Asianet Suvarna News Asianet Suvarna News

ಮೊದಲ ಭೇಟಿಯಲ್ಲಿ ಪುನೀತ್ ರಾಜ್‌ಕುಮಾರ್ ಏನ್ ಮಾಡಿದ್ರು ಅಂತ ಹೇಳಿದ್ರು ಸಾಯಿ ಪಲ್ಲವಿ!

ನಾನು ಜಸ್ಟ್ ಇಂಡಸ್ಟ್ರಿಗೆ ಕಾಲಿಟ್ಟ ನಟಿ. ಅವರಾಗಿಯೇ ಬಂದು ಮಾತನಾಡಿಸುವಂತದ್ದು ಏನೂ ಇರಲಿಲ್ಲ. ನನ್ನ ಮೊದಲ ಕೆಲಸಕ್ಕೇ ಹಾಗೆ ಹೇಳಿ  ಬೆನ್ನುತಟ್ಟುವ ಕೆಲಸವನ್ನು ಕನ್ನಡದ ಸೂಪರ್ ಸ್ಟಾರ್‌ ಆಗಿ ಪುನೀತ್ ರಾಜ್‌ಕುಮಾರ್ ಮಾಡಬೇಕಾಗಿಯೂ ಇರಲಿಲ್ಲ...

In kannada movie industry I met puneeth rajkumar as first person Says actress Sai Pallavi srb
Author
First Published Jan 31, 2024, 11:47 PM IST

ಮಲಯಾಳಂ ಮೂಲದ ನಟಿ ಸಾಯಿ ಪಲ್ಲವಿ ಕನ್ನಡದ ಖಾಸಗಿ ಚಾನೆಲ್‌ ಒಂದರ ಸಂದರ್ಶನದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನ್ನಾಡಿದ್ದಾರೆ. ಕೇಳಿದ ಪ್ರಶ್ನೆಗೆ ಉತ್ತರಿಸಿದ ನಟಿ ಸಾಯಿ ಪಲ್ಲವಿ 'ನಾನು ಆಗಷ್ಟೇ ಸಿನಿಮಾ ಇಂಡಸ್ಟ್ರಿಗೆ ಬಂದು ಮೂರು ತಿಂಗಳಾಗಿತ್ತು. ಪ್ರೇಮಂ ಮಲಯಾಳಂ ಸಿನಿಮಾ ನಟನೆಗೆ ನನಗೆ ಫಿಲಂಫೇರ್ ಪ್ರಶಸ್ತಿ ಬಂದಿತ್ತು. ಸ್ವೀಕರಿಸಿ ನಾನು ಹೊರಟಾಗ ನನ್ನನ್ನು ಒಮದು ಕಡೆ ತಡೆದು ನಿಲ್ಲಿಸಿ ಕನ್ನಡ ನಟ ಪುನೀತ್ ರಾಜ್‌ಕುಮಾರ್ ಮಾತನ್ನಾಡಿದ್ದರು. 

ನನ್ನ ಬಳಿ ಬಂದ ಪುನೀತ್ ಹೋಗುತ್ತಿದ್ದ ನನ್ನನ್ನು ತಡೆದು 'ನಿಮ್ಮ ಕೆಲಸ ನನಗೆ ತುಂಬಾ ಇಷ್ಟವಾಗಿದೆ. ನಿಮ್ಮ ಜತೆ ಕೆಲಸ ಮಾಡಬೇಕು ನಾನು, ಅದಕ್ಕಾಗಿ ನಾನು ತುಂಬಾ ಕಾಲ ವೇಟ್ ಮಾಡಲಾರೆ' ಎಂದು ಹೇಳಿದ್ದರು. ನಾನು ಆಗಷ್ಟೇ ಮಲಯಾಳಂ ಸಿನಿಮಾ ಉದ್ಯಮಕ್ಕೆ ಕಾಲಿಟ್ಟ ನಟಿ ಆಗಿದ್ದರಿಂದ ನನಗೆ ಕನ್ನಡದ ಯಾವುದೇ ನಟನಟಿಯರ ಪರಿಚಯ ಇರಲೇ ಇಲ್ಲ. ಹಾಗಾಗಿ ನಾನು ಅವರನ್ನು ಮಾತನಾಡಿಸಲು ಅಸಾಧ್ಯವಾಗಿತ್ತು. 

