೂಟಿಫುಲ್ ಎಂದು ಕ್ಯಾಪ್ಶನ್ ಬರೆದು ದರ್ಶನ್‌ರನ್ನು ಟ್ಯಾಗ್ ಮಾಡಿದ್ದಾರೆ ಪವಿತ್ರಾ. ಪವಿತ್ರಾ ಗೌಡ ಅವರ ಪುತ್ರಿ ಖುಷಿಗೆ ಚಿತ್ರರಂಗ ಅನೇಕ ನಟ-ನಟಿಯರು ವಿಶ್ ಮಾಡಿದ್ದಾರೆ. ಅಲ್ಲದೆ ದಾಸ ಖುಷಿಯಾಗಿರುವುದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ.

ಇದ್ದಕ್ಕಿದ್ದಂತೆ ಸ್ಯಾಂಡಲ್‌ವುಡ್‌ನಿಂದ ಮರೆಯಾದ ಈ ಚೆಲುವೆ ಈಗೇನ್‌ ಮಾಡ್ತಿದ್ದಾರೆ?

ಕೆಲವು ದಿನಗಳ ಹಿಂದೆ ದರ್ಶನ್ 57ನೇ ಸಿನಿಮಾ ಮುಹೂರ್ತ ಅದ್ಧೂರಿಯಾಗಿ ನಡೆಯಿತ್ತು. ದೊಡ್ಡ ಗಣಪತಿಇ ದೇವಸ್ಥಾನದಲ್ಲಿ ಪೂಜೆ ಅದ್ಧೂರಿಯಾಗಿ ನೆರೆವೇರಿಸಿ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಚಿತ್ರಕ್ಕೆ ಡೆವಿಲ- ದಿ ಹೀರೋ ಅನ್ನೋ ಟೈಟಲ್ ಕೊಡ ಕೊಟ್ಟಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದ್ದು ಇನ್ನಿತ್ತರ ಮಾಹಿತಿ ರಿವೀಲ್ ಮಾಡಿಲ್ಲ. ಸದ್ಯ ಕಾಟೇರ ಸಿನಿಮಾ ರಿಲೀಸ್‌ಗೆ ಫ್ಯಾನ್ಸ್ ಕಾಯುತ್ತಿದ್ದಾರೆ.

 

Follow Us:
Download App:
  • android
  • ios