ಜೇಮ್ಸ್‌ ಸಿನಿಮಾ ಸೆಟ್‌ನಲ್ಲಿ ಅಪ್ಪು ಹೇಗಿರುತ್ತಿದ್ದರು? ವಿಡಿಯೋ ನೋಡಿಕೊಂಡು ತಮ್ಮ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತಿದ್ದರಂತೆ.  

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಕೊನೆಯ ಸಿನಿಮಾ ಜೇಮ್ಸ್ ಮಾರ್ಚ್ 17ರಂದು ಬಿಡುಗಡೆಗೆ ಸಿದ್ಧವಾಗಿದೆ. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಮಾತ್ರವಲ್ಲ, ಇಡೀ ಕರ್ನಾಟಕ ಸಾಥ್ ಕೊಟ್ಟಿದೆ. ಪೋಸ್ಟರ್ ಲುಕ್ ಮತ್ತು ಟೀಸರ್ ಬಿಡುಗಡೆಯಾದ ದಿನದಿಂದಲೂ ಅಭಿಮಾನಿಗಳು ಇದು ನಮ್ಮ ಸಿನಿಮಾ ಅನ್ನುವ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ (Social Media) ಪ್ರಚಾರ ಮಾಡುತ್ತಿದ್ದಾರೆ. ಎರಡು ವಿಭಿನ್ನ ಶೇಡ್‌ಗಳಲ್ಲಿ ಮಿಂಚಿರುವ ಅಪ್ಪು ಬಗ್ಗೆ ನಿರ್ಮಾಪಕ ಕಿಶೋರ್ ಪತ್ತಿಕೊಂಡ (Kishore Pathikonda) ಮಾತನಾಡಿದ್ದಾರೆ. 

ಕಿಶೋರ್ ಮಾತು:
'ಟೀಸರ್ ಯಾವ ರೀತಿ ಇರುತ್ತೆ. ಜೇಮ್ಸ್‌ (James) ಸಿನಿಮಾವೂ ಹಾಗೆ ಇರುತ್ತೆ. ಸಿನಿಮಾದಲ್ಲಿ ಮೂರು ಶೇಡ್‌ ಇವೆ. ಇದೇ ಮೊದಲು ಪುನೀತ್ ಅಣ್ಣ ಒಂದು ಸಿನಿಮಾದಲ್ಲಿ ಮೂರು ಶೇಡ್ ಮಾಡಿರುವುದು. ಮಿಲಿಟ್ರಿ (Militry) ಪಾತ್ರ ಕೂಡ ಇದೇ ಮೊದಲು ಮಾಡಿರುವುದು. ಇವತ್ತಿಗೂ ನನಗೆ ಗೊತ್ತಿರುವ ಪ್ರಕಾರ ಜೇಮ್ಸ್ ಸಿನಿಮಾದ ಪ್ರತಿಯೊಂದೂ ಶಾಟ್ ಅವರ ಮೊಬೈಲ್‌ನಲ್ಲಿ ಇದೆ. ನಮ್ಮ ಫಸ್ಟ್‌ ಶೆಡ್ಯೂಲ್‌ ಹೊಸಪೇಟೆಯಲ್ಲಿ (Hosapete) ನಡೆಯಿತು. ಅಲ್ಲಿಯೇ ಗಂಗಾವತಿ ಹತ್ತಿರ ಅಪ್ಪು ಅಣ್ಣ ಕರೆದರು. ಈ ಫೈಟ್‌ನ ಮೊಬೈಲ್‌ನಲ್ಲಿ ಹಾಕಿಕೊಳ್ಳಬಹುದಾ ಅಂತ. ಇಲ್ಲ ಪ್ರೊಡ್ಯೂಸರ್‌ನ ಒಂದು ಮಾತು ಕೇಳಬೇಕು ಅಂದ್ರು. ನಾನು ಹೇಳಿದೆ, ಏನ್ ಅಣ್ಣ ಈ ಸಿನಿಮಾ ನಿಮ್ದು ನೀವು ಪ್ರೊಡ್ಯೂಸರ್ ಅಂತ. ನಿರ್ದೇಶಕರನ್ನು ಕೇಳಿದ್ದರು. ಪ್ರತಿಯೊಂದೂ ಶಾಟ್ ಫೈಟ್‌ ಹಾಡುಗಳನ್ನು, ತಮ್ಮ ಮೊಬೈಲ್‌ಗೆ ಹಾಕೊಂಡು ಹೇಗೆ ಬಂದಿದೆ ಅಂತ ನೋಡುತ್ತಿದ್ದರು. ಅಮೇಲೆ ಮೇಡಂಗೂ ತೋರಿಸಿದ್ದಾರೆ. ಹೇಗೆ ಬಂದಿದೆ ನೋಡಿ ಚೆನ್ನಾಗಿದೆ ಅಲ್ವಾ ಅಂತ. ಅಪ್ಪು ಅಣ್ಣ ತುಂಬಾ ಖುಷಿ ಪಟ್ಟು ಮಾಡಿರುವ ಸಿನಿಮಾ ಇದು,' ಎಂದು ನಿರ್ದೇಶಕ ಕಿಶೋರ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.

