Asianet Suvarna News Asianet Suvarna News

ಸ್ಮಶಾನ ಕಾರ್ಮಿಕರ ಪರ ನಿಂತ ನಟ ಚೇತನ್; ಸಿಎಂಗೆ ಪತ್ರ!

ಕೋವಿಡ್‌ ವಾರಿಯರ್‌ಗಳಾಗಿ ಕೆಲಸ ಮಾಡುತ್ತಿರುವ ಸ್ಮಶಾನ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ನಟ ಚೇತನ್‌ ಸಿಎಂಗೆ ಪತ್ರ ಬರೆದಿದ್ದಾರೆ. 

Kannada actor Chetan Kumar supports Crematorium workers writes letter to CM vcs
Author
Bangalore, First Published May 18, 2021, 4:03 PM IST

ಸ್ಯಾಂಡಲ್‌ವುಡ್‌ ನಟ ಚೇತನ್‌ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜನರ ಸೇವೆ ಮಾಡುತ್ತಿರುವ ಚೇತನ್‌, ಇದೀಗ ಸ್ಮಶಾನ ಕಾರ್ಮಿಕರ ಪರ ಧ್ವನಿ ಎತ್ತಿದ್ದಾರೆ. ತಲೆ ಮಾರುಗಳಿಂದ ಅವರು ಮುಂದಿಟ್ಟಿರುವ ಬೇಡಿಕೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದೆ, ಈ ಪರಿಸ್ಥಿತಿಯಲ್ಲಿ ಅವರು ಸರ್ಕಾರದ ಜೊತೆ ನಿಂತು ಕೆಲಸ ಮಾಡುತ್ತಿರವುದಕ್ಕೆ ತಕ್ಷಣವೇ ಅವರ ದೀರ್ಘಕಾಲದ ಬೇಡಿಕೆ ಈಡೇರಿಸಲು ಸರಕಾರ ಮುಂದಾಗಬೇಕೆಂದು ಆಗ್ರಹಿಸಿ, ಮುಖ್ಯಮಂತ್ರಿ ಹಾಗೂ ಸಮಾಜಕಲ್ಯಾಣ ಸಚಿವರಿಗೆ ಪತ್ರ ಬರೆದಿದ್ದಾರೆ. 

Kannada actor Chetan Kumar supports Crematorium workers writes letter to CM vcs

ಪತ್ರದಲ್ಲಿರುವ ಶವಗಾರ ಕಾರ್ಮಿಕರ ಅಗತ್ಯಗಳು:

- ವೈದ್ಯಕೀಯ ವಿಮೆ

- ಕೋವಿಡ್‌ ವಾರಿಯರ್ಸ್ ಆದ ಇವರಿಗೆ ಆದ್ಯತೆ ಮೇರೆಗೆ ಆಸ್ಪತ್ರೆಯಲ್ಲಿ ಹಾಸಿಗೆ ಹಂಚಿಕೆ

- ಆದ್ಯತೆಯ ವ್ಯಾಕ್ಸಿನೇಷನ್.

- ಈಗಾಗಲೇ ಒದಗಿಸಿರುವ ಪಿಪಿಇ ಕಿಟ್‌ಗಳ ಜೊತೆ, ಕೈಗವಸುಗಳು  ಮತ್ತು ಮುಖವಾಡಗಳು

ರೈತರ ಪರ ಧ್ವನಿ ಎತ್ತಿದ ನಟ ಚೇತನ್; ಅದ್ಭುತ ಮಾತುಗಳಿಗೆ ನೆಟ್ಟಿಗರು ಫಿದಾ! 

- ಕೆಲಸದ ಅವಧಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಿದರೆ, ಅದಕ್ಕೆ ಅವರ ಪಾವತಿಯನ್ನು ಹೆಚ್ಚಿಸಬೇಕು.

- ಕೆಲಸದ ಹೊರೆ ಹೆಚ್ಚಿಗೆಯಾದ ಕಾರಣ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

- 4ನೇ ದರ್ಜೆಯ, ಡಿ-ಗ್ರೂಪ್ ಸರ್ಕಾರಿ ನೌಕರರಾಗಿ ಶಾಶ್ವತ ಉದ್ಯೋಗ ಕಲ್ಪಿಸಬೇಕು.

- ಇಎಸ್‌ಐ ಮತ್ತು ಪಿಎಸ್‌ಗೆ ಅವಕಾಶ ಕಲ್ಪಿಸಿಕೊಡು.

- ಸ್ಮಶಾನದ ಆವರಣದ ಹೊರಗೆ ವಸತಿ ಕಲ್ಪಿಸಬೇಕು.

- ಕೆಲಸದ ಸಮಯವನ್ನು 8 ಗಂಟೆ ಶಿಫ್ಟ್‌ಗೆ ಸೀಮಿತಗೊಳಿಸಬೇಕು.

- ಸ್ಮಶಾನ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಬೇಕು.

- ಎಲ್ಲಾ ಧಾರ್ಮಿಕ ಸಮುದಾಯಗಳ ಸ್ಮಶಾನ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ದೊರೆಯಬೇಕು.

Follow Us:
Download App:
  • android
  • ios