ಭಾರೀ ಯಶಸ್ಸಿನೊಂದಿಗೆ ಮುನ್ನುಗ್ಗುತ್ತಿದೆ ’ಯಜಮಾನ’ ಚಿತ್ರ | ಮುಸುಕುಧಾರಿಯಾಗಿ ಯಜಮಾನ ವೀಕ್ಷಿಸಿದ ಜಗ್ಗೇಶ್ | ಕನ್ನಡ ಚಿತ್ರಗಳಿಗೆ ಪ್ರೋತ್ಸಾಹಿಸಿ ಎಂದು ವಿನಂತಿ ಮಾಡಿಕೊಂಡಿದ್ದಾರೆ
ಬೆಂಗಳೂರು (ಮಾ. 07): ಅಭಿಮಾನಿಗಳ ನಿರೀಕ್ಷೆಯನ್ನು ಸುಳ್ಳು ಮಾಡದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ’ಯಜಮಾನ’ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ದರ್ಶನ್ ನೋಡಿ ಫುಲ್ ಥ್ರಿಲ್ ಆಗಿದ್ದಾರೆ.
ತೂಗುದೀಪ ಕುಟುಂಬದ 3ನೇ ಕುಡಿಯೂ ಚಿತ್ರರಂಗಕ್ಕೆ!
ನಟ ಜಗ್ಗೇಶ ಯಜಮಾನ ಚಿತ್ರವನ್ನು ವೀಕ್ಷಿಸಿದ್ದಾರೆ. ವಿಶೇಷ ಎಂದರೆ ಅಭಿಮಾನಿಗಳ ಜೊತೆ ಕುಳಿತು ಸಿನಿಮಾವನ್ನು ವೀಕ್ಷಿಸಿಲ್ಲ. ಬದಲಾಗಿ ಮುಸುಕುಧಾರಿಯಾಗಿ ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಿಸಿದ್ದಾರೆ.
ಯಾವ ಥಿಯೇಟರ್ ನಲ್ಲಿ ನೋಡಿದ್ದು ಎನ್ನುವ ಗುಟ್ಟನ್ನೂ ಬಿಟ್ಟು ಕೊಟ್ಟಿಲ್ಲ. ಚಿತ್ರ ವೀಕ್ಷಿಸಿದ ಬಳಿಕ ಆ ವಿಚಾರವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಉದ್ಘರ್ಷ ಟ್ರೇಲರ್ ಲಾಂಚ್‌ಗೆ ಸುದೀಪ್ ಬರದಿರಲು ಇದೇನಾ ಕಾರಣ?
#ಯಜಮಾನ ಚಿತ್ರ ನೋಡಿ ಆನಂದಿಸಿದ ಕ್ಷಣ (ಚಿತ್ರ ಮಂದಿರ suspense) ಕಾರಣ further ನಾನು ಸಿನಿಮಾ ನೋಡಲಾಗದು ಕ್ಷಮೆಯಿರಲಿ..ಕನ್ನಡ ಚಿತ್ರ ಚಿತ್ರಮಂದಿರಲ್ಲೆ ನೋಡಿ ಪ್ರೋತ್ಸಾಹಿಸಿ ಎಂದು ಕನ್ನಡದ ಮನಸ್ಸುಗಳಿಗೆ ನನ್ನ ವಿನಂತಿ..best of luck @dasadarshan pic.twitter.com/hBGBrndbda
— ನವರಸನಾಯಕ ಜಗ್ಗೇಶ್ (@Jaggesh2) March 6, 2019
ಈ ಹಿಂದೆ ಕೆಜಿಎಫ್ ಸಿನಿಮಾವನ್ನು ಮಂಕಿ ಕ್ಯಾಪ್ ಹಾಕಿಕೊಂಡು ವೀಕ್ಷಿಸಿ ಗಮನ ಸೆಳೆದಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 7, 2019, 4:29 PM IST