ಜೋಗಿ ಪ್ರೇಮ್ ನಿರ್ದೇಶನದ, ಪತ್ನಿ ರಕ್ಷಿತಾ ನಿರ್ಮಾಣ 'ಏಕ್‌ ಲವ್ ಯಾ' ಸಿನಿಮಾವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ. ವಿಭಿನ್ನ ಸ್ಥಳಗಳಲ್ಲಿ ಪ್ರೇಮ್ ಸಿನಿಮಾ ಚಿತ್ರೀಕರಣ ಮಾಡುವುದರಲ್ಲಿ ಎತ್ತಿದ ಕೈ. ಆದರೀಗ ತೆಗೆದುಕೊಂಡಿರುವ ರಿಸ್ಕ್‌ ತುಂಬಾನೇ ದೊಡ್ಡದು ಎನ್ನಲಾಗಿದೆ. 

ಮೊದಲ ದೃಶ್ಯದಲ್ಲೇ ಬಿಲ್ಡಿಂಗ್‌ನಿಂದ ಹಾರಿದೆ: ರೀಷ್ಮಾ ನಾಣಯ್ಯ 

ಹೌದು! ಪುಲ್ವಾಮಾದಲ್ಲಿ ಯೋಧರ ಮೇಲೆ ದಾಳಿ ನಡೆದಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ ಹೌದು. ಹಿಂದಿಯ 'ಆರ್ಟಿಕಲ್ 370' ಚಿತ್ರದ ನಂತರ ಇಲ್ಲಿ ಯಾವ ಸಿನಿಮಾ ಚಿತ್ರೀಕರಣವೂ ನಡೆದಿರಲಿಲ್ಲ. ಈಗಲೂ ಕಾಶ್ಮೀರದಲ್ಲಿ ಉಗ್ರರ ಭೀತಿ ಸದಾ ಇರುತ್ತದೆ. ಆದರೂ ನಿರ್ದೇಶಕ ಜೋಗಿ ಪ್ರೇಮ್ ಚಿತ್ರೀಕರಣ ಮಾಡುವ ನಿರ್ಧಾರ ಮಾಡಿದ್ದಾರೆ. ಈ ವಿಚಾರದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Prem❣️s (@directorprems)

'ಕಾಶ್ಮೀರ ತಲುಪಿದೆವು. ಆರ್ಟಿಕಲ್ 370 ನಂತರ ಚಿತ್ರೀಕರಣ ಮಾಡುತ್ತಿರುವ ಮೊದಲ ಕನ್ನಡದ ಸಿನಿಮಾ ಏಕ್‌ ಲವ್‌ ಯಾ ಅಂತ ಹೇಳಲು ಹೆಮ್ಮೆಯಾಗುತ್ತಿದೆ,' ಎಂದು ಪ್ರೇಮ್ ಬರೆದುಕೊಂಡಿದ್ದಾರೆ.  'ಲೊಕೇಶನ್ ತುಂಬಾನೇ ಚೆನ್ನಾಗಿದೆ. ಇಡೀ ತಂಡ ಬಂದು ಲ್ಯಾಂಡ್‌ ಆಗಿದ್ದೀವಿ. ಚಿತ್ರೀಕರಣ ಪ್ರಾರಂಭಿಸಬೇಕಿದೆ,' ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ. 

ಸಿಗರೇಟ್‌, ಎಣ್ಣೆ ಬಾಟ್ಲು, ಥ್ರಿಲ್ಲರ್ ಲವ್‌ ಸ್ಟೋರಿ ಬಗ್ಗೆ ಸತ್ಯ ಬಿಚ್ಚಿಟ್ಟ ಜೋಗಿ ಪ್ರೇಮ್! 

ಚಿತ್ರೀಕರಣ ಮಾಡುತ್ತಿರುವ ಏಕ್‌ ಲವ್‌ ಯಾ ತಂಡಕ್ಕೆ ಬಿಗಿ ಭದ್ರತೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಈ ಹಿಂದೆ ಕಾಶ್ಮೀರ ಹಾಗೂ ಲಡಾಕ್‌ನಲ್ಲಿ ಚಿತ್ರೀಕರಣ ಮಾಡಲು ಲೊಕೇಶನ್‌ ನೋಡಲು ಹೋಗಿದ್ದರು. ಆ ಫೋಟೋಗಳನ್ನು ಪ್ರೇಮ್ ಶೇರ್ ಮಾಡಿಕೊಂಡಿದ್ದಾರೆ. ರಕ್ಷಿತಾ ತಮ್ಮ ರಾಣಾ ಈ ಚಿತ್ರದಲ್ಲಿ ನಾಯಕನಾಗಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಜೋಡಿಯಾಗಿ ಮಿಂಚಲಿದ್ದಾರೆ.