ಮುಂಬೈ ಬೆಡಗಿ ದೀಪಿಕಾ ಕನ್ನಡ ಚಿತ್ರಕ್ಕೆ ಆಯ್ಕೆಯಾದ ಸೀಕ್ರೆಟ್ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್!

ಬಾಂಬೆನಲ್ಲಿ ಒಂದು ಫ್ಯಾಷನ್ ಶೋಗೆ ನನ್ನ ಚೀಫ್ ಗೆಸ್ಟ್‌ ಆಗಿ ಕರೆದಿದ್ರು. ನಾನು ಅಲ್ಲಿ ಹೋದಾಗ ದೀಪಿಕಾ ಪಡುಕೋಣೆ ಅದರಲ್ಲಿ ಪಾರ್ಟಿಸಿಪೇಟ್ ಮಾಡ್ತಿದ್ದರು. ಮೈಕಟ್ಟು ಚೆನ್ನಾಗಿತ್ತು, ಕಣ್ಣುಗಳು ಹೊಳೆಯುತ್ತಿದ್ದವು. ಅವ್ರು ಯಾರು ಅಂತ..

Indrajit Lankesh reveals the secret behind Deepika padukone selection for Aishwarya movie srb

ಆವಾಗಿನ್ನೂ ಐಶ್ವರ್ಯಾ ಶುರುವಾಗಿರ್ಲಿಲ್ಲ. ಬಾಂಬೆನಲ್ಲಿ ಒಂದು ಫ್ಯಾಷನ್ ಶೋಗೆ ನನ್ನ ಚೀಫ್ ಗೆಸ್ಟ್‌ ಆಗಿ ಕರೆದಿದ್ರು. ನಾನು ಅಲ್ಲಿ ಹೋದಾಗ ದೀಪಿಕಾ ಪಡುಕೋಣೆ ಅದರಲ್ಲಿ ಪಾರ್ಟಿಸಿಪೇಟ್ ಮಾಡ್ತಿದ್ದರು. ಮೈಕಟ್ಟು ಚೆನ್ನಾಗಿತ್ತು, ಕಣ್ಣುಗಳು ಹೊಳೆಯುತ್ತಿದ್ದವು. ಅವ್ರು ಯಾರು ಅಂತ ಶಾರುಖ್ ಮ್ಯಾನೇಜರ್ ಪೂಜಾ ಡಾಲ್ಡಾ ಅವರನ್ನು ಕೇಳಿದೆ. ಅವ್ರು ಪ್ರಕಾಶ್ ಪಡುಕೋಣೆ ಮಗಳು, ದೀಪಿಕಾ ಅಂತ ಅಂದ್ರು.

ಆವತ್ತು ದೀಪಿಕಾ ಪಡುಕೋಣೆ ಅವ್ರನ್ನ ಮೀಟ್ ಆಗ್ಲಿಲ್ಲ. ಜಸ್ಟ್ ಫೋನ್ ನಂಬರ್ ತಗೊಂಡೆ ಅಷ್ಟೇ. ಒಂದಿನ ಫೋನ್ ಮಾಡಿ ಮಾತಾಡಿದೆ. ಅಂದು ದೀಪಿಕಾ ಯಾವುದೇ ಕ್ಯಾಟ್‌ಲಾಗ್ ಶೂಟ್ ಅಥವಾ ಬ್ರೋಷರ್ ಶೂಟ್‌ನಲ್ಲೋ ಅವ್ರು ಪಾಲ್ಗೊಂಡಿದ್ರು. ಮುಂದೆ ನಾನು ಬಾಂಬೆಗೆ ಹೋದೆ. ತಾಜ್ ಲ್ಯಾಂಡ್ಸೆಂಡ್‌ನಲ್ಲಿ ಅವ್ರು ಮತ್ತು ಪೂಜಾ ಡಲ್ಡಾನಿ ಅಂತ ಇದ್ರು. ಅವ್ರು ಶಾರಿಖ್ ಮ್ಯಾನೇಜರ್, ದೀಪಿಕಾ ಮ್ಯಾನೇಜರ್ ಕೂಡ. ನಾನು ಪೂಜಾ ಜತೆ ಟಚ್‌ನಲ್ಲಿ ಇದ್ದೆ. ಈಗ್ಲೂ ಬೆಸ್ಟ್ ಫ್ರೆಂಡ್.

ವಿಷ್ಣುವರ್ಧನ್‌ಗೆ ಮತ್ತೊಂದು ಸಿನಿಮಾಗೆಂದು ಸೀಕ್ರೆಟ್ಟಾಗಿ ಲಂಡನ್‌ನಿಂದ ಏನೋ ತಂದಿದ್ರು ಪುಟ್ಟಣ್ಣ ಕಣಗಾಲ್?

