'ಗಟ್ಟಿಮೇಳ' ಧಾರಾವಾಹಿಯ ವಿಕ್ಕಿ ಪಾತ್ರಧಾರಿ ಅಭಿಷೇಕ್‌ ದಾಸ್‌ ಕೆಲವು ದಿನಗಳ ಹಿಂದೆ ಡ್ರಗ್ಸ್ ಕೇಸ್‌ ವಿಚಾರವಾಗಿ ಸಿಸಿಬಿ ಅಧಿಕಾರಿಗಳು, ವಿಚಾರಣೆಯಲ್ಲಿ ಭಾಗಿಯಾಗುವಂತೆ ನೋಟಿಸ್ ನೀಡಿದ್ದರು. ವಿಚಾರಣೆಯಲ್ಲಿ ತಮಗೆ ತಿಳಿದಷ್ಟು ಮಾಹಿತಿಯನ್ನು ನೀಡಿ ಹೊರ ಬಂದ ಅಭಿಷೇಕ್ ಅವರ ವೃತ್ತಿ ಜೀವನದಲ್ಲಿ ಕೊಂಚ ಬದಲಾವಣೆಗಳಾಗಿದೆ.

ಡ್ರಗ್ಸ್ ಮಾಫಿಯಾದಲ್ಲಿ 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್ ರಾಮ್‌ದಾಸ್? 

ಸಿನಿಮಾ ಮಿಸ್:
ಮೂಲತಃ ಮೈಸೂರಿನವರಾಗಿರುವ ಅಭಿಷೇಕ್ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟವರು. ಸಾಕಷ್ಟು ಧಾರಾವಾಹಿಯಲ್ಲಿ ಅಭಿನಯಿಸಿದ್ದಾರೆ ಹಾಗೂ ಈ ಹಿಂದೆ ಅಂಬರೀಶ್‌ ಜೊತೆ 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. 

ಗಟ್ಟಿಮೇಳ ಧಾರಾವಾಹಿಯಿಂದ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಅಭಿಷೇಕ್‌ ಸಿನಿಮಾವೊಂದನ್ನು ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದರು. ವೆಚ್ಚ ಭರಿಸಲು ನಿರ್ಮಾಪಕರು ಒಪ್ಪಿಕೊಂಡಿದ್ದರಂತೆ.  ಆದರೆ ಡ್ರಗ್ಸ್ ವಿಚಾರಣೆಯಲ್ಲಿ ಭಾಗಿಯಾಗಿದ್ದ ಸಂಗತಿಯನ್ನು ಮಾಧ್ಯಮಗಳಲ್ಲಿ ನೆಗೆಟಿವ್ ಅಗಿ ತೋರಿಸಿದ ಕಾರಣ ಸಿನಿಮಾ ಮಾಡುವುದಿಲ್ಲ ಎಂದು ನಿರ್ಮಾಪಕರು ಹಿಂದೇಟು ಹಾಕಿದ್ದಾರೆ, ಎಂದು ತಮ್ಮ ದುಃಖ ತೋಡಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ  ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

"

ಅನುಶ್ರೀ ಗೊತ್ತು:
ವಿಚಾರಣೆಯಲ್ಲಿ ಭಾಗಿಯಾದ ನಂತರ ಮಾಧ್ಯಮಗಳಲ್ಲಿ ಮಾತನಾಡಿದ ಅಭಿಷೇಕ್ ನಿರೂಪಕಿ ಅನುಶ್ರೀ ಪರಿಚಯವಿರುವುದರ ಬಗ್ಗೆ ಒಪ್ಪಿಕೊಂಡಿದ್ದಾರೆ. ಅಭಿಷೇಕ್ ಸ್ಪರ್ಧಿಯಾಗಿದ್ದ ಒಂದು ರಿಯಾಲಿಟಿ ಶೋಗೆ ಅನುಶ್ರೀ ನಿರೂಪಣೆ ಮಾಡಿದ್ದರಂತೆ. ಹಾಗೂ ಅಭಿಷೇಕ್ ಅವರ ಫೋನ್‌ ಕಾಲ್ ಹಾಗೂ ಮೆಸೇಜ್‌ಗಳನ್ನು ಅಧಿಕಾರಿಗಳು ಚೆಕ್ ಮಾಡಿದ್ದಾರೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಕಾರಣ ಅಭಿಷೇಕ್ ಸಿನಿಮಾ ಆಫರ್ ಮಿಸ್ ಮಾಡಿಕೊಂಡಿದ್ದಾರೆ.