ಬಹುತೇಕ ಸ್ಟಾರ್‌ ನಟ, ನಟಿಯರು ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇಷ್ಟಕ್ಕೂ ಯಾರು, ಯಾವ ಚಿತ್ರದ ಶೂಟಿಂಗ್‌ ಸೆಟ್‌ನಲ್ಲಿದ್ದಾರೆ ಎನ್ನುವ ಕುತೂಲಹಕ್ಕೆ ಇಲ್ಲಿದೆ ಮಾಹಿತಿ.

1. ಬೈರಾಗಿ ಸೆಟ್ಟಲ್ಲಿ ಶಿವಣ್ಣ, ಡಾಲಿ

ಶಿವರಾಜ್‌ ಕುಮಾರ್‌ ಹಾಗೂ ಡಾಲಿ ಧನಂಜಯ್‌ ಇಬ್ಬರೂ ವಿಜಯ್‌ ಮಿಲ್ಟನ್‌ ನಿರ್ದೇಶನದ, ಕೃಷ್ಣ ಸಾರ್ಥಕ್‌ ನಿರ್ಮಾಣದ ‘ಬೈರಾಗಿ’ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಬೆಂಗಳೂರಿನ ಕೆಂಗೇರಿ ಹಾಗೂ ಹೆಸರಘಟ್ಟಸುತ್ತಮುತ್ತ ಸಾಹಸ ಸನ್ನಿವೇಶಗಳ ಚಿತ್ರೀಕರಣ ನಡೆಯುತ್ತಿದೆ.

ಕನ್ನಡದ ಚಿತ್ರರಂಗದ 'ಡಾಲಿ' ಧನಂಜಯ್ ಜೀವನದ ಮರೆಯಲಾಗದ ಘಟನೆಗಳಿವು...

2. ಕೆಜಿಎಫ್‌ 2ನಲ್ಲಿ ಯಶ್‌

‘ಕೆಜಿಎಫ್‌ 2’ ಚಿತ್ರಕ್ಕೆ ಜುಲೈ ಕೊನೆಯ ವಾರದಿಂದ ಚಿತ್ರೀಕಣ ಆರಂಭ ಎನ್ನಲಾಗುತ್ತಿದೆ. ಆ ನಿಟ್ಟಿನಲ್ಲಿ ತಯಾರಿ ನಡೆಯುತ್ತಿದ್ದು, ನಟ ಯಶ್‌ ಕೆಜಿಎಫ್‌ 2 ಸೆಟ್‌ಗೆ ಆಗಮಿಸುತ್ತಿದ್ದಾರೆ. ಅತ್ತ ಪ್ರಶಾಂತ್‌ ನೀಲ್‌ ಕೂಡ ತೆಲುಗಿನ ಸಲಾರ್‌ ಚಿತ್ರದ ಸೆಟ್‌ನಿಂದ ಬರಲಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್‌ ಸೇರಿಕಿ ಒಂದಿಷ್ಟುದೃಶ್ಯಗಳ ಶೂಟಿಂಗ್‌ ಬಾಕಿ ಇದೆ.

3. ಲಗಾಮ್‌ನಲ್ಲಿ ಉಪೇಂದ್ರ, ಹರಿಪ್ರಿಯಾ

ಉಪೇಂದ್ರ ಕಳೆದ ವಾರದಿಂದಲೇ ‘ಲಗಾಮ್‌’ ಸೆಟ್‌ನಲ್ಲಿ ರವಿವರ್ಮ ಸಾಹಸ ನಿರ್ದೇಶನದಲ್ಲಿ ಫೈಟ್‌ ಶುರು ಮಾಡಿದ್ದಾರೆ. ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದ್ದು, ಹರಿಪ್ರಿಯಾ ಜತೆಯಾಗಿದ್ದಾರೆ. ಕೆ ಮಾದೇಶ್‌ ನಿರ್ದೇಶನದ ಸಿನಿಮಾ ಇದು.

4. ಜೇಮ್ಸ್‌ ಅಡ್ಡಾದಲ್ಲಿ ಪುನೀತ್‌

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜೇಮ್ಸ್‌ ಚಿತ್ರೀಕರಣದ ಸೆಟ್‌ನಲ್ಲಿ ಪವರ್‌ ಸಮಸ್ಯೆ ಇಲ್ಲ. ಯಾಕೆಂದರೆ ಪುನೀತ್‌ ರಾಜ್‌ಕುಮಾರ್‌ ಚಿತ್ರದ ಶೂಟಿಂಗ್‌ನಲ್ಲಿ ಹಾಜರಿದ್ದಾರೆ. ಚೇತನ್‌ಕುಮಾರ್‌ ನಿರ್ದೇಶನದ ಸಿನಿಮಾ ಇದು.

ಪುನೀತ್ ರಾಜ್‌ಕುಮಾರ್ 'ಜೇಮ್ಸ್' ಅಖಾಡಕ್ಕೆ ಎಂಟ್ರಿ ಕೊಟ್ಟ ಕೇತನ್ ಕರಾಂಡೆ!

5. ದೃಶ್ಯ 2ನಲ್ಲಿ ಕ್ರೇಜಿಸ್ಟಾರ್‌

ಕ್ರೇಜಿಸ್ಟಾರ್‌ ರವಿಚಂದ್ರನ್‌, ಅನಂತ್‌ನಾಗ್‌ ‘ದೃಶ್ಯ 2’ ಚಿತ್ರದ ಶೂಟಿಂಗ್‌ನಲ್ಲಿದ್ದಾರೆ. ಪಿ ವಾಸು ನಿರ್ದೇಶನದ ಸಿನಿಮಾ ಇದು.

6. ಮೂರು ಚಿತ್ರಗಳಲ್ಲಿ ಗಣೇಶ್‌

ಸದ್ಯ ಗಣೇಶ್‌ ಮುಂದೆ ಮೂರು ಚಿತ್ರಗಳಿವೆ. ‘ಗಾಳಿಪಟ 2’, ‘ತ್ರಿಬಲ್‌ ರೈಡಿಂಗ್‌’ ಹಾಗೂ ‘ಸಖತ್‌’. ಈ ಪೈಕಿ ‘ಗಾಳಿಪಟ 2’ ಹೊರತಾಗಿ ಉಳಿದ ಎರಡು ಚಿತ್ರಗಳ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಶಿಫ್ಟ್‌ಗಳ ಲೆಕ್ಕದಲ್ಲಿ ಎರಡು ಚಿತ್ರಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಸದ್ಯದಲ್ಲೇ ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ 2’ ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

ತಮಾಷೆ, ಭಾವುಕತೆ ನನ್ನ ಟ್ರಂಪ್‌ಕಾರ್ಡ್: ಗಣೇಶ್

7. ಶಬರಿ ಜತೆ ರಚಿತಾ ರಾಮ್‌

ರಚಿತಾ ರಾಮ್‌, ‘ಶಬರಿ ಸರ್ಚಿಂಗ್‌ ಫಾರ್‌ ರಾವಣ’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ನವೀನ್‌ ಶೆಟ್ಟಿನಿರ್ದೇಶನದ ಚಿತ್ರ ಇದಾಗಿದೆ. ಸದ್ಯ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯುತ್ತಿದೆ.