ಒಕ್ಕಲಿಗ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಗಣ್ಯರೊಂದಿಗೆ ಪ್ರಿಯಾ ವಾರಿಯರ್ ವೇದಿಕೆ ಹಂಚಿಕೊಂಡಿರುವ ಬಗ್ಗೆ ನಟ ಜಗ್ಗೇಶ್ ಹೇಳಿಕೆ ಎಲ್ಲೆಡೆ ಸದ್ದು ಮಾಡಿತ್ತು. 

ಗಣ್ಯರು ಜೊತೆ ವೇದಿಕೆ ಹಂಚಿಕೊಂಡ ಪ್ರಿಯಾ ವಾರಿಯರ್‌ಗೆ ಕ್ಲಾಸ್ ತೆಗೆದುಕೊಂಡ ಜಗ್ಗೇಶ್!

ವೇದಿಕೆ ಮೇಲೆ ನಿರ್ಮಲಾನಂದ ಶ್ರೀಗಳು, ನಿರ್ದೇಶಕ ಸಾಯಿ ಪ್ರಕಾಶ್ ಜೊತೆ ಪ್ರಿಯಾ ವಾರಿಯರ್ ಕುಳಿತಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ನಿರ್ಮಾಪಕ ಕೆ ಮಂಜು ಪ್ರತಿಕ್ರಿಯಿಸಿ, 'ಜಗ್ಗೇಶ್ ಅವರಿಗೆ ಯಾಕೆ ಬೇಸರ ಎಂದು ಅರ್ಥವಾಗಿಲ್ಲ. ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಹೊಸಬರು ಅಂದ್ರೆ ಅಸೂಯೆಪಡಬಾರದು. ಎಲ್ಲರನ್ನು ಬೆಳೆಸಬೇಕು' ಎಂದು ಹೇಳಿದ್ದರು. ಇದಕ್ಕೆ ಜಗ್ಗೇಶ್ ಪ್ರತಿಕ್ರಿಯಿಸಿದ್ದಾರೆ.

ನನ್ನ ಪದಬಳಕೆ ಅರ್ಥವಾಗದೆ ಅಸೂಯೆ ಎಂದು ಭಾವಿಸಿದರೆ ದೌರ್ಭಾಗ್ಯ! ನಾನು ಯಾವ ನಟಿಯನ್ನು ವಿರೋಧಿಸಿಲ್ಲಾ! ಯಾರಿಂದ ನನಗೇನು ಆಗಬೇಕಿಲ್ಲ! ನಿರ್ಮಲಾನಂದ ಶ್ರೀಗಳ ಮಾರ್ಗದರ್ಶನ ಹಿತವಚನಕ್ಕಿಂತ ಅಲ್ಲಿದ್ದ ಯುವ ಸಮುದಾಯಕ್ಕೆ glamour ಮುಖ್ಯವಾಯಿತೆ ವಿನಹ ಬದುಕಿಗೆ ಮಾರ್ಗ ತೋರಿಸುವ ಮಾತು ನಗಣ್ಯವಾಯಿತೆ ಎಂದು ಕೊರಗಿದೆ! ಬರವಣಿಗೆ ಅರ್ಥವಾಗದ ಮಹನೀಯರು! ಎಂದು ಖಾಸಗಿ ವಾಹಿನಿಯೊಂದಕ್ಕೆ ಹೇಳಿದ್ದಾರೆ. 

 ಕೆ ಮಂಜು ಪುತ್ರ ಅಭಿನಯದ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಡಲಿದ್ದಾರೆ. ಅಂದಹಾಗೆ ಬಿಜಿಎಸ್ ವಿದ್ಯಾ ಸಂಸ್ಥೆಯ ಕಾರ್ಯಕ್ರಮಕ್ಕೆ ಪ್ರಿಯಾರನ್ನು ಕೆ ಮಂಜು ಕರೆದುಕೊಂಡು ಹೋಗಿದ್ದರು.