Asianet Suvarna News Asianet Suvarna News

ಹಾಲಿವುಡ್ ಸಿನಿಮಾ ನೋಡಿದಾಗೆ ಆಯ್ತು; 'ವಿಕ್ರಾಂತ್ ರೋಣ'ನ ಹೊಗಳಿದ ಕಬ್ಜ ನಿರ್ದೇಶಕ ಆರ್.ಚಂದ್ರು

ವಿಕ್ರಾಂತ್ ರೋಣ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಗಣ್ಯರು ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ಸಿನಿಮಾ ನೋಡಿ ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನಿರ್ದೇಶಕ ಆರ್.ಚಂದ್ರು ವಿಕ್ರಾಂತ್ ರೋಣ ನೋಡಿ ಮೆಚ್ಚಿಕೊಂಡಿದ್ದಾರೆ. 

Kabza director R Chandru watched sudeep starrer Vikrant rona with his family sgk
Author
Bengaluru, First Published Jul 30, 2022, 3:51 PM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ವಿಶ್ವದಾದ್ಯಂತ ರಿಲೀಸ್ ಆಗಿದ್ದು ಹೌಸ ಫುಲ್ ಪ್ರದರ್ಶನ ಕಾಣುತ್ತಿದೆ. ಜುಲೈ 28ರಂದು ಅದ್ದೂರಿಯಾಗಿ ತೆರೆಗೆ ಬಂದ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಕಲೆಕ್ಷನ್ ಮಾಡಿದೆ. ವಿಕ್ರಾಂತ್ ರೋಣ ಕರ್ನಾಟಕದಲ್ಲಿ ಹೊಸ ದಾಖಲೆಯ ಕಲೆಕ್ಷನ್ ಮಾಡಿದೆ. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೇ ಬೇರೆ ಬೇರೆ ರಾಜ್ಯಗಳಿಂದ ವಿಕ್ರಾಂತ್ ರೋಣ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ದೊಡ್ಡ ಮಟ್ಟದಲ್ಲಿ 3ಡಿಲ್ಲಿ ಬಂದಿರುವ ವಿಕ್ರಾಂತ್ ರೋಣ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದೆ. 

ವಿಕ್ರಾಂತ್ ರೋಣ ಸಿನಿಮಾವನ್ನು ಪ್ರೇಕ್ಷಕರು ಮಾತ್ರವಲ್ಲದೇ ಸಿನಿಗಣ್ಯರು ನೋಡಿ ಮೆಚ್ಚಿಕೊಂಡಿದ್ದಾರೆ. ಅನೇಕರು ಸಿನಿಮಾ ನೋಡಿ ಅದ್ಭುತ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮೊದಲ ದಿನವೇ ಚಿತ್ರ ವೀಕ್ಷಿಸಿದ ಚಿತ್ರಸಾಹಿತಿ ಮತ್ತು ನಿರ್ದೇಶಕ ಕವಿರಾಜ್ ಸಿನಿಮಾ ನೋಡಿ ಹಾಡಿಹೊಗಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ವಿಮರ್ಶೆ ಮಾಡಿದ್ದರು. ಇದೀಗ ನಿರ್ದೇಶಕ ಆರ್.ಚಂದ್ರು ವಿಕ್ರಾಂತ್ ರೋಣ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಬಗ್ಗೆ ಆರ್ ಚಂದ್ರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅಂದಹಾಗೆ ಆರ್ ಚಂದ್ರು ಕುಟುಂಬ ಸಮೇತ ಸಿನಿಮಾ ವೀಕ್ಷಿಸಿದ್ದಾರೆ. ಕುಟುಂಬದ ಜೊತೆ ಫೋಟೋ ಶೇರ್ ಮಾಡಿ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.  ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಪಕರು, ಅದ್ಭುತವಾಗಿ ತಂತ್ರಜ್ಞರು, ಅಚ್ಚುಕಟ್ಟಾಗಿ ಕಲಾವಿದರು ಮತ್ತು ಅತ್ಯದ್ಭುತವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿನಯಿಸಿದ್ದಾರೆ ಎಂದು ಹೇಳಿದ್ದಾರೆ. 

