Asianet Suvarna News Asianet Suvarna News

ಗಾಲವ್ ದೇವರ ವರಪ್ರಸಾದ, ಪಾಲಿಗೆ ಬಂದಿದ್ದು ಪಂಚಾಮೃತ; ಮಾಳವಿಕಾ ಅವಿನಾಶ್ ನೋವಿನ ನುಡಿ!

ಸಹಜವಾಗಿಯೇ ನಮ್ಮ ಮಗು ಎಲ್ಲರಂತಿಲ್ಲ ಎಂಬ ನೋವು ಅವರಿಗೂ ಇದೆ. ಏಕೆಂದರೆ, ಅವರು ತಮ್ಮ ಮಗುವನ್ನು ಎಲ್ಲರಂತೆ ಶಾಲೆಗೆ ಸೇರಿಸುವಂತಿಲ್ಲ. ಎಲ್ಲ ಮಕ್ಕಳಂತೆ ಅವನು ತುಂಟಾಟ ಮಾಡುವುದಿಲ್ಲ, ಮುದ್ದುಮುದ್ದಾಗಿ ಮಾತನಾಡುವುದಿಲ್ಲ.

Galav is god gift child for us says Malavika Avinash for their handicap child srb
Author
First Published Feb 15, 2024, 8:29 PM IST

ಕನ್ನಡದ ಸಿನಿಮಾಲೋಕ ಹಾಗೂ ಕಿರುತೆರೆಯಲ್ಲಿ ಖ್ಯಾತಿ ಹೊಂದಿರುವ ಜೋಡಿಗಳಲ್ಲಿ ಮಾಳವಿಕಾ-ಅವಿನಾಶ್ ಜೋಡಿಯೂ ಒಂದು. ಅವರಿಬ್ಬರೂ ಕಲಾರಾಧಕರು, ಸಿನಿಮಾ-ಸೀರಿಯಲ್ ಬೇಧವಿಲ್ಲದೇ ನಟನೆಯಲ್ಲಿ ನಿರತರಾದವರು. ಅವರಿಬ್ಬರ ದಾಂಪತ್ಯದ ಫಲವಾಗಿ ಜನಿಸಿದ ಮಗು ಗಾಲವ್ ವಿಶೇಷ ಚೇತನ ಮಗು. ಈ ಬಗ್ಗೆ ಅವರಿಗೆ ಮುಜುಗರ, ಸಂಕೋಚವಿಲ್ಲಅವರು ತಮ್ಮ ವಿಕಲಚೇತನ ಮಗ ಗಾಲವ್‌ನನ್ನು 'ದೇವರ ಮಗು' ಎಂದೇ ಭಾವಿಸಿದ್ದಾರಂತೆ ಮಾಳವಿಕಾ ಹಾಗು ಅವಿನಾಶ್ ದಂಪತಿ. 

ಮಗ ಗಾಲವ್ ಬಗ್ಗೆ ಮಾತನಾಡುತ್ತ ಮಾಳವಿಕಾ-ಅವಿನಾಶ್ ದಂಪತಿ 'ದೇವರು ಕೊಟ್ಟ ವರ ನಮ್ಮ ಗಾಲವ್. ನಮ್ಮ ಪಾಲಿಗೆ ಅದೇನು ಬಂದಿದೆಯೋ ಅದು ನಮಗೆ ಸಿಕ್ಕ ಪಂಚಾಮೃತ ಎಂದುಕೊಂಡಿದ್ದೇವೆ. ಯಾವ ಮಗು ಕೂಡ ದೇವರ ಬಳಿ ನಾನು ಇಂಥವರ ಹೊಟ್ಟೆಯಲ್ಲಿ ಹುಟ್ಟಬೇಕು ಎಂದು ಕೇಳಿಕೊಂಡು ಹುಟ್ಟೋದಿಲ್ಲ. ದೇವರ ಕೊಟ್ಟ ವರ ನಮ್ಮ ಮಗ ಗಾಲವ್' ಎಂದು ಹೇಳಿದ್ದಾರೆ. ತಮಗೆ ದೇವರು ಕೊಟ್ಟ ವರಪ್ರಸಾದವನ್ನು ಅಷ್ಟೇ ಮಮತೆ, ಕಾಳಜಿ, ಪ್ರೀತಿ-ಅಕ್ಕರೆಯಿಂದ ಬೆಳೆಸುತ್ತಿದ್ದಾರೆ.

