ಸ್ಯಾಂಡಲ್‌ವುಡ್‌ ಜೂನಿಯರ್‌ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ 27ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ತಮ್ಮ ಮುಂದಿನ ಪ್ರಾಜೆಕ್ಟ್‌ 'Bad Manners' ಚಿತ್ರದ ಫಸ್ಟ್ ಲುಕ್ ರಿಲೀಸ್‌ ಮಾಡಿದ್ದಾರೆ. ನಿರ್ದೇಶಕ ಸೂರಿ ತಂಡದ ವತಿಯಿಂದ ವಿಭಿನ್ನ ಪ್ರೋಮೊ ವಿಡಿಯೋ ರಿಲೀಸ್ ಮಾಡಿದ್ದಾರೆ.

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತಿರುವ ಅಭಿಷೇಕ್, ಸುಮಲತಾ ಅಂಬರೀಶ್‌!

'ಅಭಿಷೇಕ್ ಅಂಬರೀಷ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಅವರ "ಬ್ಯಾಡ್ ಮ್ಯಾನರ್ಸ್" ಚಿತ್ರದ ಫಸ್ಟ್ ಲುಕ್ ನಿಮಗಾಗಿ. ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ' ಎಂದು ಸೂರಿ ಟ್ಟೀಟ್ ಮಾಡಿದ್ದಾರೆ.

 

ಅಮರ್‌ ಚಿತ್ರದಲ್ಲಿ ಲವರ್ ಬಾಯ್‌ ಆಗಿ ಕಾಣಿಸಿಕೊಂಡಿದ್ದ ಅಭಿ, ಈಗ ರಗಡ್‌ ಲುಕ್‌ನಲ್ಲಿ ಬರ್ತಿದ್ದಾರೆ. ಪ್ರೊಮೋ ವಿಡಿಯೋದಲ್ಲಿ ಪಿಸ್ತೂಲ್‌ಗಳನ್ನು ನೋಡಬಹುದು. ಬಿಯರ್ಡ್‌ ಬಾಯ್‌ ಮಾಸ್‌ ಲುಕ್‌ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ರಿಲೀಸ್‌ ಆದ ಕಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿವೆ. 

 

ದರ್ಶನ್‌ನನ್ನು ಅಣ್ಣನಾಗಿ ಪಡೆದಿದ್ದು ಸೌಭಾಗ್ಯ ಎಂದ ಅಭಿಷೇಕ್..!

ಸುಧೀರ್‌ ಕೆಎಂ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಚರಣ್ ರಾಜ್‌ ಸಂಗೀತವಿದೆ. ಡಿ-ಬೀಟ್ಸ್‌ನಲ್ಲಿ ರಿಲೀಸ್‌ ಪ್ರೋಮೊ ರಿಲೀಸ್ ಮಾಡಲಾಗಿದೆ. ದುನಿಯ ಸೂರಿ ಜೊತೆ ಅಮೃತ್ ಭಾರ್ಗವ್‌ ಕಥೆ ಹಾಗೂ ಚಿತ್ರಕಥೆ ಮಾಡಿದ್ದಾರೆ.

ಅಣ್ಣನ ವಿಶ್:

ಅಭಿಷೇಕ್ ಅಂಬರೀಶ್‌ ಅವರನ್ನು ತಮ್ಮನಂತೆ ಕಾಣುವ ಚಾಲೆಂಜಿಂಗ್ ಸ್ಟಾರ್ ದರ್ಶನ್‌, ಅಭಿ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ. 'ನನ್ನ ಪ್ರೀತಿಯ ತಮ್ಮ ಅಭಿಷೇಕ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನಿನ್ನ ಇಷ್ಟಾರ್ಥಗಳೆಲ್ಲಾ ಆದಷ್ಟು ಬೇಗ ಈಡೇರಲಿ. ಬೆಸ್ಟ್ ಆಫ್ ಲಕ್ ಫಾರ್ ಬ್ಯಾಡ್ ಮ್ಯಾನರ್ಸ್' ಎಂದು ಬರೆ,ದು ಅಮರ್‌ ಚಿತ್ರದ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

 

ಒಟ್ಟಾರೆ ಲವರ್‌ ಬಾಯ್‌ನ ಮಾಸ್‌ ಲುಕ್‌ ಮತ್ತು ಡಿಫರೆಂಟ್‌ ಪ್ರಯತ್ನಕ್ಕೆ ಜಯ ಸಿಗಲಿ ಎಂದು ಆಶಿಸೋಣ.