ಇದ್ದ​ಕ್ಕಿ​ದ್ದಂತೆ ಕಾಣಿ​ಸಿ​ಕೊಂಡ ಹೃದಯಾಘಾತಕ್ಕೆ ಒಳಗಾಗಿದ್ದ ಅರ್ಜುನ್‌ ಜನ್ಯಾ, ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಸಲೆ ಮೇರೆಗೆ ಒಂದು ತಿಂಗಳು ವಿಶ್ರಾಂತಿ​ಯ​ಲ್ಲಿ​ದ್ದರು. ಹೀಗಾಗಿ ಅವರು ಒಪ್ಪಿ​ಕೊಂಡಿದ್ದ ಬಹು​ತೇಕ ಸಿನಿ​ಮಾ​ಗಳು ಪೋಸ್ಟ್‌ ಪ್ರೊಡ​ಕ್ಷನ್‌ ಕೆಲ​ಸ​ಗಳು ನಿಂತೇ ಹೋಗಿ​ದ್ದ​ವು.

ಈಗ ಪುನಃ ಮ್ಯೂಸಿಕ್‌ ರೂಮ್‌​ಗೆ ವಾಪಸ್ಸು ಆಗಿದ್ದು, ಸರ​ದಿ​ಯಲ್ಲಿ ಕಾಯು​ತ್ತಿ​ರುವ ಚಿತ್ರ​ಗ​ಳಿಗೆ ರಾಗ ಸಂಯೋ​ಜನೆ, ಹಿನ್ನೆಲೆ ಸಂಗೀತ ಕೂರಿ​ಸುವ ಕೆಲ​ಸ​ದಲ್ಲಿ ಬ್ಯುಸಿ ಆಗಿ​ದ್ದಾರೆ. ಆರೋ​ಗ್ಯ​ದಿಂದ ಚೇತ​ರಿ​ಸಿ​ಕೊಂಡ ಬಂದು ಪ್ರೇಮ್‌ ನಿರ್ದೇ​ಶ​ನದ ‘ಏಕ್‌ ಲವ್‌ ಯಾ’ ಚಿತ್ರಕ್ಕೆ ಸಂಗೀತ ನೀಡು​ತ್ತಿ​ದ್ದಾರೆ.

ಸಂಗೀತ ಲೋಕಕ್ಕೆ ಮರಳಿದ ಅರ್ಜುನ, ಮತ್ತೆ ಸಿಗಲಿದೆ ರಸದೌತಣ

ಅದೇ ಉತ್ಸಾ​ಹ​ದಲ್ಲಿ ಮರ​ಳಿ​ರುವ ಅರ್ಜುನ್‌ ಜನ್ಯಾ ಅವ​ರನ್ನು ಕಂಡು ಜೋಗಿ ಪ್ರೇಮ್‌ ಅವರು ‘ಮ್ಯೂಸಿಕ್‌ ಬೀಟ್ಸ್‌ ಇರೋವರೆರ್ಗೂ ನಮ… ಹಾರ್ಟ… ಬೀಟ್‌ ಯಾವತ್ತೂ ನಿಲ್ಲಲ್ಲ’ ಎಂದು ಅರ್ಜುನ್‌ ಜನ್ಯಾ ಅವ​ರಿಗೆ ಶುಭ ಕೋರಿ​ದ್ದಾರೆ. ‘ಕೋಟಿ​ಗೊಬ್ಬ 3’ ಸೇರಿ​ದಂತೆ ಅರ್ಜುನ್‌ ಜನ್ಯ ಕೈಯಲ್ಲಿ ಸಾಕಷ್ಟುಚಿತ್ರಗಳಿವೆ. ಅವರ ಸಂಗೀತ ನಿರ್ದೇಶನದ ಹಲವು ಚಿತ್ರಗಳು ಇದೀಗ ಬಿಡುಗಡೆಗೂ ರೆಡಿಯಾಗಿವೆ. ಈ ಪೈಕಿ ‘ರಾಬ​ರ್ಟ್‌’ ಚಿತ್ರವೂ ಒಂದು. ಇನ್ನೂ ಅರ್ಧಕ್ಕೆ ನಿಂತಿದ್ದ ಸಣ್ಣಪುಟ್ಟಕೆಲಸಗಳನ್ನು ಈಗ ಪೂರ್ಣಗೊಳಿಸುತ್ತಿದ್ದಾರೆ.