ಕನ್ನಡದ ಹೆಸರಾಂತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಕರ್ ಇಂಡಿಯಾ ವರ್ಸಸ್ ಇಂಗ್ಲೆಂಡ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದರಲ್ಲಿ ಅನುಮಾನವೇ ಇಲ್ಲ.

ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮತ್ತೂರು ನಂದಕುಮಾರ್ ಸಾಹಿತ್ಯದಲ್ಲಿ ಮೂಡಿ ಬಂದಂತ 'ಕನ್ನಡ ಕಲಿ' ಹಾಡಿನಲ್ಲಿ ನಟಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅಭಿನಯಿಸಿರುವುದು ಮತ್ತೊಂದು ವಿಶೇಷತೆ. 'ಅ ಆ ಇ ಈ' ಕಲಿತರೆ ಕನ್ನಡ ಓದಲು ಬಲು ಸುಲಭ' ಎಂಬ ಹಾಡಿಗೆ ಇಂದು ನಾಗರಾಜ್ ಧ್ವನಿ ನೀಡಿದ್ದಾರೆ. 

ಇಂಡಿಯಾ ವರ್ಸಸ್ ಇಂಗ್ಲೆಂಡ್; ಇದು ಕ್ರಿಕೆಟ್ ಅಲ್ಲ!

'ನಾಗತಿಹಳ್ಳಿ ಅವರ ಪ್ರತಿಯೊಂದು ಸಿನಿಮಾವನ್ನೂ ನಾನು ನೋಡಿದ್ದೇನೆ. ಮಸಾಲೆ ಹಾಕುವ ಡೈರೆಕ್ಟರ್ ಅವರಲ್ಲ, ಅವರ ಕಥೆಯಲ್ಲಿ ಮಹತ್ವದ ಸಂದೇಶ ಇರುತ್ತದೆ. ಅವರ ನಿರ್ದೇಶಕನ ಅಮೆರಿಕ ಅಮೆರಿಕ ಚಿತ್ರ ನೋಡಿದ್ದೇನೆ. ಅವರ ಸಾಹಿತ್ಯ ನನಗೆ ತುಂಬಾ ಇಷ್ಟವಾಗುತ್ತದೆ. ಚಿತ್ರ ಯಶಸ್ವಿಯಾಗಲಿ ಈ ಹಾಡು ಜನಪ್ರಿಯವಾಗಲಿ. ನನ್ನ ಕಡೆಯಿಂದ ರಿಲೀಸ್ ಮಾಡಿಸಿರುವುದಕ್ಕೆ ನನಗೆ ಧನ್ಯತೆ ಬಂದಿದೆ. ನನಗೆ ತುಂಬಾ ಸಂತೋಷವಾಗಿದೆ' ಎಂದು ಹಾಡಿನ ಬಗ್ಗೆ ಮಾತನಾಡಿದ್ದಾರೆ.

ಚಿತ್ರದಲ್ಲಿ ವಸಿಷ್ಠ ಸಿಂಹಗೆ ಜೋಡಿಯಾಗಿ ಮಾನ್ವಿತಾ ಹರೀಶ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಜನವರಿ 24ರಂದು ತೆರೆಕಾಣಲು ರೆಡಿಯಾಗುತ್ತಿದೆ.