ಹೇಗಿದೆ ಶೋಕಿವಾಲ ಸಿನಿಮಾ? ಕಲೆಕ್ಷನ್‌ ಬಗ್ಗೆ ಮಾತನಾಡಿದ ನಟ ಅಜಯ್ ರಾವ್...

ಕನ್ನಡ ಚಿತ್ರರಂಗ ಕೃಷ್ಣ ಎಂದೇ ಗುರುತಿಸಿಕೊಂಡಿರುವ ಅಜಯ್ ರಾವ್ (Ajai rao) ನಟನೆಯ ಶೋಕಿವಾಲ (Sholiwala) ಸಿನಿಮಾ ಏಪ್ರಿಲ್ 29ರಂದು ರಾಜ್ಯಾದ್ಯಂತ ರಿಲೀಸ್ ಆಗಿದೆ. ಡಾ. ರಾಜ್‌ಕುಮಾರ್ (Dr. Rajkumar) ಮತ್ತು ಪುನೀತ್ ರಾಜ್‌ಕುಮಾರ್ (Puneeth Rajkumar) ಸ್ಮಾರಕದ ಎದುರು ಚಿತ್ರತಂಡ ಟೀಸರ್ ರಿಲೀಸ್ ಮಾಡಿತ್ತು, ಸಿನಿಮಾ ಡಿಫರೆಂಟ್ ಆಗಿದೆ ಎಂದು ಸಿನಿ ರಸಿಕರ ನಿರೀಕ್ಷೆ ಹೆಚ್ಚಿಸಿತ್ತು. ಟೀಸರ್‌, ಟ್ರೈಲರ್ ಮತ್ತು ಪೋಸ್ಟರ್ ಒಳ್ಳೆಯ ಪ್ರತಿಕ್ರಿಯೆ ಪಡೆದ ಕಾರಣ ಸಿನಿಮಾ ನಿರೀಕ್ಷೆ ಮಟ್ಟ ಮುಟ್ಟಲಿದೆ ಎಂದುಕೊಂಡಿದ್ದರು ಆದರೆ ಈಗ ತಂಡಕ್ಕೆ ಬೇಸರವಾಗಿದೆ. 

ಕಲೆಕ್ಷನ್‌ ಬಗ್ಗೆ ಅಜಯ್ ರಾವ್ ಮಾತು:

'ಇವತ್ತಿಗೆ ಯಾವ ಮುಚ್ಚುಮರೆ ಇಲ್ಲ ಸಿನಿಮಾಗೆ ಯಾವ ಕಲೆಕ್ಷನ್ಸ್‌ ಇಲ್ಲ ತುಂಬಾ ಪ್ರಾಮಾಣಿಕವಾಗಿ ಉತ್ತರ ಕೊಡ್ತೀನಿ. ಎಷ್ಟು ಜನ ಸಿನಿಮಾ ನೋಡಿರುತ್ತಾರೆ ಅವರು ನಮಗೆ ಪ್ರಾಮಾಣಿಕವಾಗಿ ಸಿನಿಮಾ ಇಷ್ಟ ಅಂತ ಹೇಳಿದ್ದಾರೆ. ಸಿನಿಮಾ ನೋಡಿ ತುಂಬಾ ಎಂಜಾಯ್ ಮಾಡಿದ್ದಾರೆ ಆದರೆ ಕಲೆಕ್ಷನ್ ಇಲ್ಲ. ನಮಗೆ ನಂಬಿಕೆ ಇದೆ ಒಳ್ಳೆಯ ಸಿನಿಮಾ ಕೈ ಬಿಡುವುದಿಲ್ಲ. ಎಲ್ಲೋ ಒಂದು ಕಡೆ ಸರಿಯಾದ ರೀತಿಯಲ್ಲಿ ಸಿನಿಮಾ ಬಗ್ಗೆ ಜನರಿಗೆ ತಲುಪಿಲ್ಲದೆ ಇರಬಹುದು, ಜನರಿಗೆ ಸಿನಿಮಾ ನೋಡುವ ಆಸಕ್ತಿ ಕಡಿಮೆ ಆಗಿಬಹುದು ಬೇರೆ ಬೇರೆ ಫ್ಯಾಕ್ಟರ್‌ಗಳು ಇರಬಹುದು ಆದರೆ ನಾನು ಆಡಿಯನ್ಸ್‌ನ ದೂರುವುದಿಲ್ಲ. ವೀಕ್ಷಕರು ಒಳ್ಳೆ ಸಿನಿಮಾನ ಗೆದ್ದೆ ಗೆಲ್ಲಿಸುತ್ತಾರೆ. ವರ್ಡ್‌ ಆಫ್‌ ಮೌತ್‌ನಿಂದ ಸಿನಿಮಾ ಬಗ್ಗೆ ಹರಡಬೇಕಿದೆ. ಒಳ್ಳೆ ಸಿನಿಮಾ ಮಾಡಿರುವುದರಿಂದಲೇ ಸಿನಿಮಾ ರಿಲೀಸ್ ಆದಮೇಲೆ ಕೂಡ ನಾವು ಕಲೆಕ್ಷನ್‌ ಇಲ್ಲ ಅನ್ನುವ ಪರಿಸ್ಥಿತಿ ಇರುವುದಕ್ಕೆ ನಿಮ್ಮ ಮುಂದೆ ಮಾತನಾಡುತ್ತಿರುವುದು. ಇದರ ಉದ್ದೇಶ ಏನೆಂದರೆ ಸಿನಿಮಾ ಬಗ್ಗೆ ಜನರಿಗೆ ಹೆಚ್ಚಿಗೆ ಮಾಹಿತಿ ತಲುಪಬೇಕು ಮುಂಬರುವ ದಿನಗಳಲ್ಲಿ ಹೆಚ್ಚಿಗೆ ಥಿಯೇಟರ್‌ಗಳು ಸಿಗಬೇಕು ಶೋಕಿವಾಲ ಒಳ್ಳೆಯ ಸಿನಿಮಾ ಬನ್ನಿ ಸಿನಿಮಾನ ಥಿಯೇಟರ್‌ನಲ್ಲಿ ನೋಡಿ' ಎಂದು ಅಜಯ್ ರಾವ್ ಮಾತನಾಡಿದ್ದಾರೆ.

'ಶೋಕಿವಾಲಾ' ಫ್ಯಾಮಿಲಿ ಎಂಟರ್ಟೈನ್ಮೆಂಟ್ ಗೆ ಪ್ರೇಕ್ಷರಿಂದ ಫುಲ್ ಮಾರ್ಕ್ಸ್!

'ಶೋಕಿವಾಲ ಸಿನಿಮಾ ನನ್ನ ಜೀವನಕ್ಕೆ ಎಷ್ಟು ಮುಖ್ಯ ಎಂದು ಹೇಳಿದರೆ ಅಥವಾ ಹೇಳದೆ ಇದ್ದರೂ ಕೆಲವರು ತಪ್ಪಾಗಿ ತಿಳಿದುಕೊಳ್ಳಬಹುದು. ಇದು ಎಕ್ಸಾಂ ಅಲ್ಲ. ಸಿನಿಮಾದಲ್ಲಿ investment ಇರುತ್ತೆ ಆಮೇಲೆ ಬ್ಯುಸಿನೆಸ್‌ ಇರುತ್ತೆ ನಟ,ನಟಿಯ ಜವಾಬ್ದಾರಿ ಕೂಡ ಇರುತ್ತೆ. ಆದರೆ ಒಬ್ಬ ಕಲಾವಿದನಾಗಿ ನನಗೆ ಆ ಕ್ಯಾರೆಕ್ಟರ್ ಮತ್ತು ಕಥೆ ಇಷ್ಟ ಆಗಿರುತ್ತೆ ಅದಿಕ್ಕೆ ಸಿನಿಮಾ ಮಾಡ್ತೀನಿ. ನಾವು ಮಾಡುವ ಕೆಲಸವನ್ನು ಜನರು ನೋಡುತ್ತಾರೆ ಅನ್ನೋ ನಂಬಿಕೆ ಇದೆ. ಜನರು ಇಷ್ಟ ಪಡಬೇಕು ಅವರಿಗೆ ಮನೋರಂಜನೆ ಇರಬೇಕು. ನನಗೆ ಮೇಕಪ್ ಹಾಕೋದು ಸಿನಿಮಾ ಮಾಡೋದು ತುಂಬಾ ಇಷ್ಟ. ನಾವು ಬದುಕಬೇಕು ನಿರ್ಮಾಪಕ ಹಣ ಇರುತ್ತೆ. ನಿರ್ಮಾಪರಿಗೆ ಹಣ ಬರಬೇಕು' ಅಜಯ್ ರಾವ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

