Asianet Suvarna News

ಇಂದು 'ಶ್ರೇಯಾ ಘೋಷಾಲ್ ದಿನ'; ಓಹಿಯೋ ರಾಜ್ಯದಿಂದ ಅಪರೂಪದ ಗೌರವ!

ಗಾಯಕಿ ಶ್ರೇಯಾ ಘೋಷಾಲ್ ಟ್ಟಿಟರ್‌ನಲ್ಲಿ ಡ್ರೆಂಟಿಂಗ್. ಜೂನ್ 26ರ ಏನು ಸ್ಪೆಷಲ್ ಗೊತ್ತಾ?

Indian Singer Shreya Ghoshal Day 2021 here is why Shreya trending in twitter vcs
Author
Bangalore, First Published Jun 26, 2021, 4:23 PM IST
  • Facebook
  • Twitter
  • Whatsapp

ಭಾರತ ಚಿತ್ರರಂಗ ಕಂಡಂತ ಅದ್ಭುತ ಗಾಯಕಿ ಶ್ರೇಯಾ ಘೋಷಾಲ್.  ತನ್ನ ಹಿಂಪಾದ ಧ್ವನಿಗೆ ಹಾಗೂ ವೈಯಕ್ತಿಕ ಜೀವನದ ವಿಚಾರಗಳಿಗೆ ಸುದ್ದಿಯಾಗುವ ನಟಿ ಇದೀಗ ಬೇರೆಯೇ ವಿಚಾರಕ್ಕೆ ಟ್ಟಿಟರ್‌ನಲ್ಲಿ ಟ್ರೆಂಡ್ ಆಗುತ್ತಿದ್ದಾರೆ. 

2010ರ ಸಮ್ಮರ್ US ಟೂರ್‌ ವೇಳೆ ಓಹಿಯೋ ರಾಜ್ಯದ  ಗವರ್ನರ್ ಟೆಡ್ ಸ್ಟ್ರಿಕ್ಲ್ಯಾಂಡ್ ಜೂನ್‌ 26ರನ್ನು ಶ್ರೇಯಾ ಘೋಷಾಲ್‌ ದಿನ ಎಂದು ಘೋಷಣೆ ಮಾಡಿದ್ದರು. ಹೀಗಾಗಿ ಇಂದು ಶ್ರೇಯಾ ಅಭಿಮಾನಿಗಳು 11ನೇ ಶ್ರೇಯಾ ಘೋಷಾಲ್ ದಿನವನ್ನು ಆಚರಿಸುತ್ತಿದ್ದಾರೆ. ಟ್ಟಿಟರ್‌ನಲ್ಲಿ ಅಭಿಮಾನಿಗಳು ಶುಭ ಹಾರೈಸುವ ಮೂಲಕ ಶ್ರೇಯಾ ಡೇ ಯನ್ನು ಟ್ರೆಂಡ್ ಮಾಡುತ್ತಿದ್ದಾರೆ.

'ಪ್ರತಿ ವರ್ಷವೂ ಈ ದಿನವನ್ನು ವಿಶೇಷವಾಗಿಸುತ್ತಿರುವುದಕ್ಕೆ ಧನ್ಯವಾದಗಳು. ಶ್ರೇಯಾ ಘೋಷಾಲ್ ದಿನ ಎಂದೆಂದಿಗೂ ನಿಮ್ಮ ದಿನವಾಗಿರುತ್ತದೆ. ಫೀಲ್ ಹಂಬಲ್ಡ್,' ಎಂದು ಶ್ರೇಯಾ ಟ್ಟೀಟ್ ಮಾಡಿದ್ದಾರೆ. 

ಮಗ ದೇವ್ಯಾನ್ ಮೊದಲ ಫೋಟೋ ಶೇರ್ ಮಾಡಿದ ಶ್ರೇಯಾ 

37 ವರ್ಷದ ಶ್ರೇಯಾ ಹುಟ್ಟಿದ್ದು ಬೆಂಗಾಲಿ ಕುಟುಂಬದಲ್ಲಾದರೂ ಬೆಳೆದದ್ದು ರಾಜಸ್ಥಾನದಲ್ಲಿ. ನಾಲ್ಕನೇ ವಯಸ್ಸಿಗೇ ಸಂಗೀತಾ ಅಭ್ಯಾಸ ಶುರು ಮಾಡಿದ ಈ ಗಾಯಕಿಗೆ ಇದೀಗ ಭಾರತ ಕಂಡ ಅದ್ಭುತ ಗಾಯಕಿ. ರಾಷ್ಟ್ರ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಸೈಮಾ, ಫಿಲ್ಮಂ ಫೇರ್ ಹೀಗೆ ಸಾಲು ಸಾಲು ಪ್ರಶಸ್ತಿಗಳು ಶ್ರೇಯಾ ಮಡಿಲು ಸೇರಿವೆ. ಕನ್ನಡ ಸೇರಿ ದೇಶದ ವಿವಿಧ ಭಾಷೆಗಳ ಚಿತ್ರಗಳಲ್ಲಿ ಹಾಡಿರುವ ಈ ಗಾಯಕಿ ಇತ್ತೀಚೆಗೆ ಮಗುವಿಗೆ ಜನ್ಮ ನೀಡಿದ್ದಾರೆ. ಹ್ಯಾಪಿ ಶ್ರೇಯಾ ಘೋಷಾಲ್ ಡೇ.

 

Follow Us:
Download App:
  • android
  • ios