Asianet Suvarna News Asianet Suvarna News

Breaking ಹೃದಯಾಘಾತದಿಂದ ಖ್ಯಾತ ಗಾಯಕಿ ಉಷಾ ಉತ್ತುಪ್ ಪತಿ ನಿಧನ

ಹೃಯದಾಘಾತದಿಂದ ಕೊನೆ ಜಾನಿ ಜಾಕೋ. ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
 

Indian singer Usha uthup husband Jani chacko dies at 78 cardiac arrest vcs
Author
First Published Jul 9, 2024, 9:23 AM IST

ಇಂಡಿಯನ್ ಪಾಪ್ ಐಕಾನ್, ಬಹು ಭಾಷಾ ಗಾಯಕಿ ಹಾಗೂ ಕನ್ನಡಿಗರ ಪ್ರೀತಿಯ ಕೋಗಿಲೆ ಉಷಾ ಉತ್ತುಪ್ ಅವರ ಎರಡನೇ ಪತಿ ಜಾನಿ ಚಾಕೋ ಉತ್ತುಪ್ ಅವರು ಜುಲೈ 8ರಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. 78 ವರ್ಷ ಜಾನಿ ಚಾಕೋ ಕೋಲ್ಕತಾದ ನಿವಾಸದಲ್ಲಿ ಮನೆ ನೋಡುವಾಗ ಸ್ಥಳದಲ್ಲಿ ಕುಸಿದು ಬಿದ್ದಿದ್ದರು ಎನ್ನಲಾಗಿದೆ. ತಕ್ಷಣವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. 

ಜಾನಿ ಚಾಕೋ ಅವರು ಉಷಾ ಉತ್ತುಪ್ ಅವರ ಎರಡನೇ ಪತಿ ಆಗಿದ್ದು ಟೀ ಪ್ಲಾಂಟೇಶನ್‌ ನೋಡಿಕೊಳ್ಳುತ್ತಿದ್ದರು. 1970ರಲ್ಲಿ ಐಕಾನ್ ಟ್ರಿನ್ಕಸ್‌ನಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದು. ಈ ಜೋಡಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಜುಲೈ 9ರಂದು ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಸ್ಥರು ತಿಳಿಸಿದ್ದಾರೆ.

ರೀಲ್ಸ್‌ಗೆ ಕುಣಿದು ಕುಣಿದು ಹಣ ಸಂಪಾದನೆ ಮಾಡಿದ ಆಂಟಿ ಮನೆಗೆ ಬಂತು ಹೊಸ ಸ್ಕೂಟಿ!

ಈ ವರ್ಷ ಆರಂಭದಲ್ಲಿ ಉಷಾ ಉತ್ತುಪ್ ಸಖತ್ ಖುಷಿಯಾಗಿದ್ದರು, ಸಂಗೀತ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಗಾಗಿ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ನೀಡಿ ಗೌರವಿಸಲಾಗಿತ್ತು. ಕನ್ನಡ, ತಮಿಳು, ಹಿಂದೆ, ತೆಲುಗು, ಮಲಯಾಳಂ, ಒಡಿಯಾ ಮತ್ತು ಬೆಂಗಾಲಿ ಭಾಷೆಯಲ್ಲಿ ಹಾಡಿದ್ದಾರೆ. 

ನೀವು ಇರೋದೇ ಕಪ್ಪಾ?; ದೀಪಿಕಾ ದಾಸ್ ಮೈ ಬಣ್ಣದ ಕಾಮೆಂಟ್‌ ಮಾಡಿದ ನೆಟ್ಟಿಗರು!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ 'ರಾಜಕುಮಾರ' ಚಿತ್ರದ ಹಾಡನ್ನು ಹಾಡಿರುವ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. ಅಪ್ಪು ಅಗಲಿದ ಮೇಲೆ ಉಷಾ ಉತ್ತುಪ್ ಒಬ್ಬರೇ ವೇದಿಕೆ ಮೇಲೆ ನಿಂತು ಅಪ್ಪು ನೆನೆದು ಹಾಡಿದ ವಿಡಿಯೋ ಈಗಲೇ ಎಲ್ಲರನ್ನು ಭಾವುಕರಾಗಿಸುತ್ತದೆ. 

Latest Videos
Follow Us:
Download App:
  • android
  • ios