ನಾಗೇಂದ್ರ ಅರಸ್‌ ನಿರ್ದೇಶನದ ‘ಕಂಡ್ಹಿಡಿ ನೋಡೋಣ’ ಚಿತ್ರದ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ನಾಗೇಂದ್ರ ಅರಸ್‌ ನಿರ್ದೇಶನದ ‘ಕಂಡ್ಹಿಡಿ ನೋಡೋಣ’ ಚಿತ್ರದ ಟೀಸರ್‌ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ.

ಈ ಹಿಂದೆ ‘ಸೈಕೋ ಶಂಕರ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಆದ ಪ್ರಣವ್‌ನ ಮಾಸ್‌ ಅಪೀಯರೆನ್ಸ್‌ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ದಿವ್ಯಚಂದ್ರಧರ ಮತ್ತು ಯೋಗೇಶ್‌ ಕೆ. ಗೌಡ ನಿರ್ಮಾಣದ ಈ ಚಿತ್ರದಲ್ಲಿ ನಾಗೇಂದ್ರ ಅರಸ್‌ ನಿರ್ದೇಶನದ ಜೊತೆಗೆ ಪಾತ್ರವನ್ನೂ ಮಾಡಿದ್ದಾರೆ. ‘ಸಿನಿಮಾ ಕೂಡ ಇಷ್ಟೇ ಕುತೂಹಲಭರಿತವಾಗಿರುತ್ತದೆ. ಮೂರೂ ಭಾಷೆಯಲ್ಲೂ ಏಕ ಕಾಲಕ್ಕೆ ಬಿಡುಗಡೆ ಆಗುತ್ತದೆ’ ಎಂಬುದು ನಿರ್ದೇಶಕರ ವಿವರಣೆ.

ರಾಘವೇಂದ್ರ ರಾಜ್‌ಕುಮಾರ್ 25ನೇ ಸಿನಿಮಾ‌ 'ಆಡಿಸಿದಾತ' ಟೀಸರ್‌ ಬಿಡುಗಡೆ

ವಿನೋದ್‌ ಜೆ ರಾಜ್‌ ಛಾಯಾಗ್ರಹಣ, ಶ್ರೀಧರ್‌ ಕಶ್ಯಪ್‌ ಸಂಗೀತ ಚಿತ್ರಕ್ಕಿದೆ. ಪ್ರಿಯಾಂಕ, ವಿಜಯ ಚಂಡೂರ್‌, ಗಿರಿಜಾ ಲೋಕೇಶ್‌, ಜಯಸಿಂಹ ಮುಸುರಿ, ಆದರ್ಶ್ ನಟಿಸಿದ್ದಾರೆ. ಓಟಿಟಿಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್‌ ಚಿತ್ರತಂಡದ್ದು. ಕಂಡ್ಹಿಡಿ ನೋಡನ ಟೀಸರ್‌ನಲ್ಲಿ ಫೈಟಿಂಗ್‌ಗೆ ಹೆಚ್ಚಿನ ಒತ್ತು ಕೊಡಲಾಗಿದೆ. ಗ್ಯಾರೇಜ್ ಸೀನ್, ಫೈಟಿಂಗ್ ದೃಶ್ಯವನ್ನೂ ಕಾಣಬಹುದು.