ನಟ ಡಾರ್ಲಿಂಗ್ ಕೃಷ್ಣ ತಂದೆಗೆ ಸರ್‌ಪ್ರೈಸ್ ಉಡುಗೊರೆ ನೀಡಿದ್ದಾರೆ. ಭಾವುಕರಾದ ಕೃಷ್ಣ ಫೋಟೋ ಹಂಚಿಕೊಂಡು ಈ ಸಾಲುಗಳನ್ನು ಬರೆದಿದ್ದಾರೆ.
ಸ್ಯಾಂಡಲ್‌ವುಡ್ ಮೋಸ್ಟ್ ಟ್ಯಾಲೆಂಟೆಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಂತರ ವಿದೇಶ ಪ್ರವಾಸ ಮಾಡಿದ್ದರು. ಟ್ರಿಪ್ ಮುಗಿದು ಮನೆಗೆ ಹಿಂದಿರುಗಿದ ನಂತರ ಕೃಷ್ಣ ಸಿನಿಮಾ ಕೆಲಸಗಳಲ್ಲಿ ಸಖತ್ ಬ್ಯುಸಿಯಾದರು. ಏನೇ ಬ್ಯುಸಿ ಲೈಫ್ ಇದ್ದರೂ, ನೋ ಪ್ರಾಬ್ಲಂ ತಂದೆಗೆ ಏನಾದರೂ ಗಿಫ್ಟ್ ಕೊಡಲೇಬೇಕು ಎಂದು ನಿರ್ಧರಿಸಿ, ಕಾರು ಗಿಫ್ಟ್ ಮಾಡಿದ್ದಾರೆ.
ಕೃಷ್ಣ - ಮಿಲನ ಹೊಸ ಗಾಸಿಪ್ : ಏನದು..?
'ನನ್ನ ತಂದೆಗೆ ಸಣ್ಣ ಗಿಫ್ಟ್, ಅವರು ನಮಗಾಗಿ ಮಾಡಿರುವ ತ್ಯಾಗ ಹಾಗೂ ಕೆಲಸ ಒಂದೆರಡಲ್ಲ. ನಾನು ಇಂದು ಮಾಡಿದ ಕೆಲಸ ಅವರ ಮೇಲಿರುವ ಅಪಾರ ಪ್ರೀತಿ ಹಾಗೂ ತ್ಯಾಗವನ್ನು ಸ್ಮರಿಸಲು. ನನಗೆ ತುಂಬಾ ಖುಷಿಯಾಗುತ್ತಿದೆ, ನಮಗಾಗಿ ದುಡಿದ ವ್ಯಕ್ತಿಗೆ ನಾನು ಏನಾದರೂ ಹಿಂದಿರುಗಿ ಕೊಡುವ ಸಾಮರ್ಥ್ಯ ಇರುವುದಕ್ಕೆ,' ಎಂದು ಕೃಷ್ಣ ಬರೆದುಕೊಂಡಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಮಧುಚಂದ್ರದ ಗುಂಗಿನಲ್ಲಿರುವ ಕೃಷ್ಣ ಮಿಲನಾ ಫೋಟೋ ನೋಡಿ!
ಬಿಳಿ ಬಣ್ಣದ ಮಹೇಂದ್ರ ರಿಟ್ಸ್ ಕಾರಿನ ಮುಂದೆ ಕೃಷ್ಣ ಹಾಗೂ ಮಿಲನಾ ನಿಂತು ತಂದೆಗೆ ಕಾರಿನ ಕೀ ನೀಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
2010ರಲ್ಲಿ 'ಜಾಕಿ' ಚಿತ್ರದ ಮೂಲಕ ಸಿಐಡಿ ಆಫೀಸರ್ ಪಾತ್ರದಲ್ಲಿ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡಿದ ಕೃಷ್ಣ, ಇಂದು ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟ ಹಾಗೂ ನಿರ್ದೇಶಕ. ನಿರ್ದೇಶನ ಮಾಡಿದ ಮೊದಲ ಚಿತ್ರ 'ಲವ್ ಮಾಕ್ಟೇಲ್' ದೊಡ್ಡ ಯಶಸ್ಸು ಕಂಡ ನಂತರ ಇದೀಗ ಭಾಗ ಎರಡು ಸಿದ್ಧವಾಗಿದೆ. ಶೀಘ್ರದಲ್ಲಿಯೇ ಸಿನಿಮಾ ಬಿಡುಗಡೆ ಮಾಡುವ ಸಾಧ್ಯತೆ ಇದೆ.
