‘ಕನ್ನಡ ಚಿತ್ರರಂಗದಲ್ಲಿ ಯಾರ ಬಗ್ಗೆ ಯಾರಿಗೂ ಭರವಸೆ ಇಲ್ಲ. ಆದರೆ ಎಷ್ಟೇ ಕಷ್ಟ ಆದರೂ ರೈತರು ಬಿತ್ತಿ ಉಳುವುದನ್ನು ಬಿಡುವುದಿಲ್ಲ. ಹಾಗೇ ನಾವೂ ಸಿನಿಮಾ ಮಾಡುತ್ತಿದ್ದೇವೆ’.ಇದು ಜಟ್ಟ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್‌ ಮಾತು.

‘ಕನ್ನಡ ಚಿತ್ರರಂಗದಲ್ಲಿ ಯಾರ ಬಗ್ಗೆ ಯಾರಿಗೂ ಭರವಸೆ ಇಲ್ಲ. ಆದರೆ ಎಷ್ಟೇ ಕಷ್ಟ ಆದರೂ ರೈತರು ಬಿತ್ತಿ ಉಳುವುದನ್ನು ಬಿಡುವುದಿಲ್ಲ. ಹಾಗೇ ನಾವೂ ಸಿನಿಮಾ ಮಾಡುತ್ತಿದ್ದೇವೆ’.ಇದು ಜಟ್ಟ ಖ್ಯಾತಿಯ ನಿರ್ದೇಶಕ ಬಿ.ಎಂ. ಗಿರಿರಾಜ್‌ ಮಾತು. ಅವರ ನಿರ್ದೇಶನದ ಹೊಸ ಸಿನಿಮಾ ‘ಕಲ್ಯಾಣಿ’ ಶೀರ್ಷಿಕೆ ಅನಾವರಣ ಇತ್ತೀಚೆಗೆ ನಡೆಯಿತು. ಇದು ಸಾಹಿತಿ ಬಸವ ರೆಡ್ಡಿ ಕಥೆ ಆಧರಿಸಿದ ಚಿತ್ರ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ವೇಳೆ ಗಿರಿರಾಜ್‌, ‘ಉತ್ತರ ಭಾರತದ ಹುಡುಗ ಹಾಗೂ ದಕ್ಷಿಣ ಭಾರತದ ಹುಡುಗಿಯ ನವಿರಾದ ಲವ್‌ಸ್ಟೋರಿಯೇ ಕಲ್ಯಾಣಿ ಚಿತ್ರ. ಇದರಲ್ಲಿ ಎರಡು ಭಿನ್ನ ಸಂಸ್ಕೃತಿಗಳ ಮುಖಾಮುಖಿ ಇದೆ’ ಎಂದರು. ಕುಮಾರಸ್ವಾಮಿ ಆರ್. ನಿರ್ಮಾಪಕರು. ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಸಾಮ್ರಾಟ್ ಶೆಟ್ಟಿ ನಾಯಕ. ಉತ್ತರ ಭಾರತದ ನಟಿ ಸಿಮ್ರನ್ ನಾಯಕಿ. ರಾಹುಲ್ ಜೇಟ್ಲಿ, ಶಮಂತ್ ರಾವ್, ಪಿ. ಡಿ. ಸತೀಶ್ ಚಂದ್ರ, ಯಮುನಾ ಶ್ರೀನಿಧಿ, ವಿಜಯ್ ಚೆಂಡೂರು, ಶೈಲೇಂದ್ರ, ರಂಗು ಸಮರ್ಪಣ್ ನಟಿಸಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯಕಾರಿ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಕುಮಾರಸ್ವಾಮಿ ಆರ್, 45ಕ್ಕೂ ಹೆಚ್ಚು ಸಿನಿಮಾಗಳ ಅನುಭವದೊಂದಿಗೆ ಇದೀಗ 'ಆರ್.ಕೆ. ಸಿನೆಮಾಸ್' ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರತಂಡದ ವಿಶ್ವಾಸದಂತೆ, ಕಥೆಯ ಗುಣಮಟ್ಟ ಮತ್ತು ತಾಂತ್ರಿಕ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಬೆಂಗಳೂರು ಸುತ್ತಮುತ್ತ ಚಿತ್ರೀಕರಣ

ಚಿತ್ರಕ್ಕೆ ಬಿ.ಜೆ. ಭರತ್ ಸಂಗೀತ ಸಂಯೋಜಿಸಿದ್ದು, ಪ್ರಶಾಂತ ಲಾಗರ ಛಾಯಾಗ್ರಹಣ ಹಾಗೂ ಅರ್ಜುನ್ ಕಿಟ್ಟು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಭಟ್ಕಳ ಮತ್ತು ಬೆಂಗಳೂರು ಸುತ್ತಮುತ್ತ ಪ್ರಮುಖ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ನಿರ್ಮಾಣೋತ್ತರ ಕೆಲಸಗಳು ಭರದಿಂದ ಸಾಗುತ್ತಿವೆ. ಎಲ್ಲವೂ ಯೋಜನೆಯಂತೆ ನಡೆದರೆ, ಚಿತ್ರವನ್ನು ಇದೇ ವರ್ಷದ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ತೆರೆಗೆ ತರುವ ಉದ್ದೇಶವನ್ನು ಚಿತ್ರತಂಡ ಹೊಂದಿದೆ. ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು.