Asianet Suvarna News Asianet Suvarna News

Kishore Pathikonda: 'ಜೇಮ್ಸ್‌'ಗೆ 'ದಿ ಕಾಶ್ಮೀರ್‌ ಫೈಲ್‌' ಅಲ್ಲ 'ಆರ್‌ಆರ್‌ಆರ್‌' ಅಡ್ಡಿ

ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ ಅಭಿನಯದ ಜೇಮ್ಸ್‌ ಚಿತ್ರಕ್ಕೆ ‘ದಿ ಕಾಶ್ಮೀರ್‌ ಫೈಲ್ಸ್‌’ಗಿಂತ ಆರ್‌ಆರ್‌ಆರ್‌ ಸಿನಿಮಾದ್ದೆ ಸಮಸ್ಯೆ ಉಂಟಾಗಿದೆ. ಎಂದು 'ಜೇಮ್ಸ್‌' ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ ದೂರಿದರು.

James Producer Kishore Pathikonda Speaks About Theatre Issue Due to the RRR gvd
Author
Bangalore, First Published Mar 24, 2022, 3:30 AM IST

ಹೊಸಪೇಟೆ (ಮಾ.24): ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್ (Puneeth Rajkumar) ಅಭಿನಯದ 'ಜೇಮ್ಸ್‌' (James) ಚಿತ್ರಕ್ಕೆ ‘ದಿ ಕಾಶ್ಮೀರ್‌ ಫೈಲ್ಸ್‌’ಗಿಂತ (The Kashmir Files) 'ಆರ್‌ಆರ್‌ಆರ್‌' (RRR) ಸಿನಿಮಾದ್ದೆ ಸಮಸ್ಯೆ ಉಂಟಾಗಿದೆ. ಬೆಂಗಳೂರಿನಲ್ಲಿ 'ಜೇಮ್ಸ್‌' ಚಿತ್ರ ತೆಗೆದು 'ಆರ್‌ಆರ್‌ಆರ್‌' ಸಿನಿಮಾ ಹಾಕಲು ಹುನ್ನಾರ ನಡೆದಿದೆ ಎಂದು 'ಜೇಮ್ಸ್‌' ಚಿತ್ರದ ನಿರ್ಮಾಪಕ ಕಿಶೋರ್‌ ಪತ್ತಿಕೊಂಡ (Kishore Pathikonda) ದೂರಿದರು.

ನಗರದಲ್ಲಿ ಬಾಲಾ ಚಿತ್ರಮಂದಿರಕ್ಕೆ 'ಜೇಮ್ಸ್‌' ಚಿತ್ರದಲ್ಲಿ ನಟಿಸಿರುವ ನಟ ಶ್ರೀಕಾಂತ್‌ (Srikanth) ಭೇಟಿ ನೀಡಿ ಪ್ರೇಕ್ಷಕರೊಂದಿಗೆ ಚರ್ಚಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ದಿ ಕಾಶ್ಮೀರ್‌ ಫೈಲ್ಸ್‌’ ಚಿತ್ರದ ಕುರಿತು ನನ್ನ ಬಳಿ ಬಿಜೆಪಿಯ ಯಾವ ಶಾಸಕರು ಮಾತನಾಡಿಲ್ಲ. ಆದರೆ, 'ಆರ್‌ಆರ್‌ಆರ್‌' ಚಿತ್ರವನ್ನು ಬೆಂಗಳೂರಿನ ಶ್ರೀನಿವಾಸ್‌, ವೆಂಕಟೇಶ್ವರ ಮತ್ತು ನವರಂಗ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲು ಈಗಾಗಲೇ ತಯಾರಿ ನಡೆದಿದೆ. ಇದರಿಂದ ಜೇಮ್ಸ್‌ ಚಿತ್ರಕ್ಕೆ ಹೊಡೆತ ಬೀಳಲಿದೆ. ಜೇಮ್ಸ್‌ ಚಿತ್ರ ಸಕ್ಸಸ್‌ ಆಗಿದೆ. ಪ್ರೇಕ್ಷಕರು ಚಿತ್ರ ನೋಡಲು ಬರುತ್ತಿದ್ದಾರೆ. 

