ಹೆಣ್ಣಿಗೆ ಗೌರವ ಸಿಗೋದು ಕನಸು ಅಷ್ಟೇ., ಅಶ್ವಿನಿ ಪುನೀತ್ ರಾಜ್ ಕುಮಾರ್ ಪರನಿಂತ ಆಂಕರ್ ಅನುಶ್ರೀ!
ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಬೆಂಬಲಕ್ಕೆ ನಿಂತ ಆಂಕರ್ ಅನುಶ್ರೀ 'ಹೆಣ್ಣಿಗೆ ಗೌರವ ಸಿಗೋದು, ಒಂದು ಕನಸು ಅಷ್ಟೇ. ಈ ಕೆಟ್ಟೆ ಬೆಳವಣಿಗೆಗೆ ಕೊನೆಯಿಲ್ಲವೇ ? ಸ್ತ್ರೀ ಅಂದರೆ ಅಷ್ಟೇ ಸಾಕೆ? ಹೆಣ್ಣೆಂದರೆ ಅಂಬಿಕೆ. ನಿಜ ಮಾಡಿ ಈ ಮೂಢನಂಬಿಕೆ ಎಂದು ಹೇಳಿದ್ದಾರೆ.
ಬೆಂಗಳೂರು (ಏ.06): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್-2024 ಕ್ರಿಕೆಟ್ ಟೂರ್ನಿಯಲ್ಲಿಯೂ ಕಳಪೆ ಪ್ರದರ್ಶನ ಮಾಡುತ್ತಿದೆ. ಇದಕ್ಕೆ ಆರ್‌ಸಿಬಿ ಅನ್‌ಬಾಕ್ಸಿಂಗ್ ಈವೆಂಟ್‌ಗೆ ಹೋಗಿದ್ದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರೇ ಕಾರಣವೆಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದನು. ಈಗ ಅಪ್ಪಟ ಪುನೀತ್ ಅಭಿಮಾನಿ ಆಂಕರ್ ಅನುಶ್ರೀ ಅಶ್ವಿನಿಯವರ ಬೆಂಬಲಕ್ಕೆ ನಿಂತಿದ್ದಾರೆ. ಕಾಮೆಂಟ್ ಮಾಡಿದವನಿಗೆ 'ಈ ಜಾಗದಲ್ಲಿ ನಿಮ್ಮ ತಾಯಿ ಅಥವಾ ಸಹೋದರಿ ಇದ್ದಿದ್ದರೆ' ಇದೇ ರೀತಿ ಕಾಮೆಂಟ್ ಮಾಡುತ್ತಿದ್ದಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ಇನ್ನು ಟ್ವೀಟ್ ಮಾಡಿದವನು ಗಜಪಡೆ ಎಂದು ಅಕೌಂಟ್ ಹೊಂದಿದ್ದನು. ಆದರೆ, ಅವರ ಟ್ವೀಟ್‌ಗೆ ಭಾರಿ ವಿರೋಧ ವ್ಯಕ್ತವಾಗುತ್ತಿದ್ದಂತೆ ತನ್ನ ಟ್ವಿಟರ್ ಖಾತೆಯ ಹೆಸರನ್ನು ಸುದೀಪ್ ಅಭಿಮಾನಿ ಎಂದು ನಕಲಿ ಐಡಿ ಸೃಷ್ಟಿಸಿಕೊಂಡನು. ಈ ಟ್ವೀಟ್ ರಾಜ್ಯದಲ್ಲಿ ಮಟ್ಟದ ವಿವಾದ ಸ್ವರೂಪ ಪಡೆದುಕೊಂಡಿದ್ದು, ಸ್ಟಾರ್ ಅಭಿಮಾನಿಗಳ ವಾರ್ ಆಗಿ ಪರಿವರ್ತನೆಯಾಗಿದೆ. ಆದರೆ, ಬಲಿಪಶುವಾಗ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಬಲಿಪಶುವಾಗಿದ್ದಾರೆ. ಇದರ ವಿರುದ್ಧ ಕಾಮೆಂಟ್ ಮಾಡಿದ ನೆಟ್ಟಿಗನಿಗೆ ಈಗಾಗಲೇ ತಿರುಗೇಟು ಕೂಡ ನೀಡಿದ್ದಾರೆ.
RCB ಸೋಲಿಗೆ ದೊಡ್ಮನೆ ಸೊಸೆ ಟಾರ್ಗೆಟ್? ದರ್ಶನ್ ಫ್ಯಾನ್ಸ್ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಅಪ್ಪು ಫ್ಯಾನ್ಸ್!
