ಗುರುಪ್ರಸಾದ್ ನಿರ್ದೇಶನ, ಸನತ್ ಕುಮಾರ್ ನಿರ್ಮಾಣದ 'ಎದ್ದೇಳು ಮಂಜುನಾಥ' 2009ರಲ್ಲಿ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಮಾಡಿತ್ತು. ವಿಭಿನ್ನ ಚಿತ್ರಕಥೆ, ಸಂಭಾಷಣೆ ಹಾಗೂ ಸಂಗೀತ ಎಲ್ಲರ ಗಮನ ಸೆಳೆಯಿತು.  ಜಗ್ಗೇಶ್ ಜೋಡಿಯಾಗಿ ಯಜ್ಞಾ ಶೆಟ್ಟಿ ಕಾಣಿಸಿಕೊಂಡರೆ ಕತೆಗೆ ಇನ್ನೆಷ್ಟು ಮೆರಗು ನೀಡಿದ್ದು ತಬಲಾ ನಾಣಿ ಹಾಗೂ ವಿ ಮನೋಹರ್‌.

ನನ್ನ ಹೀರೋ ಆಗು ಎಂದಿದ್ದು ಅಂಬರೀಶ್‌: ಜಗ್ಗೇಶ್‌ 

ಕೇವಲ 25 ದಿನಗಳಲ್ಲಿ ಚಿತ್ರೀಕರಣ ಮುಗಿಸಿದ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಧೂಳೆಬ್ಬಿಸಿದ ಸಿನಿಮಾವಿದು.  ಈ ಚಿತ್ರದ ಬಗ್ಗೆ ಒಂದು ವಾಕ್ಯದಲ್ಲಿ ನಟ ಜಗ್ಗೇಶ್ ಉತ್ತರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಜಗ್ಗೇಶ್‌ಗೆ ವಿಶ್ವಾ ಎಂಬ ವ್ಯಕ್ತಿ ಈ ಚಿತ್ರದ ಬಗ್ಗೆ ಪ್ರಶ್ನೆ ಕೇಳಿದ್ದಾರೆ. 

 

'ಸರ್ ನನಗೆ ಎದ್ದೇಳು ಮಂಜುನಾಥ ಚಿತ್ರದ ಬಗ್ಗೆ ಒಂದು ಪ್ರಶ್ನೆ ಇದೆ. ನೀವು ಈ ಪಾತ್ರವನ್ನು ಒಪ್ಪಿಕೊಳ್ಳಲು ಎಷ್ಟು ಸಮಯ ತೆಗೆದುಕೊಂಡಿರಿ? ಅದ್ಭುತವಾಗಿ ಅಭಿನಯಿಸಿದ್ದೀರ. ಇಷ್ಟೊಂದು ಸೋಮಾರಿಯಾಗಿರಲು ಯಾರಿಂದದಲೂ ಸಾಧ್ಯವಿಲ್ಲ' ಎಂದು ಹೇಳಿದ್ದಾರೆ. ಈ ಪ್ರಶ್ನೆಗೆ ಜಗ್ಗೇಶ್ ಉತ್ತರಿಸಿದ್ದಾರೆ. 'ಜಸ್ಟ್‌ 1 ವಾರ. ನಿರ್ಧರಿಸಿ 25 ದಿನಗಳಲ್ಲಿ ಚಿತ್ರೀಕರಣ ಮುಗಿಸಿ 90 ಲಕ್ಷದ ಚಿತ್ರ 5 ಕೋಟಿಗೆ ವ್ಯಾಪಾರ ಆಯಿತು. 2007ರಲ್ಲಿ 13 ವರ್ಷದ ಹಿಂದೆ' ಎಂದು ಜಗ್ಗಣ್ಣ ಬರೆದಿದ್ದಾರೆ. 

3 ಪ್ಯಾಂಟ್, 3 ಶರ್ಟ್‌ನೊಂದಿಗೆ ಬೆಂಗಳೂರಿಗೆ ಬಂದಿದ್ದ ನವರಸ ನಾಯಕ 

ಜಗ್ಗೇಶ್ ಆಯ್ಕೆ ಮಾಡಿಕೊಳ್ಳುವ ಪ್ರತಿಯೊಂದು ಸಿನಿಮಾಗಳು ತುಂಬಾನೇ ವಿಭಿನ್ನವಾಗಿರುತ್ತದೆ. ಪ್ರತಿ ಚಿತ್ರಕಥೆಯೂ ಒಂದೊಂದು ರೀತಿಯ ಸಕ್ಸಸ್ ಕೊಟ್ಟಿದೆ. ಎದ್ದೇಳು ಮಂಜುನಾಥ್ ಬಿಗ್ ಹಿಟ್ ಆಗುವುದರ ಜೊತೆ ಚಿತ್ರದಲ್ಲಿದ್ದ ಪ್ರತಿಯೊಬ್ಬ ಕಲಾವಿದನಿಗೂ ವೃತ್ತಿಯಲ್ಲಿ ಯಶಸ್ಸು ನೀಡಿತ್ತು.