'ಇಂದು ನಾನು ನನ್ನ ಫ್ಯಾಮಿಲಿಯ ಜೊತೆ ತ್ರೀಡಿಯಲ್ಲಿ ವಿಕ್ರಾಂತ್ ರೋಣ ಚಿತ್ರವನ್ನು ವೀಕ್ಷಿಸಿದೆ. ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಪಕರು, ಅದ್ಭುತವಾಗಿ ತಂತ್ರಜ್ಞರು, ಅಚ್ಚುಕಟ್ಟಾಗಿ ಕಲಾವಿದರು ಮತ್ತು ಅತ್ಯದ್ಭುತವಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿನಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಅದ್ಭುತ ಪ್ರಯತ್ನ. ಒಂದು ಹಾಲಿವುಡ್ ಸಿನಿಮಾವನ್ನು ನೋಡಿದ ಅನುಭವ ನನಗೆ ಆಯಿತು. ದಯವಿಟ್ಟು ಎಲ್ಲರೂ ಈ ಚಿತ್ರವನ್ನು ಫ್ಯಾಮಿಲಿ ಸಮೇತ ನೋಡಿ, ಖಂಡಿತ ಎಂಜಾಯ್ ಮಾಡುತ್ತೀರಾ. ಆಲ್ ದಿ ಬೆಸ್ಟ್ ಟೀಮ್ ವಿಕ್ರಾಂತ್ ರೋಣ' ಎಂದು ಹೇಳಿದ್ದಾರೆ. 

ವಿಕ್ರಾಂತ್ ರೋಣ; ಕಿಚ್ಚನ ಸಿನಿಮಾ ಮೊದಲ ದಿನ ಗಳಿಸಿದ್ದೆಷ್ಟು? ಸಂಪೂರ್ಣ ಕಲೆಕ್ಷನ್ ಮಾಹಿತಿ

ಅಂದಹಾಗೆ ಆರ್ ಚಂದ್ರು ನಿರ್ದೇಶಕ ಕಬ್ಜ ಸಿನಿಮಾದಲ್ಲಿ ಕಿಚ್ಚ ಸುದೀಪ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಭಾರ್ಗವ್ ಭಕ್ಷಿ ಪಾತ್ರದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿ ನಟಿಸುತ್ತಿರುವ ಕಬ್ಜ ಸಿನಿಮಾದಲ್ಲಿ ಸುದೀಪ್ ಪಾತ್ರ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಆರ್ ಚಂದ್ರು ಕಿಚ್ಚನ ವಿಕ್ರಾಂತ್ ರೋಣ ನೋಡಿ ಮೆಚ್ಚಿಕೊಂಡಿದ್ದಾರೆ. 

ವಿಕ್ರಾಂತ್ ರೋಣನ ಅಬ್ಬರಕ್ಕೆ ದಾಖಲೆಗಳು ಉಡೀಸ್; ಪ್ರೇಕ್ಷಕರಿಂದ ಫುಲ್ ಮಾರ್ಕ್ಸ್!

ವಿಕ್ರಾಂತ್ ರೋಣ ಸಿನಿಮಾ ಬಗ್ಗೆ

ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿರುವ ವಿಕ್ರಾಂತ್ ರೋಣ 3ಡಿಯಲ್ಲಿ ರಿಲೀಸ್ ಆಗಿದೆ. ಪ್ಯಾನ್ ಸಿನಿಮಾದಲ್ಲಿ ನಿರೂಪ್ ಭಂಡಾರಿ, ನೀತಾ ಅಶೋಕ್ ಸೇರಿದಂತೆ ಅನೇಕ ಕಲಾವಿದರು ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಎಂದರೆ ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿದ್ದಾರೆ. ಚಿತ್ರಕ್ಕೆ ಜಾಕ್ ಮಂಜು ಬಂಡವಾಳ ಹೂಡಿಸಿದ್ದಾರೆ.

Follow Us:
Download App:
  • android
  • ios