ಅಶ್ವಿನಿ ಫೋಟೋ ದುರ್ಬಳಕೆ ಮಾಡಿಕೊಳ್ಳುತ್ತಿರುವ ಯೂಟ್ಯೂಬರ್‌ಗಳಿಗೆ ಉತ್ತರ ಕೊಟ್ಟ ಪತ್ರಕರ್ತ ಬಿ ಗಣಪತಿ.... 

ಸೋಷಿಯಲ್ ಮೀಡಿಯಾ ಜಮಾನದಲ್ಲಿ ಯಾರು ಯಾವ ಮಾಹಿತಿ ಹಂಚಿಕೊಂಡರೂ ಅದು ಸತ್ಯ ಎಂದು ನಂಬುವ ಜನರಿದ್ದಾರೆ. ಅಲ್ಲಿಗೆ ನೋಡಿ ಸುಮ್ಮನಾಗದ ಜನರು ಒಂದಿಷ್ಟು ಪಾಸಿಟಿವ್ ಒಂದಿಷ್ಟು ನೆಗೆಟಿವ್ ಕಾಮೆಂಟ್‌ ಕೂಡ ಪಾಸ್ ಮಾಡುತ್ತಾರೆ. ಒಳ್ಳೆಯವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು, ಅವರ ಫೋಟೋವನ್ನು ದುರ್ಬಳಕೆ ಮಾಡಿಕೊಳ್ಳುವುದು ತಪ್ಪು ಎಂದು ಧ್ವನಿ ಎತ್ತಿದ್ದಾರೆ ಗಣಪತಿ. 

'ಇತ್ತೀಚಿನ ದಿನಗಳಲ್ಲಿ ಯೂಟ್ಯೂಬರ್‌ಗಳು ವ್ಯೂಸ್‌ಗೋಸ್ಕರ ಬಹಳ ದಾರಿ ತಪ್ಪುವ ಹಾದಿ ತಪ್ಪುವ ಕೆಲಸ ಮಾಡುತ್ತಿದ್ದಾರೆ..ನಾವು ಮೇಲ್ ಮುಖ ಮಾಡಿ ಉಗಿದರೆ ನಮ್ಮ ಮೇಲೆ ಬೀಳುತ್ತದೆ ಅನ್ನೋ ಕನಿಷ್ಟ ಮಟ್ಟದ ಪರಿಜ್ಞಾನ ಇಲ್ಲದೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಒಂದು ಮಾತು ಹೇಳುತ್ತೀನಿ, ಅಪ್ಪು ಅವರ ಶ್ರೀಮತಿ ಅಶ್ವಿನಿ ....ನನ್ನ 40 ವರ್ಷ ಪತ್ರಿಕೋದ್ಯಮದಲ್ಲಿ ಖಂಡಂತೆ ಅತಂಹ ಸಾತ್ವಿಕವಾದ ಹೆಣ್ಣು ಮಗಳನ್ನು ನಾನು ಎಲ್ಲೂ ನೋಡಿಲ್ಲ. ಮೊನೆ ಮೊನೆ ವ್ಯೂಸ್‌ಗೋಸ್ಕರ ಆ ಹೆಣ್ಣುಮಗಳ ಬಗ್ಗೆ ಮಾಡಬಾರದನ್ನು ಮಾಡಿದ್ದಾರೆ' ಎಂದು ಆರ್‌ಜೆ ರಾಜೇಶ್ ಸಂದರ್ಶನದಲ್ಲಿ ಬಿ ಗಣಪತಿ ಮಾತನಾಡಿದ್ದಾರೆ.

ದೀಪಾವಳಿ ಕಳಿತ್ತಿದ್ದಂತೆ ಹಾಟ್ ಆಗಿ ಬದಲಾದ ಶ್ವೇತಾ ಶ್ರೀವಾತ್ಸವ್; ಆಟಂ ಬಾಂಬ್ 

'55-60 ವರ್ಷ ದಾಟಿದವರು ಕೂಡ ವೃದ್ಧನಾರಿ ಪತಿವ್ರತಾ ಅಂತಾರೆ...ಮಾಡುವುದೆಲ್ಲಾ ಮಾಡಿಕೊಂಡು ತಲೆಯ ಮೇಲೆ ಸೆರಗು ಹಾಕಿಕೊಂಡು ಇರುವಂತ ಕಾಲದಲ್ಲಿ ಇದ್ದೀವಿ ನಾವು. ಗಂಡ ಸತ್ತಾಗಲೂ ಹೊಸ ರೇಶ್ಮೆ ಸೀರೆ ಹುಟ್ಟುಕೊಂಡು ವಿತ್ ಮೇಕಪ್ ಆಭರಣ ಹೊಸ ಚಪ್ಪಲಿ ಹಾಕಿಕೊಂಡು ಬಂದವರನ್ನು ಕೂಡ ನೋಡಿದ್ದೀನಿ ಆದರೆ ಸಣ್ಣ ಮಕ್ಕಳಿದ್ದು ಸಣ್ಣ ವಯಸ್ಸಿನಲ್ಲಿ ಅಪ್ಪುನಂತಹ ಅಪ್ಪುವನ್ನು ಕಳೆದುಕೊಂಡು ...ಪ್ರಾಯಶ ಬೇರೆ ದೇಶದಲ್ಲಿ ಆಗಿದ್ದರೆ ಬೇರೆ ಚಿತ್ರರಂಗದಲ್ಲಿ ಆಗಿದ್ದರು ಅಥವೇ ನಮ್ಮಲೇ ಆಗಿದ್ದರೂ ಬೇರೆ ಮದುವೆ ಆಗುವ ಅಲೋಚನೆ ಬರುತ್ತಿತ್ತು. ಆದರೆ ಪುನೀತ್‌ರ ಶ್ರೀಮತಿಯಾಗಿ, ರಾಜ್‌ಕುಮಾರ್‌ ಮನೆಯ ಸೊಸೆಯಾಗಿ, ಆ ಮಕ್ಕಳ ತಾಯಿ ಆಗಿ ಅಷ್ಟು ಶುದ್ಧವಾಗಿ ಬದುಕುತ್ತಿರುವ ಹೆಣ್ಣುಮಗಳನ್ನ ನಾನು ನೋಡಿಲ್ಲ. ನಮ್ಮ ಯೂಟ್ಯೂಬರ್‌ಗಳಿಗೆ ಏನಾಗಿದೆ? ಅಂತಹ ಹೆಣ್ಣುಮಗಳ ಫೋಟೋವನ್ನು ಮಾರ್ಫ್‌ ಮಾಡಿ ಬೇರೆಯವರೊಟ್ಟಿಗೆ ಸೇರಿಸಿ ನಾನು ನಿನಗೆ ಬಾಳು ಕೊಡುತ್ತೀನಿ ಅಂತ ಎನ್ ಏನೋ ಬರೆದುಕೊಂಡು ಇರುತ್ತಾರೆ ಇದು ಬೇಸರವಾಗುತ್ತದೆ' ಎಂದು ಗಣಪತಿ ಹೇಳಿದ್ದಾರೆ. 

YouTube video player