ಜಗ್ಗೇಶ್-ಪುನೀತ್‌ ಮೊದಲ ಭೇಟಿ ಎಲ್ಲಿ, ಯಾವಾಗ ಆಯ್ತು; ಅಂದು ಡಾ ರಾಜ್‌ಕುಮಾರ್ ಹೇಳಿದ್ದೇನು? 

ಸಹಜವಾಗಿಯೇ ನಮ್ಮ ಮಗು ಎಲ್ಲರಂತಿಲ್ಲ ಎಂಬ ನೋವು ಅವರಿಗೂ ಇದೆ. ಏಕೆಂದರೆ, ಅವರು ತಮ್ಮ ಮಗುವನ್ನು ಎಲ್ಲರಂತೆ ಶಾಲೆಗೆ ಸೇರಿಸುವಂತಿಲ್ಲ. ಎಲ್ಲ ಮಕ್ಕಳಂತೆ ಅವನು ತುಂಟಾಟ ಮಾಡುವುದಿಲ್ಲ, ಮುದ್ದುಮುದ್ದಾಗಿ ಮಾತನಾಡುವುದಿಲ್ಲ. ಮಿಕ್ಕ ಮಕ್ಕಳಂತೆ ಆಟ-ಪಾಟಗಳಲ್ಲಿ ಆತ ಭಾಗವಹಿಸುವುದಿಲ್ಲ, ಮನೆಗೆ ಬಂದು ಸ್ಕೂಲಿನ ಕಥೆ ಹೇಳುವುದಿಲ್ಲ. 

ಇಬ್ಬರಿಂದಲೂ ಡಿವೋರ್ಸ್ ಪಡೆದು ಒಂಟಿಯಾದ್ರು ಅಂಬಿಕಾ; ನಿಜ ಜೀವನ ಯಾಕೆ 'ಚಕ್ರವ್ಯೂಹ'ವಾಯ್ತು?

ಆದರೆ, ಹೇಗೇ ಇದ್ದರೂ ಅದು ನಮ್ಮ ಮಗು, ದೇವರು ಕೊಟ್ಟ ಮಗು ಎಂಬ ಪ್ರಬುದ್ಧತೆ ಹೊಂದಿದ್ದಾರೆ ಜೋಡಿ. ಕೆಲವೊಂದನ್ನು ನಾವು ಮಾಡಲಾಗುವುದಿಲ್ಲ, ಬದಲಾಯಿಸಲಾಗುವುದಿಲ್ಲ ಎಂಬ ಎಂಬ ಅರಿವೂ ಕೂಡ ಅವರಿಗಿದೆ. ಒಂದು ಕಡೆ ವಿಶೇಷ ಚೇತನ ಮಗುವನ್ನು ನೋಡಿಕೊಳ್ಳುತ್ತ ಇನ್ನೊಂದು ಕಡೆ ತಮ್ಮ ಪಾಲಿನ ನಟನೆಯನ್ನೂ ಮುಂದುವರೆಸಿದ್ದಾರೆ ಮಾಳವಿಕಾ-ಅವಿನಾಶ್ ಜೋಡಿ.

ಸೇಲ್ಸ್‌ಮ್ಯಾನ್, ಕ್ಯಾಷಿಯರ್ ಆಗಿದ್ರು ವಿಜಯ್ ಸೇತುಪತಿ; ಕೋಟ್ಯಾಧಿಪತಿಯ ಹಿಂದಿನ ಕಥೆ ರೋಚಕ!

Follow Us:
Download App:
  • android
  • ios