'ಎಲ್ಲಾ ವಿಡಿಯೋ ಕ್ಲಿಪ್‌ ಅನ್ನು ಫ್ರೆಂಡ್ಸ್‌ಗೆ ತೋರಿಸುತ್ತಿದ್ದರು. ಹೇಗಿದೆ ನೋಡು ಅಂತಿದ್ರು. ಚಿತ್ರೀಕರಣಕ್ಕೆ ಅಣ್ಣ ಡೇಟ್ ಕೊಡ್ತಿದ್ರೆ, ನಾವು 10 ದಿನ ಮೊದಲೇ ಈ ರೀತಿ ಅಣ್ಣ ಈ ಜಾಗ ಅಂತ ಹೇಳುತ್ತಿದ್ದೆ. ನೀವು ಇವೆಲ್ಲಾ ಯಾಕೆ ಹೇಳುತ್ತಿದ್ದೀರಿ, ಅಂತ ಹೇಳುತ್ತಿದ್ದರು. ಅವರ ಜೊತೆ ಮಾತನಾಡುವುದಕ್ಕೆ ನನಗೆ ಬೇಕು ಅಲ್ವಾ ಏನಾದರೂ. ಅವರಿಗೂ ದಿನ ನೂರಾರು ಕೆಲಸ ಪ್ರೊಡಕ್ಷನ್ ಮಾಡ್ತಾರೆ, ಆಡಿಯೋ ಮಾಡ್ತಾರೆ. ಬೇರೆ ಶೂಟಿಂಗ್ ಇರುತ್ತದೆ. ನನಗೆ ಸ್ವಾರ್ಥ ಅವರ ಜೊತೆ ಇರಬೇಕು ಅಂತ. ಈ ತರ ಮಾಡ್ಲಾ? ಅವರಿಗೆ ಕರೆಯಿಸಿ ಮಾಡೋಣ ಅಂತ ಪ್ರತಿಯೊಂದೂ ಚರ್ಚೆ ಮಾಡುತ್ತಿದ್ದರು. ಅವರಿಗೆ ಗಾಯ ಆಗುತ್ತೆ ಅನ್ನೋ ಚಿಂತೆ ನಮಗೆ ಅವರು ಇಲ್ಲ. ಬೇಡ ಬೇಡ ನಾನೇ ಮಾಡ್ತೀನಿ ಅಂತ ಹೇಳುತ್ತಿದ್ದರು. ಡಿಫರೆಂಟ್ ಅಗಿ ಮಾಡಬೇಕು, ಅಂದ್ರೆ ಅವರು10 ದಿನ ಮುನ್ನವೇ ತಯಾರಿ ಮಾಡಿಕೊಳ್ಳುತ್ತಿದ್ದರು,' ಎಂದು ಕಿಶೋರ್ ಹೇಳಿದ್ದಾರೆ.