Shokiwala Film Review: ಶೋಕಿಯಲ್ಲಿ ವೇಗವಿಲ್ಲ, ಕತೆಯಲ್ಲಿ ಪ್ರೇಮವಿಲ್ಲ

ನಿರ್ದೇಶಕ ಜಾಕಿ ಮಾತು:

'ನಿಮಗೆ ಸುಳ್ಳು ಹೇಳುವ ಅವಶ್ಯಕತೆ ಇಲ್ಲ. ಯಾವ ಥಿಯೇಟರ್‌ಗೆ ಜನ ಬಂದಿದ್ದಾರೆ ಅವರು ಸಿನಿಮಾ ಸೂಪರ್ ಆಗಿದೆ ಎಂದು ಹೇಳಿದ್ದಾರೆ. ಫ್ಯಾಮಿಲಿ ಜೊತೆ ನೋಡುವ ಸಿನಿಮಾ ಇದು ಎಂದು ಆಶಿಸಿದ್ದಾರೆ. ಜನ ಸೇರಿ ಸಿನಿಮಾ ನೋಡಿದರೆ ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ. ನಾನು ನಾಲ್ಕು ವರ್ಷ ಸಿನಿಮಾ ಮಾಡಿದ್ದೀನಿ, ನಿರ್ದೇಶಕನಾಗಿ ನನಗೆ ಸಿನಿಮಾನೇ ಮುಖ್ಯ. ನಿಮ್ಮನ್ನು ನಗಿಸಬೇಕು ಎಂದು ಸಿನಿಮಾ ಮಾಡಿದ್ದೀನಿ. ಸಿನಿಮಾ ಹೇಗಿದೆ ಎಂದು ನೀವೇ ಫೋನ್ ಮಾಡಿ ಹೇಳ್ತೀರಾ. ಕಲೆಕ್ಷನ್‌ ಬಗ್ಗೆ ನನಗೂ ಗೊತ್ತಗುತ್ತಿಲ್ಲ. ನಿನ್ನ ಸಿನಿಮಾ ಯಾಕೆ ನೋಡಬೇಕು ಎಂದು ಜನ ಕೇಳುತ್ತಾರೆ. ಮೊದಲ ಸಲ ನಾನು ನಿರ್ದೇಶನ ಮಾಡಿರುವುದು ಎಲ್ಲಾ ಕಷ್ಟಗಳನ್ನು ನಿಭಾಯಿಸಿ ಸಿನಿಮಾ ಮಾಡಿದ್ದೀನಿ. ನೀವು ಕೊಡುವ 100 ನನ್ನ ಟೀಂ ಮತ್ತು ನನ್ನ ಲೈಫ್‌ಗೆ ಒಳ್ಳೆಯದಾಗುತ್ತದೆ' ಎಂದು ಜಾಕಿ ಹೇಳಿದ್ದಾರೆ.