Asianet Suvarna News Asianet Suvarna News

ಚಲನಚಿತ್ರದ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ಜನ್ಮ ದಿನದ ಸವಿನೆನಪು

ಇಂದು ಭಾರತೀಯ ಚಲನಚಿತ್ರದ ಪಿತಾಮಹ ಎಂದೇ ಕರೆಸಿಕೊಳ್ಳುವ ದಾದಾ ಸಾಹೇಬ್ ಫಾಲ್ಕೆ ಅವರ ಹುಟ್ಟುಹಬ್ಬದ ಸವಿ ನೆನಪು . ಚಲನಚಿತ್ರರಂಗದ ಮಾಯಾಲೋಕವನ್ನು ರಾಜಾ ಹರಿಶ್ಚಂದ್ರ ಚಿತ್ರದ ಮುಖಾಂತರ, ಭಾರತೀಯ ಜನತೆಗೆ ಇತ್ತವರು ದಾದಾಸಾಹೇಬ್ ಫಾಲ್ಕೆ. ಚಲನಚಿತ್ರರಂಗದ ಆವಿಷ್ಕಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದ ಮಹಾತ್ಯಾಗಿ ದಾದಾ ಸಾಹೇಬ್ ಫಾಲ್ಕೆ. 
 

Indian producer Director Dadasaheb Phalke 150 Birth anniversary
Author
Bangalore, First Published Apr 30, 2020, 12:42 PM IST

ಚಿತ್ರರಂಗದಲ್ಲಿ ದಾದಾ ಸಾಹೇಬ್ ಫಾಲ್ಕೆ ಎಂದೇ ಪ್ರಸಿದ್ದಿ ಪಡೆದಿರುವ ಇವರ ಮೂಲ ಹೆಸರು ದುಂಡಿರಾಜ್ ಗೋವಿಂದ ಫಾಲ್ಕೆ.  1870ರ ಏಪ್ರಿಲ್‌ 30ರಂದು ಮಹಾರಾಷ್ಟ್ರದ ನಾಸಿಕ್‌ ಜಿಲ್ಲೆಯ ತ್ರಯಂಬಕೇಶ್ವರದಲ್ಲಿ ಜನಿಸಿದ್ದ ಇವರು 1912ರಲ್ಲಿ ಮೊಟ್ಟ ಮೊದಲ ಬಾರಿಗೆ 'ರಾಜಾ ಹರಿಶ್ಚಂದ್ರ' ಎಂಬ ಮರಾಠಿ ಸಿನಿಮಾ ನಿರ್ದೇಶನ ಮಾಡಿದರು. ಆ ಮೂಲಕ ದೇಶದಲ್ಲಿ ಸಿನಿಮಾ ನಿರ್ಮಾಣ ಪರಂಪರೆಗೆ ನಾಂದಿ ಹಾಡಿದ್ದರು.

ಮುಂಬಯಿಯ ವಿಲ್ಸನ್ ಕಾಲೇಜಿನಲ್ಲಿ 1885 ರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಕೆಲಸ ಸಿಕ್ಕಿದ ನಂತರ ಅವರು ತಮ್ಮ ಕುಟುಂಬ ಸಮೇತ ಮುಂಬಯಿಗೆ ಬಂದರು. ಮುಂಬಯಿನಲ್ಲಿರುವ ಪ್ರಸಿದ್ಧ ಜೆ.ಜೆ.ಸ್ಕೂಲ್ ಆಫ್ ಆರ್ಟ್ಸ್‌ನಲ್ಲಿ ಚಿತ್ರಕಲಾ ತರಗತಿಗೆ ಪ್ರವೇಶ ಪಡೆದ ಮೇಲೆ ಅವರ ಚಿತ್ರಾಸಕ್ತಿ ಶುರು ಆಯಿತು.

ಚಿತ್ರಗಳ: ಹೊಸ ಅವಾತಾರದಲ್ಲಿ 'ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸ್ವೀಕರಿಸಿದ ಕಿಚ್ಚ..!

ಶುದ್ಧ ಭಾರತೀಯ ಸಿನಿಮಾ ಮಾಡಬೇಕೆಂಬ ಕನಸಿನಿಂದ ತಮ್ಮ ಎಲ್ಲ ವಸ್ತುಗಳನ್ನು ಅಡವಿಟ್ಟು, ಚಿತ್ರ ನಿರ್ಮಾಣಕ್ಕೆ ಬೇಕಾಗುವ ಯಂತ್ರೋಪಕರಣಗಳನ್ನು ಖರೀದಿಸಲು ಲಂಡನ್ನಿಗೆ ಹೋಗಿ ಅಲ್ಲಿ ಸಿನಿಮಾ ನಿರ್ಮಾಪಕ ಸಿಸಿಲ್ ಅವರ ಜೊತೆಗೆ ಚಲನಚಿತ್ರ ನಿರ್ಮಾಣದ ಎಲ್ಲಾ ವಿಭಾಗಗಳನ್ನು ಅಧ್ಯಯನ ಮಾಡಿ ಮರಳಿ ಭಾರತಕ್ಕೆ ಬಂದರು.

