ಚಿರಂಜೀವಿ ಸರ್ಜಾ ಅಭಿನಯದ ಪಕ್ಕಾ ಕಮರ್ಷಿಯಲ್ ಸಿನಿಮಾ ರಾಜ ಮಾರ್ತಾಂಡ ಟ್ರೈಲರ್ ಇದೇ ಫೆಬ್ರವರಿ 19ರಂದು ಬಿಡುಗಡೆ ಮಾಡಲಾಗುತ್ತಿದೆ. ನಿರ್ದೇಶಕ ರಾಮ್‌ನಾರಾಯಣ್‌ ಚಿತ್ರದ ಬಗ್ಗೆ ಸ್ಪೆಷಲ್ ಅಪ್ಡೇಟ್‌ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 

ಚಿರು ಸಿನಿಮಾಗಾಗಿ ಒಂದಾದ ದರ್ಶನ್, ಧ್ರುವ ಸರ್ಜಾ..! 

ಹೌದು!  ಪೊಗರು ಸಿನಿಮಾ ರಿಲೀಸ್ ದಿನವೇ ಚಿರಂಜೀವಿ ನಟನೆಯ ರಾಜಾ ಮಾರ್ತಾಂಡ ಟ್ರೈಲರ್ ಬಿಡುಗಡೆಯಾಗುತ್ತಿದೆ. ಇದನ್ನು ಬಿಡುಗಡೆ ಮಾಡುತ್ತಿರುವುದು ಮತ್ಯಾರೂ ಅಲ್ಲ, ಜೂನಿಯರ್ ಚಿರು ಎಂಬುದಾಗಿ ಬರೆದುಕೊಂಡಿದ್ದಾರೆ. ತಂದೆಯ ಕೊನೆ ಚಿತ್ರಕ್ಕೆ ಜೂನಿಯರ್ ಈ ಮೂಲಕ ಸಾಥ್ ನೀಡುತ್ತಿದ್ದಾನೆ. 'ಇದೇ ತಿಂಗಳು ಫೆಬ್ರವರಿ 19ರಂದು ರಾಜ ಮಾರ್ತಾಂಡ ಚಿತ್ರದ ಟ್ರೈಲರ್ ಬಿಡುಗಡೆ. ಜೂನಿಯರ್ ಚಿರು ಅಮೃತ ಹಸ್ತದಿಂದ. ಚಿರಂಜೀವಿ ಅಭಿನಯದ ಧ್ರುವ ಸರ್ಜಾ ಕಂಠದಾನ, ಮೇಘನಾ ರಾಜ್‌ ಅವರ ಸಹಕಾರ,' ಎಂದಿದ್ದಾರೆ.

ಚಿತ್ರದ ಬಹುತೇಕ ಭಾಗ ಚಿತ್ರೀಕರಣ ಮುಗಿದಿತ್ತು. ಆದರೆ, ಹೃದಯಘಾತದಿಂದ ಚಿರಂಜೀವಿ ಅಕಾಲಿಕ ಮರಣಕ್ಕೆ ತುತ್ತಾದ ಬಳಿಕ ಸಿನಿಮಾ ಕೆಲಸ ಹಾಗೆಯೇ ಉಳಿದಿತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಧ್ರುವ ಸರ್ಜಾ ಸಾಥ್‌ ನೀಡಿದ ಬಳಿಕ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಂದುವರಿದು ಇದೀಗ ರಿಲೀಸ್‌ಗೆ ಸಿದ್ಧವಾಗುತ್ತಿದೆ. ಚಿರಂಜೀವಿಗೆ ಪಾತ್ರಕ್ಕೆ ಧ್ರುವ ಸರ್ಜಾ ಧ್ವನಿ ನೀಡಿದ್ದಾರೆ. ಪೊಗರು ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ 'ನನ್ನ ಸಿನಿಮಾ ನೋಡುತ್ತೀರೋ ಇಲ್ವೋ, ಆದರೆ ಅಣ್ಣ ಸಿನಿಮಾ ಮಾತ್ರ ಮಿಸ್ ಮಾಡಬೇಡಿ,' ಎಂದು ಧ್ರುವ ಮಾತನಾಡಿದ್ದರು.

ಅಭಿಮಾನಿಗಳಿಂದ ಬೇಬಿ ಚಿರು ಪೋಟೋ ಎಡಿಟ್; ಮೇಘನಾ ಫುಲ್ ಖುಷ್!

ಇನ್‌ಸ್ಟಾಗ್ರಾಂನಲ್ಲಿ ಪೊಗರು ಫಿಲ್ಟರ್ ಬಳಸಿ ಚಿಕ್ಕಪ್ಪನ ಸಿನಿಮಾಗೆ ಬೆಂಬಲ ಕೊಟ್ಟ ಜೂನಿಯರ್‌ ಈಗ ತಂದೆಯ ಕೊನೆ ಚಿತ್ರಕ್ಕೆ ಲಕ್ಕಿ ಬಾಯ್ ಆಗಲಿದ್ದಾರೆ.