ನವರಸನಾಯಕ ಈಗ ರಂಗನಾಯಕ; ಗುರುಪ್ರಸಾದ್ ಜೊತೆ ಸೇರಿ ಜಗ್ಗೇಶ್ ಆಟ ಶುರು ಗುರೂ!

ಜಗ್ಗೇಶ್ , ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಾಯಕನಟ ಜಗ್ಗೇಶ್ ಮಾತನಾಡುತ್ತ 'ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ' ಎಂದಿದ್ದಾರೆ.

Jaggesh lead guruprasad directional Ranganayaka movie to release on 8 March 2024 srb

ನವರಸ ನಾಯಕ ಜಗ್ಗೇಶ್ ಅಭಿನಯದ,  ಮಠ ಗುರುಪ್ರಸಾದ್ ನಿರ್ದೇಶನದ ಬಹುನಿರೀಕ್ಷಿತ ಚಿತ್ರ  'ರಂಗನಾಯಕ' 8 ಮಾರ್ಚ್ 2024 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ  ತೆರೆಗೆ ಬರಲಿದೆ. ಪುಷ್ಪಕ ವಿಮಾನ ಖ್ಯಾತಿಯ  ನಿರ್ಮಾಪಕ‌ ವಿಖ್ಯಾತ್ ಅವರು ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಮಠ , ಎದ್ದೇಳು ಮಂಜುನಾಥ ಚಿತ್ರಗಳ ಮೂಲಕ ಹೊಸ ದಾಖಲೆಯನ್ನೇ‌‌  ಸೃಷ್ಟಿಸಿದ್ದ ‌ಗುರುಪ್ರಸಾದ್ ಜಗ್ಗೇಶ್  ಜೋಡಿ  ನಗುವಿನ ಅಲೆ ಎಬ್ಬಿಸಲು ಮತ್ತೊಮ್ಮೆ  ಪ್ರೇಕ್ಷಕರೆದುರು ಬರುತ್ತಿದ್ದಾರೆ. 

ಶಿವರಾತ್ರಿಯ ವಿಶೇಷವಾಗಿ ಈ ಚಿತ್ರ ಮಾರ್ಚ್ 8ರಂದು ಬಿಡುಗಡೆಯಾಗುತ್ತಿದೆ.15 ವರ್ಷಗಳ  ನಂತರ ಮತ್ತೆ  ಒಂದಾದ ಜಗ್ಗಣ್ಣ ಮತ್ತು ಗುರುಪ್ರಸಾದ್ ಜೋಡಿ  ಈ ಸಲ ಪ್ರೇಕ್ಷಕರಿಗೆ ಯಾವ‌ರೀತಿ ಮೋಡಿ ಮಾಡುತ್ತಾರೆಂದು ಕಾದು ನೋಡಬೇಕಿದೆ. ಈ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದ ಚಿತ್ರತಂಡ ಮಾಹಿತಿ ಹಂಚಿಕೊಂಡಿತು. 

ಗಾಲವ್ ದೇವರ ವರಪ್ರಸಾದ, ಪಾಲಿಗೆ ಬಂದಿದ್ದು ಪಂಚಾಮೃತ; ಮಾಳವಿಕಾ ಅವಿನಾಶ್ ನೋವಿನ ನುಡಿ!

ಜಗ್ಗೇಶ್ , ಚೈತ್ರ ಕೊಟ್ಟೂರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ನಾಯಕನಟ ಜಗ್ಗೇಶ್ ಮಾತನಾಡುತ್ತ ಈ ಸಿನಿಮಾ ಸಂಪೂರ್ಣವಾಗಿ ಗುರುಪ್ರಸಾದ್ ಅವರ ಪ್ರಸಾದ' ಎಂದಿದ್ದಾರೆ. ಮಠ ಹಾಗೂ ಎದ್ದೇಳು ಮಂಜುನಾಥ ಸಿನಿಮಾದ ನೆನಪುಗಳನ್ನ ಮೆಲುಕು ಹಾಕಿದರು ನಟ ಜಗ್ಗೇಶ್. 'ಗುರುಪ್ರಸಾದ್ ಜಗಮೊಂಡ, ಆತ ಯಾರು ಮಾತನ್ನೂ  ಕೇಳೋನಲ್ಲ.  ಮದವೇರಿದ ಒಂಟಿ ಸಲಗನಂತೆ' ಎಂದು ಹೇಳಿ ನಿರ್ದೇಶಕರ ಕಾರ್ಯವೈಖರಿಯನ್ನು ಮೆಚ್ಚುಕೊಂಡರು. 

ಕರಾವಳಿಗೆ ನಾಯಕಿಯಾಗಿ ಸಂಪದಾ ಎಂಟ್ರಿ; ಪ್ರಜ್ವಲ್ ಜೊತೆ ಬೊಂಬಾಟ್ ರೊಮ್ಯಾನ್ಸ್!

ವರ್ಷಕ್ಕೊಂದು ಸಿನಿಮಾ ಮಾಡಿದ್ರೆ ಕಂಡಿತಾ ಒಳ್ಳೆದಾಗತ್ತೆ ಎಂದು ಮಾತನಾಡಿದ ಜಗ್ಗೇಶ್, ಡಬ್ಬಿಂಗ್ ಸ್ಟುಡಿಯೋ ನಂಗೆ ತುಂಬಾ ಇಷ್ಟವಾದ ಜಾಗ ಎಂದರು. ಇಂಡಸ್ಟ್ರಿಯಲ್ಲಿ  ಮತ್ತೊಂದು ಹೆಜ್ಜೆ ಮುಂದಿಟ್ಟ ನವರಸನಾಯಕ ಜಗ್ಗೇಶ್ ಫೈನ್ ಓನ್ ಅನ್ನೋ ಡಬ್ಬಿಂಗ್ ಸ್ಟುಡಿಯೋವನ್ನು  ಶುರು ಮಾಡ್ತಿದ್ದಾರೆ.. ರಂಗನಾಯಕ. ಒಂದು ಎಂಟರ್ ಟೈನಿಂಗ್ ಚಿತ್ರ. ಜನ ಥಿಯೇಟರ್ ಗೆ ಬಂದು ಬಾಯಿ ತುಂಬಾ ನಕ್ಬಿಟ್ರೆ ನಮಗೆ  ಖುಷಿಯಾಗತ್ತೆ ಎಂದು  ಡೋಲೊ 650 ಡೈಲಾಗ್ ಹೇಳಿದರು.

ಸೇಲ್ಸ್‌ಮ್ಯಾನ್, ಕ್ಯಾಷಿಯರ್ ಆಗಿದ್ರು ವಿಜಯ್ ಸೇತುಪತಿ; ಕೋಟ್ಯಾಧಿಪತಿಯ ಹಿಂದಿನ ಕಥೆ ರೋಚಕ!

Latest Videos
Follow Us:
Download App:
  • android
  • ios