ಹೊಸ ಚಿತ್ರ ಘೋಷಣೆ ಮಾಡಿದ ನಿರ್ದೇಶಕ ಜೋಗಿ ಪ್ರೇಮ್ ಚಿತ್ರಕ್ಕೆ ನಟ ಧ್ರುವ ಸರ್ಜಾ ಹೀರೋ ಎಂಬುದು ಸದ್ಯದ ಸುದ್ದಿ .
ನಿರ್ದೇಶಕ ಜೋಗಿ ಪ್ರೇಮ್ ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಇದು ಅವರ ನಿರ್ದೇಶನದ 9ನೇ ಸಿನಿಮಾ. ಈಗಷ್ಟೆ ಚಿತ್ರದ ಸ್ಕ್ರಿಪ್‌ಟ್ ಪೂಜೆ ಮುಗಿದಿದೆ. ಈ ಚಿತ್ರಕ್ಕೆ ನಟ ಧ್ರುವ ಸರ್ಜಾ ಹೀರೋ ಎಂಬುದು ಸದ್ಯದ ಸುದ್ದಿ. ಈ ವಿಚಾರವನ್ನು ಪ್ರೇಮ್ ಅವರು ಆಗಸ್‌ಟ್ 15ರ ಹೊತ್ತಿಗೆ ರಿವೀಲ್ ಮಾಡಲಿದ್ದಾರೆ.
ಇದನ್ನು ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ ಎನ್ನಲಾಗಿದೆ. ಈಗ ಧ್ರುವ ಸರ್ಜಾ ಉದಯ್ ಮೆಹ್ತಾ ನಿರ್ಮಾಣದ, ಎ ಪಿ ಅರ್ಜುನ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಬಳಿಕ ಪ್ರೇಮ್ ಚಿತ್ರಕ್ಕೆ ಜತೆಯಾಗುವ ಸಾಧ್ಯತೆ ಇದೆ.
ಸದ್ಯಕ್ಕೆ ಚಿತ್ರಕಥೆ ಪೂರ್ತಿ ಮಾಡಿಕೊಂಡಿರುವ ಪ್ರೇಮ್, ಹೊಸ ಚಿತ್ರದ ಸ್ಕ್ರಿಪ್‌ಟ್ ಪೂಜೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕಥೆಯ ಮೊದಲ ಪುಟದಲ್ಲಿ ಬರೆದಿರುವ ಸಾಲುಗಳು ಕತೆಯ ಪವರ್ ಹೇಳುತ್ತಿದೆ. ‘ಯುದ್ಧದಲ್ಲಿ ಹುತಾತ್ಮನಾದರೆ ಸ್ವರ್ಗವು ಅವನನ್ನು ಸ್ವಾಗತಿಸುತ್ತದೆ. ಒಂದು ವೇಳೆ ಯುದ್ಧದಲ್ಲಿ ಅವನು ಜಯ ಗಳಿಸಿದರೆ ಸಿಂಹಾಸನ ಅವನಿಗಾಗಿ ಕಾಯುತ್ತದೆ. ಅದ್ದರಿಂದ ಯುದ್ಧ ಯಾವಾಗಲೂ ಒಳ್ಳೆಯದೆ. ಈಗ ಯುದ್ಧ ಆರಂಭವಾಗಿದೆ..’ ಎನ್ನುವ ಸಾಲುಗಳನ್ನು ಒಳಗೊಂಡ ಚಿತ್ರಕಥೆಯ ಮೊದಲ ಪುಟ ಕುತೂಹಲ ಮೂಡಿಸಿದೆ.
ಶೂಟಿಂಗ್ ವೇಳೆ ನಟ ಪ್ರಕಾಶ್ ರಾಜ್‌ಗೆ ಗಾಯ, ಚಿಕಿತ್ಸೆಗಾಗಿ ಹೈದರಾಬಾದ್‌ಗೆ
ಪಕ್ಕಾ ಮಾಸ್ ಹಾಗೂ ಸಾಹಸಮಯ ಸಿನಿಮಾ ಇದಾಗಲಿದೆ. ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಶನ್‌ನ ಹೊಸ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ. ಗೆದ್ದರೆ ಸಿಂಹಾಸನ, ಹುತಾತ್ಮನಾದರೆ ವೀರ ಸ್ವರ್ಗ ಎಂಬ ಟ್ಯಾಗ್‌ಲೈನ್‌ನಲ್ಲಿ ಸಿನಿಮಾದ ಒನ್‌ಲೈನ್ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು.
"
ಕತೆ ರೆಡಿ ಇತ್ತು. ಹೀಗಾಗಿ ನಮ್ಮ ತಂಡದ ಸಮ್ಮುಖದಲ್ಲಿ ಒಳ್ಳೆಯ ದಿನ ಪೂಜೆ ಮಾಡಿದ್ದೇವೆ. ಉತ್ತಮ ಕತೆ. ಪವರ್‌ಫುಲ್ ಮಾಸ್ ಸಿನಿಮಾ ಎಂಬುದು ಸತ್ಯ. ಚಿತ್ರದ ನಾಯಕ ಯಾರು, ಶೀರ್ಷಿಕೆ ಏನು ಇತ್ಯಾದಿ ವಿವರ ಸದ್ಯದಲ್ಲೇ ಕೊಡುತ್ತೇನೆ ಎಂದಿದ್ದಾರೆ ಜೋಗಿ ಪ್ರೇಮ್ .
