ಮಗನ ಮೊದಲ ಫೋಟೋ ಶೇರ್ ಮಾಡಿದ ಗಾಯಕಿ ಶ್ರೇಯಾ ದೇವ್ಯಾನ್ ಹೇಗಿದ್ದಾನೆ ನೋಡಿ

ಪತಿ ಶಿಲಾದಿತ್ಯ ಅವರೊಂದಿಗೆ ಇತ್ತೀಚೆಗೆ ತನ್ನ ಮೊದಲ ಮಗುವನ್ನು ಸ್ವಾಗತಿಸಿದ ಗಾಯಕಿ ಶ್ರೇಯಾ ಘೋಶಾಲ್ ಅವರು ಮಗುವಿನ ಮೊದಲ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. 37 ವರ್ಷದ ಗಾಯಕಿ ತನ್ನ ಮಗುವಿಗೆ ದೇವ್ಯಾನ್ ಎಂದು ಹೆಸರಿಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇನ್ಸ್ಟಾಗ್ರಾಮ್ನಲ್ಲಿ ಅವರು ಹಂಚಿಕೊಂಡ ಫೋಟೋದಲ್ಲಿ ಪತಿ ಪಕ್ಕದಲ್ಲಿ ನಿಂತಿದ್ದು ಶ್ರೇಯಾ ತನ್ನ ಮಗುವನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಮಗುವಿನ ಮುಖವನ್ನು ಫೋಟೋದಲ್ಲಿ ರಿವೀಲ್ ಮಾಡಿಲ್ಲ. ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಶೇರ್ ಮಾಡಿದ ಶ್ರೇಯಾ ಘೋಶಾಲ್ ಕ್ಯಾಪ್ಶನ್‌ನಲ್ಲಿ ತಮ್ಮ ಮನಸಿನ ಮಾತುಗಳನ್ನಾಡಿದ್ದಾರೆ.

ಅಮ್ಮನೆದೆಯಲ್ಲಿ ಬೆಚ್ಚಗೆ ಮಲಗಿದ ವಮಿಕಾ: ಮಗಳ ಮುಖ ಕವರ್ ಮಾಡಿದ ಅನುಷ್ಕಾ

'ದೇವ್ಯಾನ್ ಮುಖೋಪಾಧ್ಯಾಯ.' ಮೇ 22 ರಂದು ಆಗಮಿಸಿ ನಮ್ಮ ಜೀವನವನ್ನು ಶಾಶ್ವತವಾಗಿ ಬದಲಾಯಿಸಿದರು. ಶೀರ್ಷಿಕೆಯಲ್ಲಿ ಶ್ರೇಯಾ ಅವರು ಮತ್ತು ಅವರ ಪತಿ ತಮ್ಮ ಮೊದಲ ಮಗುವಿನ ರೂಪದಲ್ಲಿ ಪಡೆದ "ಜೀವನದ ಉಡುಗೊರೆ" ಗೆ ಹೇಗೆ ಕೃತಜ್ಞರಾಗಿರುತ್ತಾರೆ ಎಂಬುದನ್ನು ಹಂಚಿಕೊಂಡಿದ್ದಾರೆ.

View post on Instagram

"ಅವನು ಹುಟ್ಟಿದ ಮೊದಲ ನೋಟದಲ್ಲಿ ಅವನು ನಮ್ಮ ಹೃದಯವನ್ನು ಪ್ರೀತಿಯಿಂದ ತುಂಬಿದ್ದಾನೆ. ಇದು ಇನ್ನೂ ಕನಸಿನಂತೆ ಭಾಸವಾಗುತ್ತಿದೆ. ಶಿಲಾದಿತ್ಯ ಮತ್ತು ನಾನು ಜೀವನದ ಈ ಸುಂದರ ಉಡುಗೊರೆಗೆ ತುಂಬಾ ಕೃತಜ್ಞರಾಗಿರುತ್ತೇವೆ "ಎಂದು ಅವರು ಬರೆದಿದ್ದಾರೆ.