Asianet Suvarna News Asianet Suvarna News

ವಿಜಯ್ ದೇವರಕೊಂಡ ಜತೆ ಸಿನಿಮಾಗೆ ಹೋಗ್ಬೇಕು ಅಂದ ರಶ್ಮಿಕಾ ಹೃತಿಕ್ ಜತೆ ಹಾಗಂದ್ಬಿಟ್ರಾ?

ಇಂದು ನಟಿ ರಶ್ಮಿಕಾ ಮಂದಣ್ಣ ಭಾರತ ಸೇರಿದಂತೆ, ಜಗತ್ತಿನ ಹಲವು ದೇಶಗಳ ಜನರಿಗೆ ಚಿರಪರಿಚಿತ ಹೆಸರು. ಸದ್ಯ ಅಲ್ಲು ಅರ್ಜುನ್‌ ಜತೆಗಿನ 'ಪುಷ್ಪಾ 2' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ, ಇಂದು ಭಾರತದ ಬಹುಬೇಡಿಕೆಯ ನಟಿ.

National Crush Rashmika Mandanna talks about her wish in an Interview srb
Author
First Published Apr 30, 2024, 5:35 PM IST

ನಟಿ ರಶ್ಮಿಕಾ ಮಂದಣ್ಣ (Vijay Deverakonda)ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತ ತಾವು ಕೆಲವೊಬ್ಬರು ಸಿಕ್ಕರೆ ಏನು ಮಾಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ. ನಿರೂಪಕರು ಒಬ್ಬೊಬ್ಬರ ಹೆಸರನ್ನು ಹೇಳುತ್ತಾ ಹೋದಂತೆ ನಟಿ ರಶ್ಮಿಕಾ, ಅವರು ಸಿಕ್ಕರೆ ತಾವು ಏನು ಮಾಡುತ್ತೇನೆ ಎಂದು ಹೇಳಿದ್ದಾರೆ. ನಿರೂಪಕರು 'ಸಮಂತಾ' ಎಂದಾಗ, ರಶ್ಮಿಕಾ 'ಸಮಂತಾ ಸಿಕ್ಕಾಗ ನಾನು ಟೈಟ್ ಹಾಗ್ ಮಾಡುತ್ತೇನೆ. ಜತೆಗೆ, ಆಕೆಯ ಜತೆ ಕ್ಯೂಟ್ ಆಗಿ ಸಂಭಾಷಣೆ ನಡೆಸಲಿದ್ದೇನೆ' ಎಂದಿದ್ದಾರೆ. 

'ಶಾರುಖ್‌ ಖಾನ್' ಎಂದಾಗ 'ಓಹ್, ಈಗ ಅವರೇನು ಮಾಡುತ್ತಿದ್ದಾರೆ ಎಂದು ನನಗೆ ಅಪ್‌ಡೇಟ್ ಕೊಡಿ' ಎಂದಿದ್ದಾರೆ. 'ಹೃತಿಕ್ ರೋಶನ್' ಎನ್ನಲು 'ಗಾರ್ಜಿಯಸ್, ಅವರೊಂದಿಗೆ ನಾನು ಸಿನಿಮಾ ಮಾಡಬೇಕು, ಅವರೆಲ್ಲಿದ್ದಾರೆ ಹೇಳಿ, ಮಾತನಾಡುತ್ತೇನೆ' ಎಂದಿದ್ದಾರೆ ನಟಿ ರಶ್ಮಿಕಾ. ಬಳಿಕ ನಿರೂಪಕ 'ವಿಜಯ್ ದೇವರಕೊಂಡ' ಎನ್ನಲು 'ಏಹ್, ಅವರೊಂದಿಗೆ ಸಿನಿಮಾಗೆ ಹೋಗದೇ ತುಂಬಾ ಕಾಲವಾಯ್ತು. ಅವರೊಂದಿಗೆ ಸಿನಿಮಾ ಹೋಗ್ಬೇಕು ನಾನು ಬಿಡಿ..' ಎಂದಿದ್ದಾರೆ ನಟಿ ರಶ್ಮಿಕಾ ಮಂದಣ್ಣ. 

ಅಂಬಿ ಕಡೆಯಿಂದ ವಿಷ್ಣು ರಾಜಕೀಯ ಪ್ರವೇಶಕ್ಕೆ ಪ್ಲಾನ್ ನಡೆದಿತ್ತು; ಯಾರ ವಿರುದ್ಧ ಗೊತ್ತಾ?

ಕನ್ನಡ ಸಿನಿಮಾ ಮೂಲಕ ಸಿನಿಮಾರಂಗಕ್ಕೆ ಬಂದ ನಟಿ ರಶ್ಮಿಕಾ, ಇಂದು ಸೌತ್ ಹಾಗೂ ನಾರ್ತ್‌ ಎಂಬ ಭೇದಭಾವವಿಲ್ಲದೇ ಎಲ್ಲಾ ಕಡೆ ಸಲ್ಲುವ ನಟಿಯಾಗಿ ಬೆಳೆದಿದ್ದಾರೆ. 'ಕಿರಿಕ್ ಪಾರ್ಟಿ' ಮೂಲಕ ವೃತ್ತಿಜೀವನ ಶುರುಮಾಡಿದ ರಶ್ಮಿಕಾ, ವಿಜಯ್ ದೇವರಕೊಂಡ (Vijay Deverakonda)ಜತೆಗಿನ 'ಗೀತ ಗೋವಿಂದಂ' ಚಿತ್ರದ ಮೂಲಕ ಸ್ಟಾರ್ ನಟಿಯಾಗಿ ಬೆಳೆದರು. ತಮಿಳಿನ ಪುಷ್ಪಾ, ಬಾಲಿವುಡ್‌ನ ಆನಿಮಲ್ ಹೀಗೆ ಎಲ್ಲಾ ಕಡೆಯಲ್ಲೂ ಸಕ್ಸಸ್ ದಾಖಲಿಸಿದ್ದಾರೆ. 

ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?

ಇಂದು ನಟಿ ರಶ್ಮಿಕಾ ಮಂದಣ್ಣ ಭಾರತ ಸೇರಿದಂತೆ, ಜಗತ್ತಿನ ಹಲವು ದೇಶಗಳ ಜನರಿಗೆ ಚಿರಪರಿಚಿತ ಹೆಸರು. ಸದ್ಯ ಅಲ್ಲು ಅರ್ಜುನ್‌ ಜತೆಗಿನ 'ಪುಷ್ಪಾ 2' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ, ಇಂದು ಭಾರತದ ಬಹುಬೇಡಿಕೆಯ ನಟಿ. ರಶ್ಮಿಕಾ ಮತ್ತೆ ವಿಜಯ್ ದೇವರಕೊಂಡ ಜತೆ ಸಿನಿಮಾ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದ್ದು, ಅವರಿಬ್ಬರ ಜೋಡಿಯನ್ನು ಮತ್ತೆ ತೆರೆಯ ಮೇಲೆ ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. 

'ಆ ಕರಾಳ ರಾತ್ರಿ'ಯ ಬಗ್ಗೆ ಮಾತನಾಡಿದ ಅನುಪಮಾ ಗೌಡ; ಅಲ್ಲಿಂದ ಮುಂದಕ್ಕೆ ಜೀವನ ಹೇಗೆ ನಡೀತಿದೆ?

Latest Videos
Follow Us:
Download App:
  • android
  • ios