ಗ್ಲಾಸ್ ಲಿಫ್ಟ್‌ನಲ್ಲಿ ಮೀಟ್ ಅದ್ವಿ, ನಾನು, ಪೂಜಾ ಮತ್ತೆ ದೀಪಿಕಾ ಪರಸ್ಪರ ಕೈ ಕುಲಿಕಿಕೊಂಡ್ವಿ. ಇಮ್ಮಿಡಿಯೇಟ್ ಏನೂ ಮಾತಿಲ್ಲ, ಡೈರೆಕ್ಟ್ ಅಗ್ರಿಮೆಂಟ್. ಸಿನಿಮಾ ಅಗ್ರಿಮೆಂಟ್‌ಗೆ ಸಹಿ ಹಾಕಿದ್ರು, ಸಿನಿಮಾ ಶುರುವಾಯ್ತು' ಎಂದಿದ್ದಾರೆ ಸಂದರ್ಶನವೊಂದರಲ್ಲಿ ಕನ್ನಡದ ಖ್ಯಾತ ನಿರ್ಮಾಪಕ ಹಾಗು ನಿರ್ದೇಶಕ ಇಂದ್ರಜಿತ್ ಲಂಕೇಶ್.

ಸಮಂತಾಗೆ ತಾಯಿಯಾಗುವ ಬಯಕೆ ನನಗೆ; ರಶ್ಮಿಕಾ ಮಂದಣ್ಣ ಹೇಳಿಕೆಗೆ ಕಂಗಾಲಾದ್ರಾ ಸ್ಯಾಮ್?

ಇಂದ್ರಜಿತ್ ಲಂಕೇಶ್ ಅವರು ರಿಯಲ್ ಸ್ಟಾರ್ ಉಪೇಂದ್ರ ಹಾಗು ನಟಿ ದೀಪಿಕಾ ಪಡುಕೋಣೆ ಅವರನ್ನು ನಾಯಕ-ನಾಯಕಿಯನ್ನಾಗಿಸಿಕೊಂಡು 'ಐಶ್ವರ್ಯ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಸಿನಿಮಾ ಒಂದು ಲೆವಲ್‌ಗಷ್ಟೇ ಕಾಸು ಮಾಡಿತ್ತು. ಅತ್ತ ಹಿಟ್ ಅಲ್ಲ ಇತ್ತ ಪ್ಲಾಫ್ ಕೂಡ ಅಲ್ಲ ಎನ್ನುವಂತಿದ್ದ ಆ ಚಿತ್ರವೇ ನಟಿ ದೀಪಿಕಾ ಪಡುಕೋಣೆಯವರ ವೃತ್ತಿಜೀವನದ ಮೊಟ್ಟ ಮೊದಲ ಸಿನಿಮಾ.

ಇಂಥ ನೋವಿನ ಘಳಿಗೆಯಲ್ಲೂ ಅಪರಾಧಿ ಹಿಂದುವೋ, ಮುಸ್ಲಿಂಮನೋ ಎಂಬ ಭೇದ ಸರಿಯಲ್ಲ; ನಟ ಕಿಶೋರ್ 

ಆದರೆ, ಗೂಗಲ್ ಸರ್ಚ್ ಕೊಟ್ಟರೆ ನಟಿ ದೀಪಿಕಾರ ಮೊಟ್ಟಮೊದಲ ಸಿನಿಮಾ ಶಾರುಖ್ ಖಾನ್ ನಾಯಕತ್ವದ 'ಓಂ ಶಾಂತಿ ಓಂ' ಎಂಬ ಮಾಹಿತಿ ಬರುತ್ತದೆ. ಅಂದು ಭಾರತದಲ್ಲಿ ಕನ್ನಡ ಭಾಷೆಯ ಸಿನಿಮಾ ಉದ್ಯಮದ ಪರಿಸ್ಥಿತಿ ಹಾಗಿತ್ತು. ಆದರೆ ಕೆಜಿಎಫ್, ಕಾಂತಾರ ಬಳಿಕ ಅದು ಬದಲಾಗಿದೆ, ಈಗ ಕನ್ನಡ ಚಿತ್ರೋದ್ಯಮಕ್ಕೆ ರಾಜ ಮರ್ಯಾದೆ ಸಿಗುತ್ತಿದೆ.

'ರಿಲೇಶನ್‌ಶಿಪ್‌'ನಲ್ಲಿ ಇದೀನಿ, ಒಪ್ಪಿಕೊಂಡ ನಟ ವಿಜಯ್ ದೇವರಕೊಂಡ; ಫ್ಯಾನ್ಸ್ ಫುಲ್ ಶಾಕ್!

ಕೆಜಿಎಫ್ 2, ಬಾಹುಬಲಿ, ಪುಷ್ಪಾ, ಆರ್‌ಆರ್‌ಆರ್‌ ಸಿನಿಮಾಗಳ ಬಳಿಕ ಕನ್ನಡ ಸೇರಿದಂತೆ ಸೌತ್ ಇಂಡಿಯನ್ ಸಿನಿಮಾಗಳು ಬಾಲಿವುಡ್ ಸಿನಿಮಾಗಳಿಗಿಂತ ಹೆಚ್ಚಿನ ಗಳಿಕೆ ಕಾಣುತ್ತಿವೆ. ಜತೆಗೆ, ಬಾಲಿವಡ್ ಚಿತ್ರಗಳಿಗಿಂತಲೂ ಹೆಚ್ಚಿನ ಜನಮನ್ನಣೆ ಪಡೆಯುತ್ತಿವೆ. 
 

Latest Videos
Follow Us:
Download App:
  • android
  • ios