'ರಾಜರತ್ನ' ಅಪ್ಪು ಮರೆಯಾಗಿ ಇಂದಿಗೆ ಮೂರು ವರ್ಷ, ಜೊತೆಗಿರದ ಜೀವ ಎಂದಿಗೂ ಜೀವಂತ
ಪುನೀತ್ ರಾಜ್‌ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆ. ಅವರ ನೆನಪು ಕನ್ನಡಿಗರಲ್ಲಿ ಹಾಗೂ ಭಾರತೀಯ ಚಿತ್ರರಂಗದಲ್ಲಿ ಅಚ್ಚಳಿಯದೆ ಉಳಿದಿದೆ. ಅಪ್ಪು ಅವರ ಸಮಾಜ ಸೇವೆ ಮತ್ತು ಮಾನವೀಯತೆಯನ್ನು ಸ್ಮರಿಸಲಾಗುತ್ತಿದೆ.
ಜಗಮೆಚ್ಚಿದ ಪರಮಾತ್ಮ, ಕನ್ನಡದ ಕಣ್ಮಣಿ ನಟ ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ (Power Star Puneeth Rajkumar) ಮರೆಯಾಗಿ ಇಂದಿಗೆ ಮೂರು ವರ್ಷವಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ.
ಕನ್ನಡಿಗರು ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ. ಒಂದಲ್ಲ ಒಂದು ವಿಚಾರದಲ್ಲಿ ಅಪ್ಪು ದಿನಾಲು ಮನಸ್ಸಲ್ಲಿ ಬಂದು ಹೋಗುತ್ತಾರೆ.ಅಪ್ಪು ದೈಹಿಕವಾಗಿ ನಮ್ಮಲ್ಲಿ ಇಲ್ಲದಿದ್ದರೂ ಅವರನ್ನು ಅಭಿಮಾನಿಗಳು ಜೀವಂತವಾಗಿರಿಸಿದ್ದಾರೆ.
ಬಿಗ್ ಬಾಸ್ ಮೇಲೆ ಹೊಸದೊಂದು ಅನುಮಾನ, ತ್ರಿವಿಕ್ರಮ್‌ಗೆ ಸ್ಪರ್ಧಿಗಳ ಹೆಸರು ಶೋ ಮುಂಚೆನೇ ಸಿಕ್ಕಿತ್ತಾ?
2021 ಅಕ್ಟೋಬರ್ 29ರಂದು ಹೃದಯಾಘಾತದಿಂದ ಅಪ್ಪು ನಿಧನರಾದರು. ಪುನೀತ್ ರಾಜ್‌ಕುಮಾರ್ ( Puneeth Rajkumar ) ದೈಹಿಕವಾಗಿ ನಮ್ಮನ್ನಗಲಿ ಇಂದಿಗೆ 3 ವರ್ಷವಾಗಿದೆ. ಮೂರನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಬೆಂಗಳೂರಿನ ಕಂಠೀವರ ಸ್ಟುಡಿಯೋದಲ್ಲಿರುವ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಅವರು ( Ashwini Puneeth Rajkumar ) ಮಕ್ಕಳು, ಕುಟುಂಬಸ್ಥರು ಬಂದುಪೂಜೆ ಸಲ್ಲಿಸಲಿದ್ದಾರೆ.
ವರನಟ ಡಾ.ರಾಜ್ ಕುಮಾರ್ ಮತ್ತು ನಿರ್ಮಾಪಕಿ ಪಾರ್ವತಮ್ಮ ಅವರ ಕೊನೆಯ ಕುಡಿಯಾಗಿ, ಮಾರ್ಚ್ 17, 1975ರಲ್ಲಿ ಜನಿಸಿದರು. ಮನೆಯಲ್ಲಿ ಮುದ್ದಿನ ಮಗನಾಗಿದ್ದವರು. ಅಪ್ಪು ಬಾಲ್ಯದಲ್ಲೇ ಬಣ್ಣದ ಬದುಕಿಗೆ ಕಾಲಿಟ್ಟವರು. ಸುಮಾರು 48 ಚಿತ್ರಗಳಲ್ಲಿ ನಟಿಸಿದ್ದಾರೆ. 50 ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಅತ್ಯುತ್ತಮ ಬಾಲ ನಟ ರಾಷ್ಟ್ರೀಯ ಪ್ರಶಸ್ತಿ ಕೂಡ ಇವರಿಗೆ ಬಂದಿತ್ತು. ನಟನೆ ಮಾತ್ರವಲ್ಲದೆ ನೃತ್ಯ, ಹಾಡು,ಸಮಾಜಸೇವೆ, ನಯ-ವಿನಯ, ಒಟ್ಟಾರೆಯಾಗಿ ಅಹಂ ಇಲ್ಲದ ಅದ್ಭುತ ವ್ಯಕ್ತಿ.
ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರು, ಕೋಟಿಗಳಲ್ಲಿ!
ಅಂಧರು, ಬಡವರು, ಅನಾಥರ ಮೇಲಿನ ಪುನೀತ್ ರಾಜ್ ಕುಮಾರ್ ಅವರ ಕಾಳಜಿ ನಿಜಕ್ಕೂ ಅವಿಸ್ಮರಣಿಯ ತಮ್ಮ ಜೀವಿತಾವಧಿಯಲ್ಲಿ ಉತ್ತಮ ನಟನೆಯ ಜೊತೆಗೆ ಒಳ್ಳೆಯ ಕೆಲಸಗಳನ್ನು ಮಾಡಿ ಜನಮನ್ನಣೆ ಗಳಿಸಿದ್ದರು. ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ನಾಡು-ನುಡಿಗೆ ಸೇವೆ ಸಲ್ಲಿಸಿ ಕರ್ನಾಟಕಕ್ಕೆ ಘನತೆ ತಂದು ಕೊಟ್ಟ ಕುಟುಂಬದಲ್ಲಿ ಜನಿಸಿದ ಪುನೀತ್ ರಾಜ್‌ಕುಮಾರ್ ನಟನೆ ಮಾತ್ರವಲ್ಲದೆ ಅನಾಥ ಮಕ್ಕಳಿಗೆ ತಂದೆಯಾಗಿ, ಮುಖ ಪ್ರಾಣಿಗಳಿಗೆ ದೇವರಾಗಿ, ಹತ್ತಾರು ಗೋಶಾಲೆಗಳನ್ನು ಕಟ್ಟಿಅವುಗಳನ್ನು ಸಲಹಿ ,ವೃದ್ಧಾಶ್ರಮಗಳನ್ನು ಕಟ್ಟಿಹಿರಿಯ ಜೀವಗಳಿಗೆ ಆಸರೆ ನೀಡಿ, ಸಾವಿರಾರು ಹೆಣ್ಣು ಮಕ್ಕಳಿಗೆ ಶಕ್ತಿಧಾಮದ ಮೂಲಕ ಬದುಕಿಗೆ ಆಸರೆ ನೀಡಿ ಮಾನವೀಯತೆಯನ್ನು ಮೆರೆದ ಮಹಾನ್ ಕಲಾವಿದರಾಗಿದ್ದಾರೆ.