ಸ್ಯಾಂಡಲ್‌ವುಡ್‌ನಲ್ಲಿ 'ಬ್ಯಾಡ್‌ ಮ್ಯಾನರ್ಸ್‌' ತೋರಲು ಸಜ್ಜಾಗಿರುವ ನಟ ಅಭಿಷೇಕ್ ಅಂಬರೀಶ್‌ ಅಕ್ಬೋಬರ್ 10ರಂದು ತಮ್ಮ ಜೆಪಿ ನಗರದ ನಿವಾಸದಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಹಾಗೂ ತಮ್ಮ ಮುಂದಿನ ಚಿತ್ರದ ಪೋಸ್ಟರ್‌ ವಿಡಿಯೋ ರಿಲೀಸ್ ಮಾಡಿದ್ದಾರೆ.

ಬ್ಯಾಡ್‌ ಮ್ಯಾನರ್ಸ್‌; ಅಭಿಷೇಕ್‌ ಅಂಬರೀಶ್ ಬರ್ತಡೇಗೆ ಪ್ರೋಮೊ! 

ಅಭಿಷೇಕ್ ಮಾತು:
'ತಂದೆ ಅವರಿಲ್ಲದೇ ಎರಡನೇ ಹುಟ್ಟುಹಬ್ಬದ ಸೆಲೆಬ್ರೇಷನ್. ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವೆ. ಆದರೆ ಅವರು ಕೊಟ್ಟಿರುವ ಅಭಿಮಾನಿಗಳಿಂದ ಆ ಬೇಸರ ದೂರವಾಗಿದೆ. ನನ್ನ ಬ್ಯಾಡ್ ಮ್ಯಾನರ್ಸ್‌ ಸಿನಿಮಾಗಾಗಿ ತೂಕ ಇಳಿಸಿ ಕೊಂಡಿದ್ದೇನೆ. ಎರಡು ವಾರದ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ದಿನ ಅಭಿಮಾನಿಗಳಿಗಾಗಿ. ಅವರು ಆಯೋಜಿಸಿರುವ ಕಾರ್ಯಕ್ರಮಕ್ಕೆ ಹೋಗ್ತಿನಿ. ನಂತರ ತಂದೆ ಸ್ಮಾರಕಕ್ಕೆ ಭೇಟಿ ಕೊಡ್ತಿನಿ' ಎಂದು ಹೇಳಿದ್ದಾರೆ. 

ಪತ್ರಕರ್ತರು ನಿಖಿಲ್ ಕುಮಾರಸ್ವಾಮಿ ವಿಶ್ ಮಾಡಿದ್ದಾರಾ ಎಂದು ಕೇಳಿದ ಪ್ರಶ್ನೆಗೆ, ಅವರು ಮಾಡಿರಬಹುದು ನಾನು ಮೊಬೈಲ್ ನೋಡಿಲ್ಲ. ದರ್ಶನ್ ಅಣ್ಣ ವಿಶ್ ಮಾಡಿದ್ದಾರೆ,' ಎಂದು ಹೇಳಿದ್ದಾರೆ.

ಅಭಿ ಹುಟ್ಟುಹಬ್ಬದ ದಿನ ನಿವಾಸಕ್ಕೆ ಆಗಮಿಸಿ ಅಭಿಮಾನಿಗಳನ್ನು ನೋಡಿ ತಾಯಿ ಸುಮಲತಾ ಸಂತೋಷ ವ್ಯಕ್ತಪಡಿಸಿದ್ದಾರೆ. 'ಅಭಿ ಮೊದಲ ಬರ್ತಡೇ ಸಖತ್ ಜೋರಾಗಿ ಆಚರಣೆ ಮಾಡಿದ್ವಿ ಇಂದು ಇಷ್ಟು ಜನರನ್ನು ನೋಡಿ ತುಂಬಾ ಫೀಲ್ ಆಯ್ತು,' ಎಂದು ಮಗನ ಹುಟ್ಟುಹಬ್ಬವನ್ನು ಸಂಭ್ರಮಿಸಿದ್ದಾರೆ.

ಡ್ರಗ್ಸ್ ಕೇಸಲ್ಲಿ ಹೆಸರು: ಅವಕಾಶ ಕಳ್ಕೊಂಡ 'ಗಟ್ಟಿಮೇಳ' ನಟ?

ಡ್ರಗ್ಸ್ ಪ್ರಕರಣಕ್ಕೆ ರಿಯಾಕ್ಷನ್:
ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟು ಇರುವುದರ ಬಗ್ಗೆ ಅಭಿಷೇಕ್ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. 'ಇಂಡಸ್ಟ್ರಿ ಅಂದ್ರೆ ಇಲ್ಲಿ ಕೆಲವೇ ಕೆಲವು ಜನರಲ್ಲ. ಅಮಾಯಕರನ್ನು ಈ ವಿಚಾರದಲ್ಲಿ ಬಲಿಪಶು ಮಾಡಬಾರದು. ವಿಚಾರಣೆ ಎದುರಿಸಿದವರನ್ನು ಅಪರಾಧಿಗಳೆಂದೇ ಪರಿಗಣಿಸಬಾರದು. ಅದು ತಪ್ಪು. ತಪ್ಪು ಮಾಡಿದವರಿಗೆ ಮಾತ್ರ ಶಿಕ್ಷೆ ಆಗುತ್ತದೆ. ನನ್ನ ತಂದೆ ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದಲ್ಲಿನ ಅಭಿಷೇಕ್ ಕೂಡ ವಿಚಾರಣೆ ಎದುರಿಸಿದ್ದಾರೆ. ಹಾಗಂತ ಅವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ. ಇದರಿಂದ ಅವರಿಗೆ ಸಾಕಷ್ಟು ತೊಂದರೆ ಆಗಿದೆ. ಸಿನಿಮಾ ಕೂಡ ಕಳೆದುಕೊಂಡಿದ್ದಾರೆ. ಈ ರೀತಿ ಬೆಳವಣಿಗೆಗಳು ಆಗಬಾರದು' ಎಂದು ಉತ್ತರಿಸಿದ್ದಾರೆ.