James 2022: ಕರ್ನಾಟಕ ಸಂಘ ಕತಾರ್ ವತಿಯಿಂದ 'ಜೇಮ್ಸ್' ಚಿತ್ರದ ವಿಶೇಷ ಪ್ರದರ್ಶನ

ಈಗ ಪರೀಕ್ಷೆ ಕಾಲ, ಇನ್ನೂ ಕುಟುಂಬದೊಂದಿಗೆ ಚಿತ್ರ ವೀಕ್ಷಣೆಗೆ ಎರಡನೇ ವಾರದಲ್ಲಿ ಜನ ಆಗಮಿಸಲಿದ್ದಾರೆ. ಅಭಿಮಾನಿಗಳೇ ಚಿತ್ರವನ್ನು ಸಕ್ಸಸ್‌ ಮಾಡಿದ್ದಾರೆ. ಇಂತಹದರಲ್ಲಿ ಆರ್‌ಆರ್‌ಆರ್‌ ಚಿತ್ರ ತರಲು ಹೊರಟಿರುವುದು ಸರಿಯಲ್ಲ ಎಂದರು. ‘ದಿ ಕಾಶ್ಮೀರ್‌ ಫೈಲ್ಸ್‌’ ಒಂದು ಪ್ರದರ್ಶನಕ್ಕೆ ಕೋರುತ್ತಿದ್ದಾರೆ. ಅದು ರಾತ್ರಿ ಹೊತ್ತಿನಲ್ಲಿ ಕೇಳುತ್ತಿದ್ದಾರೆ. ಇದರಿಂದ ನಮಗೆ ಸಮಸ್ಯೆ ಉಂಟಾಗುವುದಿಲ್ಲ. ಆದರೆ, ಆರ್‌ಆರ್‌ಆರ್‌ದಿಂದ ಸಮಸ್ಯೆ ಆಗಲಿದೆ. ಇನ್ನೂ ಲಕ್ಷಾಂತರ ಜನ ಸಿನಿಮಾ ನೋಡಬೇಕು. ಒಂದೇ ವಾರಕ್ಕೆ ಚಿತ್ರ ತಂಡದ ಮೇಲೆ ಒತ್ತಡ ತರುತ್ತಿರುವುದು ಸರಿಯಲ್ಲ, ಚಿತ್ರ ರನ್ನಿಂಗ್‌ನಲ್ಲಿದೆ. ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ ಎಂದು ಹೇಳಿದರು.

ಜೇಮ್ಸ್‌ ಚಿತ್ರಕ್ಕೆ ಅಭಿಮಾನಿಗಳ ಬೆಂಬಲ ಇದೆ. ಅವರ ಬೆಂಬಲದಿಂದಲೇ ಚಿತ್ರ ಇಷ್ಟೊಂದು ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ತಮ್ಮ ಜನ್ಮ ದಿನ ಇದ್ದರೂ ಅಭಿಮಾನಿಗಳ ಜತೆಗೆ ಹೊತ್ತು ಕಳೆಯಲು ನಟ ಶ್ರೀಕಾಂತ್‌ ಅವರು ಬಳ್ಳಾರಿ, ಹೊಸಪೇಟೆಗೆ ಆಗಮಿಸಿದ್ದಾರೆ ಎಂದರು. ಪುನೀತ್‌ ಅವರ ಜತೆಗೆ ಕೊನೆ ಮೂರು ದಿನ ಕಳೆದಿರುವೆ. ಅವರೊಬ್ಬ ಸರಳ ವ್ಯಕ್ತಿತ್ವದವರು, ಹೊಸಪೇಟೆ ಮೇಲೆ ಅವರಿಗೆ ಅಪಾರ ಪ್ರೀತಿ ಇತ್ತು. ದೊಡ್ಮನೆಯ ಶಿವಣ್ಣ ಅವರ ಜತೆಗೆ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತ ಮಾಡುವೆ ಎಂದು ಜೇಮ್ಸ್‌ ಚಿತ್ರದ ನಿರ್ಮಾಪಕ ಕಿಶೋರ್‌ ಹೇಳಿದರು.

ನಟ ಶ್ರೀಕಾಂತ್‌ ಮಾತನಾಡಿ, ಪುನೀತ್‌ ರಾಜಕುಮಾರ ಅವರು ಎಲ್ಲರ ಹೃದಯದಲ್ಲಿದ್ದಾರೆ. ಜೇಮ್ಸ್‌ ಚಿತ್ರವನ್ನು ಎಲ್ಲರೂ ಸೇರಿ ಸೂಪರ್‌ ಹಿಟ್‌ ಮಾಡಿದ್ದಾರೆ. ಹೊಸಪೇಟೆ, ಗಂಗಾವತಿ ಭಾಗದಲ್ಲಿ ಶೂಟಿಂಗ್‌ ಮಾಡಿದೇವು. ಪುನೀತ್‌ ಅವರ ಬರ್ತಡೇ ದಿನ ಸಿನಿಮಾ ಬಿಡುಗಡೆಯಾಗಿದೆ. ಈ ದಿನ ನನ್ನ ಬರ್ತಡೇ. ಹೀಗಾಗಿ ಪ್ರೇಕ್ಷಕರನ್ನು ಭೇಟಿ ಮಾಡಲು ಬಂದಿರುವೆ. ಜೇಮ್ಸ್‌ ಚಿತ್ರ ಆಂಧ್ರಪ್ರದೇಶನಲ್ಲೂ ಹಿಟ್‌ ಆಗಿದೆ. ಕರ್ನಾಟಕದಲ್ಲಿ ಸೂಪರ್‌ ಹಿಟ್‌ ಆಗಿದೆ ಎಂದರು.