ಇನ್ನು ಪುನೀತ್ ರಾಜ್ ಕುಮಾರ್ ಅಪ್ಪಟ ಅಭಿಮಾನಿ ಆಗಿರುವ ಆಂಕರ್ ಅನುಶ್ರೀ ತಮ್ಮ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ 'ಹೆಣ್ಣಾಗಿ ಹುಟ್ಟೋದು ಒಂದು ವರ .... ಇನ್ನೊಬ್ಬರ ಮನೆ ಬೆಳಗೋ ಲಕ್ಷ್ಮೀ ಸಮಾಜಕ್ಕೆ ಒಂದು ವರ ... ಇದೆಲ್ಲ ಗಾಳಿ ಮಾತುಗಳ ಹೆಮ್ಮರ !!! ಈ ಜಾಗದಲ್ಲಿ ನಿಮ್ಮ ತಾಯಿ ಮಡದಿ ಅಥವಾ ಸಹೋದರಿ ಇದ್ದಿದ್ದರೆ ??? ಹೆಣ್ಣಿಗೆ ಗೌರವ ಸಿಗೋದು ... ಒಂದು ಕನಸು ಅಷ್ಟೇ ... ಈ ಕೆಟ್ಟೆ ಬೆಳವಣಿಗೆಗೆ ಕೊನೆಯಿಲ್ಲವೇ ?? ಸ್ತ್ರೀ ಅಂದರೆ ಅಷ್ಟೇ ಸಾಕೆ !! ಹೆಣ್ಣೆಂದರೆ ಅಂಬಿಕೆ ... ನಿಜ ಮಾಡಿ ಈ ಮೂಢನಂಬಿಕೆ 🙏 ಎಂದು ಬರೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು?
ಐಪಿಎಲ್ 2024ರ ಟೂರ್ನಿಯಲ್ಲಿ ಇದುವರೆಗೆ ಆಡಿದ ನಾಲ್ಕು ಮ್ಯಾಚ್‌ಗಳಲ್ಲಿ ಮೂರರಲ್ಲಿ ಸೋತು ಒಂದು ಪಂದ್ಯ ಗೆದ್ದಿದೆ. ಈ ಬಾರಿ ಮತ್ತೆ ಆರ್‌ಸಿಬಿ ಸೋಲುತ್ತಿರುವುದರಿಂದ ಹತಾಸೆಗೊಂಡಿರುವ ಆರ್‌ಸಿಬಿ ಅಭಿಮಾನಿಗಳು ಕೆಲವರು ಮ್ಯಾನೇಜ್‌ಮೆಂಟ್ ಸರಿಯಿಲ್ಲ ಎಂದು ದೂರುತ್ತಿದ್ದಾರೆ. ಆದರೆ, ಇತ್ತ ಸ್ಯಾಂಡಲ್‌ನಲ್ಲಿ ಸ್ಟಾರ್ ವಾರ್ ಮಾಡುವ ಕಿಡಿಗೇಡಿಗಳು ಐಪಿಎಲ್ ಆಟದಲ್ಲೂ ಮೂಗು ತೂರಿಸಿದ್ದಾರೆ. ಆರ್‌ಸಿಬಿ ಸೋಲಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ ಅವರನ್ನ ಕರೆಸಿದ್ದೇ ಕಾರಣ ಎನ್ನುತ್ತಿದ್ದಾರೆ.
ಬೆಂಗಳೂರು ಅಪರಾಧಿಯನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಿದ ಆರ್‌ಸಿಬಿ ಪುರುಷರ ತಂಡ; ಈಗಲೂ ವಿಕ್ಕಿ ಸೇಫ್!
ಆರ್‌ಸಿಬಿ ಅನಬಾಕ್ಸಿಂಗ್ ಇವೆಂಟ್‌ಗೆ ಹೋಗಿದ್ದ ಅಶ್ಚಿನಿ ಪುನೀತ್ ಇದೊಂದೇ ನೆಪ ಇಟ್ಟುಕೊಂಡು ದರ್ಶನ್ ಫ್ಯಾನ್ಸ್ ಎಂದು ಹೇಳಿಕೊಂಡಿರುವ ಮನೋರೋಗಿ ಅಭಿಮಾನಿಯೊಬ್ಬ ದೊಡ್ಡ ಮನೆ ಸೊಸೆ ವಿರುದ್ಧ ಇಲ್ಲ ಸಲ್ಲದ ಪೋಸ್ಟ್ ಮಾಡಿದ್ದಾನೆ. 'ಗಂಡ ಇಲ್ಲದ ಮಹಿಳೆಯನ್ನ ಕರೆಸಿದ್ದೇ ಆರ್‌ಸಿಬಿ ಸೋಲಿಗೆ ಕಾರಣ' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಕಿಡಿಗೇಡಿಗಳು. ಕಿಡಿಗೇಡಿಗಳ ಕೃತ್ಯವನ್ನು ರಾಜ್ಯಾದ್ಯಂತ ಅನೇಕರು ತೀವ್ರವಾಗಿ ಖಂಡಿಸಿದ್ದಾರೆ.