ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಅಪ್ಪು ಅಭಿಮಾನಿಗಳಿಗಾಗಿ ಜಾಕಿ ಚಿತ್ರ ಥಿಯೇಟರ್‌ಗಳಲ್ಲಿ ಕೊಂಚ ಹೊಸ ರೂಪದಲ್ಲಿ ಮರು ಬಿಡುಗಡೆ ಆಗುತ್ತಿದೆ. 

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ಅಜಾತ ಶತ್ರು. ಅಷ್ಟೇ ಅಲ್ಲ, ಮಗುವಿನಿಂದ ಹಿಡಿದು ಮುದುಕರವರೆಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಈಗಲೂ ಹಿರಿಯರು ಪುನೀತ್ ಚಿತ್ರಗಳನ್ನು ನೋಡುವಾಗ ನಟನಲ್ಲಿ ಬಾಲನಟ ಅಪ್ಪುವನ್ನೇ ಕಾಣುತ್ತಾರೆ. ಅದೇ ಮುಗ್ಧತೆ, ತಿಳಿಯಾದ ಮನಸ್ಸು ಅಪ್ಪುವಿನದು ಎಂದು ಸಂತೋಷ ಪಡುತ್ತಾರೆ. ಅಪ್ಪು ದೈಹಿಕವಾಗಿ ಇಲ್ಲದಿದ್ದರೂ ಅಭಿಮಾನಿಗಳು ಅವರನ್ನು ಈಗಲೂ ಮನದಲ್ಲೇ ತಲೆ ಮೇಲೆ ಹೊತ್ತು ಮೆರೆಸುತ್ತಾರೆ. 

ಅಪ್ಪು ಹುಟ್ಟಿದ ಹಬ್ಬ ಬರುತ್ತಿದ್ದಂತೆಯೇ ಅದರ ಆಚರಣೆಗೆ ಸಾಕಷ್ಟು ಯೋಜನೆಗಳು ಸಿದ್ಧವಾಗುತ್ತಿವೆ. ಪವರ್ ಸ್ಟಾರ್ ಹುಟ್ಟುಹಬ್ಬದ ಸಂಭ್ರಮದಂದು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಸಮಾಧಿಗೆ ಆಗಮಿಸಿ ನಮಿಸಲಿದ್ದಾರೆ.

ಜಾಕಿ ಮರು ಬಿಡುಗಡೆ
ಅಪ್ಪು ಜಯಂತೋತ್ಸವಕ್ಕೆ ಅಭಿಮಾನಿಗಳು ಅನ್ನದಾನ, ರಕ್ತದಾನ ಸೇರಿದಂತೆ ಸಾಕಷ್ಟು ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಈ ಮಧ್ಯೆ ಅಪ್ಪುವಿನ ಮೇಲಿನ ಈ ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ದೊಡ್ಮನೆ ಕುಟುಂಬ ಕೂಡಾ ಅಂದು ಅವರಿಗಾಗಿ ವಿಶೇಷ ಉಡುಗೊರೆ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. 



ಹೌದು, ಪುನೀತ್ ನಟನೆಯ ದೊಡ್ಡ ಹಿಟ್ ಚಿತ್ರ 'ಜಾಕಿ'ಯನ್ನು ಥಿಯೇಟರ್‌ಗಳಲ್ಲಿ ಮರು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ. ಈ ಬಾರಿ ಸೂರಿ ನಿರ್ದೇಶನದ ಈ ಚಿತ್ರವನ್ನು 4K ವರ್ಷನ್‌ನಲ್ಲಿ ರೀ ರಿಲೀಸ್ ಮಾಡಲಾಗುತ್ತಿದೆ.

14 ವರ್ಷಗಳ ಹಿಂದೆ ತೆರೆ ಕಂಡಿದ್ದ 'ಜಾಕಿ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಇದರಲ್ಲಿ ಅಪ್ಪುವಿನ ಜೊತೆ ನಾಯಕಿ ಪಾತ್ರದಲ್ಲಿ ಭಾವನಾ ಮೆನನ್ ಕಾಣಿಸಿಕೊಂಡಿದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್ ಬ್ಯಾನರ್‌ನಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸಿದ್ದ ಸಿನಿಮಾಕ್ಕೆ ವಿ. ಹರಿಕೃಷ್ಣ ಸಂಗೀತ ಮ್ಯಾಜಿಕ್ ಮಾಡಿತ್ತು. ಅಪ್ಪು ಪರ್ಫಾರ್ಮೆನ್ಸ್, ಡ್ಯಾನ್ಸ್, ಫೈಟ್ಸ್ ಎಲ್ಲಾ ಸೇರಿ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಚಿಂದಿ ಗಳಿಕೆ ಕಂಡಿತ್ತು. ಆಗಿನ ಕಾಲಕ್ಕೆ 7 ಕೋಟಿಗೆ ನಿರ್ಮಾಣವಾಗಿದ್ದ ಚಿತ್ರ 30 ಕೋಟಿ ರೂ. ಗಳಿಸಿತ್ತು. ಇದೀಗ ಸಧ್ಯದ ಟ್ರೆಂಡ್ ಆಗಿರುವ, ಹಿಟ್ ಸಿನಿಮಾಗಳನ್ನು ಹೊಸ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ಮತ್ತೊಮ್ಮೆ ನಡೆಯುತ್ತಿದೆ. 

ಮಗಳಿಗೆ ನೆಟ್ವರ್ಕ್ ಸಮಸ್ಯೆಯಾಯ್ತೆಂದು ದೇಶಕ್ಕೇ ಜಿಯೋ ಕೊಟ್ಟ ಅಂಬಾನಿ!