Making of James Movie 2022: ಚಿತ್ರದ ಎಲ್ಲಾ ಫೈಟ್​ ಸೀನ್‌ಗಳು ಅಪ್ಪು ಸರ್ ಮೊಬೈಲ್​ನಲ್ಲಿತ್ತು: ಚೇತನ್‌ಕುಮಾರ್

'ಪುನೀತ್ ಸರ್‌ಗೆ ಸ್ಟಾರ್‌ಡಮ್ ಇರ್ಲಿಲ್ಲ. ಇನ್ನೂ ನನಗೆ ಪುನೀತ್ ಸರ್‌ಗೆ ಸಿನಿಮಾ ಮಾಡ್ತೀನಿ ಅಂತ ನನಗೆ ಗರ್ವ ಇತ್ತು. ನಾನು ಹೀರೋ ನಾನು ಸೆಲೆಬ್ರಿಟಿ ಅಂತ ಅವರಿಗೆ ಏನೂ ಇಲ್ಲ. ನಾವು ಅವರ ಜೊತೆ ಲಾಸ್ಟ್‌ ಹೋಗಿದ್ದು ಕಾಶ್ಮೀರ್‌. 10 ದಿನ ಒಟ್ಟಿಗೆ ಇರ್ತಿದ್ವಿ. ನೆಕ್ಸ್ಟ್ ಫ್ಯಾಮಿಲಿ ಜೊತೆ ಬರಬೇಕು. ಮಕ್ಕಳು ಎಲ್ಲಾ ಬರಬೇಕು ಅಂತ ಪುನೀತ್ ಅವರು ಹೇಳುತ್ತಿದ್ದರು,' ಎಂದು ಲಾಸ್ಟ್‌ ಜರ್ನಿ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.

ಜೇಮ್ಸ್‌ ಟೀಸರ್‌ ನೋಡಿ ಅಶ್ವಿನಿ Puneeth Rajkumar ಏನ್ ಹೇಳಿದ್ದಾರೆ ಗೊತ್ತಾ?

ಸಾವಿನ ಸಂಗತಿ:
'ನಾವು ಧಿರೇನ್, ಅಶ್ವಿನಿ ಮೇಡಂ ತಮ್ಮ ಎಲ್ಲಾ ಭಜರಂಗಿ 2 (Bhajarangi 2) ಸಿನಿಮಾ ನೋಡೋಕೆ ಹೋಗಿದ್ವಿ. ಇಂಟರ್ವಲ್ ಸಮಯದಲ್ಲಿ ನಮಗೆ ಕಾಲ್ ಬಂದು. ಆಮೇಲೆ ಎಲ್ಲರಿಗೂ ಬಂತು. ಅಲ್ಲಿ ಯಾರಿಗೂ ಗೊಂದಲ ಆಗಬಾರದು, ಅಂತ ನಾವು ಹೊರ ಬಂದು ಮಾತನಾಡಿದ್ದು. ಮೈಲ್ಡ್‌ ಹಾರ್ಟ್‌ ಅಟ್ಯಾಕ್ (Heart Attack) ಆಗಿದೆ ಅಂತ ಹೇಳಿದ್ರು. ವರ್ಕೌಟ್ ಆಹಾರ, ಎಲ್ಲಾ ಲಿಮಿಟ್. ಆರೋಗ್ಯವಾಗಿರುತ್ತಾರೆ, ತೋರಿಸಿಕೊಂಡು ಬರುತ್ತಾರೆ ಅಂತ ಸುಮ್ಮನೆ ಆದ್ವಿ. ಅದೇ ಭಾವನೆಯಲ್ಲಿ ನಾವು ವಿಕ್ರಂ ಆಸ್ಪತ್ರೆಗೆ ಹೋಗ್ತಿದ್ವಿ. ದಾರಿಯಲ್ಲಿ ಇದ್ದಾಗ ಕರೆ ಮಾಡಿ ಹೇಳುತ್ತಾರೆ ಹೋಗ್ಬಿಟ್ರು. ನಾವು ಕರೆ ಮಾಡಿದವರ ಮೇಲೆ ರೇಗಾಡಿ ಮಾತನಾಡಿದ್ವಿ. ನಿರ್ದೇಶಕರಿಗೆ ಕರೆ ಮಾಡಿ ಎಲ್ಲಾ ವಿಚಾರವನ್ನೂ ತಿಳಿಸಿದ್ವಿ. ಅವರು ಮಲಗಿದ್ದು ಇವತ್ತು ಕಣ್ಣು ಮುಂದೆ ಇದೆ,' ಎಂದು ನಿರ್ಮಾಪಕರು ಮಾತನಾಡಿದ್ದಾರೆ.