ಸಿನಿಮಾ ಮಾಡುವ ಗೀಳು ಹತ್ತಿಸಿಕೊಂಡಿದ್ದ ಫಾಲ್ಕೆ ಅವರು ತಮ್ಮ ಹೆಂಡತಿಯ ಒಡವೆಯನ್ನು ಕೂಡ ಅಡವಿಟ್ಟು ಸಿನಿಮಾ ಮಾಡಿದ ಪ್ರಸಂಗ ಕೂಡ ನಡೆದಿದೆ ಅಷ್ಟರ ಮಟ್ಟಿಗೆ ಸಿನಿಮಾ ಪ್ರೇಮಿಯಾಗಿದ್ದರು . 1913, ಮೇ 13 ಕಾರಣ ಅಂದು  'ರಾಜಾ ಹರಿಶ್ಚಂದ್ರ' ಸಿನಿಮಾ ಬಿಡುಗಡೆಯಾಯಿತು. ಇಡೀ ಭಾರತ ಚಿತ್ರರಂಗದಲ್ಲಿ ತೆರೆಗೆ ಬಂದ ಮೊದಲ ಸಿನಿಮಾ ಇದಾಯಿತು. ಅದೇ ಕಾರಣಕ್ಕೆ ಈ ದಿನ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ  ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ . 

Indian producer Director Dadasaheb Phalke 150 Birth anniversary

ಹಣ ಹೊಂದಿದವರು ಮುಂಬೈನ ಕಾರೋನೇಷನ್ ಚಿತ್ರಮಂದಿರದ ಒಳಗೆ ಸಿನಿಮಾ ನೋಡುತ್ತಿದ್ದರೆ ಹಣವಿಲ್ಲದವರು ಥಿಯೇಟರ್ ಹೊರಗೆ ಕುತೂಹಲದಿಂದ ಗುಂಪು ಕಟ್ಟಿದ್ದರು.ತೆರೆ ಮೇಲೆ ಭಾರತೀಯ ಕಲಾವಿದರನ್ನು ನೋಡಿ ಎಲ್ಲರೂ ಬೆರಗಾದರು. ಆದರೆ ಸಿನಿಮಾಗೆ ದೊಡ್ಡ ಗೆಲುವು ಸಿಗಲಿಲ್ಲ. cತದನಂತರ 'ಸತ್ಯವಾನ್ ಸಾವಿತ್ರಿ', 'ಮೋಹಿನಿ ಬಸ್ಮಾಸುರ್', 'ಶ್ರೀಕೃಷ್ಣ ಜನ್ಮ', 'ಲಂಕಾ ದಹನ್' ಮುಂತಾದ ಪ್ರಮುಖ ಸಿನಿಮಾ ಮಾಡಿದರು. ಭಾರತ ಸರ್ಕಾರ ಫಾಲ್ಕೆ ಅವರ ಹೆಸರಿನಲ್ಲಿ ನೀಡುವ 'ದಾದಾ ಸಾಹೇಬ್ ಫಾಲ್ಕೆ' ಪ್ರಶಸ್ತಿ ಚಿತ್ರರಂಗದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿದೆ.

ಫಾಲ್ಕೆ ಪ್ರಶಸ್ತಿಯನ್ನು ನಮ್ರತೆಯಿಂದ ಸ್ವೀಕರಿಸಿದ 'ದಾದಾ'- ವಿಡಿಯೋ

ಇಪ್ಪತ್ತನೇ  ಶತಮಾನದ ಭಾರತೀಯ ಚಿತ್ರರಂಗದ ಪಿತಾಮಹರಾದ ದಾದಾ ಸಾಹೇಬ್ ಫಾಲ್ಕೆ ಅವರ ಹೆಸರಲ್ಲಿರುವ ಪ್ರಶಸ್ತಿ ಪಡೆಯುವುದು, ಚಲನಚಿತ್ರ ರಂಗದ ಉತ್ತಮ ಕಲಾವಿದನೊಬ್ಬನ ಜೀವನದ ಗುರಿ. ಆ ಪ್ರಶಸ್ತಿ ಪಡೆದ ಕಲಾವಿದ ಎಲ್ಲಾ ಘಟ್ಟಗಳನ್ನೂ ದಾಟಿ ಎವರೆಸ್ಟ್ ಶಿಖರದ ತುಟ್ಟ ತುದಿ ಮುಟ್ಟಿದಂತೆ. ಇಂತಹ ಪ್ರಶಸ್ತಿ ಪಡೆದವರ ಪಟ್ಟಿಯಲ್ಲಿ ಮೊದಲಿಗರು ದೇವಿಕಾರಾಣಿ ರೋರಿಚ್(1969). 1995ರಲ್ಲಿ ನಮ್ಮ ವರನಟ ಡಾ.ರಾಜ್‌ಕುಮಾರ್ . 

ದಾದಾ ಸಾಹೇಬ್ ಫಾಲ್ಕೆ ಅವರ ಜನ್ಮ ದಿನದ ಈ ಸಂದರ್ಭದಲ್ಲೇ ಭಾರತೀಯ ಚಿತ್ರರಂಗದ ಇಬ್ಬರು ಮಹಾನ್ ಕಲಾವಿದರಾದ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಅವರನ್ನು ಕಳೆದುಕೊಂಡಿರುವುದು ದುಃಖಕರ ಸಂಗತಿಯಾಗಿದೆ .

ತೆಲುಗಿನ ಖ್ಯಾತ ನಿರ್ದೇಶಕ ಕೆ. ವಿಶ್ವನಾಥ್'ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Follow Us:
Download App:
  • android
  • ios