'ಜೇಮ್ಸ್' ಸಿನಿಮಾ ನೋಡಿದ್ರಾ Jr NTR?; RRR ಸುದ್ದಿಗೋಷ್ಠಿಯಲ್ಲಿ ಪುನೀತ್ ಬಗ್ಗೆ ಮಾತು

4 ದಿನದಲ್ಲಿ ರು.100 ಕೋಟಿ ಕ್ಲಬ್‌ ಸೇರಿದ ಜೇಮ್ಸ್‌: ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಜೇಮ್ಸ್‌’ ಚಿತ್ರ ದಾಖಲೆ ಮೇಲೆ ದಾಖಲೆ ಬರೆಯುತ್ತಿದೆ. ಸಿನಿಮಾ 4 ದಿನಕ್ಕೆ ರು.100 ಕೋಟಿ ಗಳಿಕೆ ದಾಖಲಿಸಿದ ಲೆಕ್ಕಾಚಾರ ಗಾಂಧಿನಗರದಿಂದ ಬಂದಿದೆ. ಈ ಮೂಲಕ ನಾಲ್ಕು ದಿನದಲ್ಲಿ ರು.100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ ಎಂಬ ಕೀರ್ತಿಯನ್ನು ಜೇಮ್ಸ್‌ ಸಿನಿಮಾ ಮುಡಿಗೇರಿಸಿಕೊಂಡಿದೆ. ಕನ್ನಡ ಸಿನಿಮಾಗಳು ರು.100 ಕೋಟಿ ಕ್ಲಬ್‌ ಸೇರುವುದು ಅಪರೂಪ ಎಂದು ಹೇಳುತ್ತಿದ್ದ ಕಾಲವಿತ್ತು. ಆದರೆ ಅಪ್ಪು ಅದನ್ನು ಸುಳ್ಳು ಮಾಡಿದ್ದಾರೆ. 

ಅವರು ನಟಿಸಿದ ಕೊನೆಯ ಸಿನಿಮಾ ದಾಖಲೆ ವೇಗದಲ್ಲಿ ರು.100 ಕೋಟಿ ಕ್ಲಬ್‌ ಸೇರಿದೆ. ಈ ವೇಗ ಇನ್ನೂ ನಿಂತಿಲ್ಲ. ಪ್ರೇಕ್ಷಕರು ಮುಗಿಬಿದ್ದು ಜೇಮ್ಸ್‌ ಸಿನಿಮಾ ನೋಡುತ್ತಿದ್ದಾರೆ. ಅಪ್ಪು ಅವರ ಮೇಲಿನ ಪ್ರೀತಿಯಿಂದ ಆರಂಭದ ದಿನವೇ ಪ್ರೇಕ್ಷಕರು ದಾಖಲೆ ಸಂಖ್ಯೆಯಲ್ಲಿ ಜೇಮ್ಸ್‌ ಸಿನಿಮಾ ನೋಡಿದ್ದರು. ರಾಜ್ಯವಷ್ಟೇ ಅಲ್ಲದೆ ಹೊರದೇಶಗಳಲ್ಲೂ ಜೇಮ್ಸ್‌ ಬಿಡುಗಡೆ ಸಂಭ್ರಮ ನಡೆದಿತ್ತು. ಅದೆಲ್ಲಕ್ಕೂ ಪುರಾವೆ ಎಂಬಂತೆ ದಾಖಲೆ ಗಳಿಕೆಯ ಲೆಕ್ಕಾಚಾರ ಬಂದಿದೆ. ಚೇತನ್‌ ಕುಮಾರ್‌ ನಿರ್ದೇಶನದ, ಕಿಶೋರ್‌ ಪತ್ತಿಕೊಂಡ ನಿರ್ಮಾದ ಜೇಮ್ಸ್‌ ಚಿತ್ರತಂಡದ ದಾಖಲೆಗಳ ಸಂಖ್ಯೆ ಇನ್ನಷ್ಟುಹೆಚ್ಚಾಗುವ ನಿರೀಕ್ಷೆ ಇದೆ.

Follow Us:
Download App:
  • android
  • ios