ಅನೇಕ ಸ್ಟಾರ್ ನಟರು ತಮ್ಮ ಮಕ್ಕಳನ್ನು ಇಂಡಸ್ಟ್ರಿಗೆ ಕರೆ ತರುವುದು ಸಾಮಾನ್ಯ. ಡಾ.ರಾಜ್ ಕುಟುಂಬದಿಂದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ರಾಘವೆಂದ್ರ ರಾಜ್ ಕುಮಾರ್ ಬಂದ ಹಾಗೆ ಅನೇಕ ನಿರ್ಮಾಪಕ, ನಿರ್ದೇಶಕರೂ ತಮ್ಮ ಮಕ್ಕಳನ್ನು ಚಿತ್ರೋದ್ಯಮಕ್ಕೆ ಕರೆ ತಂದಿದ್ದಾರೆ. ಇದೀಗ ತೂಗುದೀಪ ಶ್ರೀನಿವಾಸ್ ಕುಟುಂಬದ ಮೂರನೇ ಕುಡಿಯನ್ನು ಚಿತ್ರರಂಗಕ್ಕೆ ಪರಚಯಿಸಲು ದರ್ಶನ್ ಮುಂದಾಗಿದ್ದಾರೆ.

ಪುನೀತ್‌ರಂತೆ ದರ್ಶನ್ ಪುತ್ರ ವಿನೀಶ್ ಕೂಡ ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಸಿನಿ ಜರ್ನಿ ಆರಂಭಿಸುತ್ತಿದ್ದಾರೆ. ಇದನ್ನು ದರ್ಶನ್ ಅವರೇ ಖಚಿತಪಡಿಸಿದ್ದಾರೆ.

 

'ಯಜಮಾನ' ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದು, ಚಿತ್ರ ತಂಡ ಕೆಲವು ದಿನಗಳ ಹಿಂದೆ ಪ್ರೆಸ್ ಮೀಟ್ ಮಾಡಿತ್ತು. ಅ ವೇಳೆ ಪ್ರತಿನಿಧಿಯೊಬ್ಬ ಕೇಳಿದ ನಿಮ್ಮ ಮಗ ಚಿತ್ರರಂಗಕ್ಕೆ ಬರುತ್ತಾರಾ ಎಂದು ಕೇಳಿದಾಗ, ‘ನನ್ನ ಮಗನನ್ನೂ ಇಂಡಸ್ಟ್ರಿಗೆ ತರುತ್ತೇನೆ. ನಾವು ಹೋದ ಮೇಲೆ ನಮ್ಮದೊಂದು ಬ್ರ್ಯಾಂಡ್ ಬೇಕಲ್ವಾ?’ ಎಂದು ಉತ್ತರಿಸಿದ್ದಾರೆ.

ಅಂದ ಹಾಗೆ ಸ್ಯಾಂಡಲ್‌ವುಡ್‌ನಲ್ಲಿ ಖಳನಾಯಕನಾಗಿ ಹಾಗೂ ಕೆಲವು ಪೌರಾಣಿಕ ಪಾತ್ರಗಳಿಗೂ ಬಣ್ಣ ಹಚ್ಚಿದ ತೂಗುದೀಪ ಶ್ರೀನಿವಾಸ್ ಅವರ ಮಗ ದರ್ಶನ್. ಮೊದ ಮೊದಲಿಗೆ ಚಿತ್ರಗಳಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲು ಹರಸಾಹಸ ಪಟ್ಟ ದರ್ಶನ್, ಇದೀಗ ಕನ್ನಡ ಚಿತ್ರೋದ್ಯಮವನ್ನು ಆಳುತ್ತಿದ್ದಾರೆ. ದರ್ಶನ್‌ರಂತೆ ಅವರ ಮಗ ವಿನೀತ್ ಕನ್ನಡ ಚಿತ್ರಾಭಿಮಾನಗಳ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಾರಾ ಕಾದು ನೋಡಬೇಕು.