ಬೇರೆ ಭಾಷೆ ಸಿನಿಮಾದಲ್ಲೂ ನಟಿಸಿದ್ರು ಡಾ ರಾಜ್‌ಕುಮಾರ್; ಬಳಿಕ ಮತ್ತೆಂದೂ ನಟಿಸಲ್ಲ ಅಂದ್ಬಿಟ್ರು!

ಆದರೆ ಅವರೇ ನನ್ನನ್ನು ತಡೆದು ನಿಲ್ಲಿಸಿ ಮಾತನಾಡಿದ್ದು ನನಗೆ ನಿಜವಾಗಿಯೂ ಅಚ್ಚರಿ ಜತೆಗೆ ಖುಷಿಯನ್ನು ಸಹ ತಂದಿತು. ಏಕೆಂದರೆ ನಾನು ಜಸ್ಟ್ ಇಂಡಸ್ಟ್ರಿಗೆ ಕಾಲಿಟ್ಟ ನಟಿ. ಅವರಾಗಿಯೇ ಬಂದು ಮಾತನಾಡಿಸುವಂತದ್ದು ಏನೂ ಇರಲಿಲ್ಲ. ನನ್ನ ಮೊದಲ ಕೆಲಸಕ್ಕೇ ಹಾಗೆ ಹೇಳಿ  ಬೆನ್ನುತಟ್ಟುವ ಕೆಲಸವನ್ನು ಕನ್ನಡದ ಸೂಪರ್ ಸ್ಟಾರ್‌ ಆಗಿ ಪುನೀತ್ ರಾಜ್‌ಕುಮಾರ್ ಮಾಡಬೇಕಾಗಿಯೂ ಇರಲಿಲ್ಲ. ಆದರೆ ಅವರು ಸ್ವತಃ ತಾವೆ ಮುಂದೆ ಬಂದು ನನ್ನ ನಟನೆಯನ್ನು ಹೊಗಳಿ ಹೋಗಿದ್ದರು. 

ಐತಿಹಾಸಿಕ ಈವೆಂಟ್‌ಗೆ ಸಾಕ್ಷಿಯಾಗಿದ್ದು ನನ್ನ ಭಾಗ್ಯ, ರಾಮಲಲ್ಲಾ ಮೂರ್ತಿ ಸುಂದರವಾಗಿದೆ; ನಟ ರಜನಿಕಾಂತ್

ಆದರೆ, ಸ್ವಲ್ಪ ಲಾದ ಬಳಿಕ ಅವರೇ ಇಲ್ಲ. ನನಗೆ ಅವರೊಂದಿಗೆ ಕೆಲಸ ಮಾಡುವಿದಿರಲಿ, ಅವರನ್ನು ಮತ್ತೆ ನೋಡಲು ಕೂಡ ಸಾಧ್ಯವಾಗಲಿಲ್ಲ. ನಿಜವಾಗಿಯೂ ಅಮದು ಅವರು ಆಡಿದ್ದ ಮಾತು, ನಡೆದುಕೊಂಡ ರೀತಿಯನ್ನು ನಾನು ಜೀವನದಲ್ಲಿ ಯಾವತ್ತೂ ಮರೆಯಲಾರೆ' ಎಂದಿದ್ದಾರೆ ಇಂದು ಬಹುಭಾಷಾ ನಟಿಯಾಗಿ ಪ್ರಖ್ಯಾತಿ ಪಡೆದಿರುವ ಸಾಯಿ ಪಲ್ಲವಿ. 

ಸಿನಿಮಾಗೆ ಕರ್ಕೊಂಡ್ ಬಂದ್ರು ಶಂಕರ್‌ನಾಗ್, ಅಂಗಡಿ ಬಿಟ್ಟೆ, ಏನೇನೋ ಮಾಡ್ದೆ; ಏನೇನಂದ್ರು ರಮೇಶ್‌ ಭಟ್‌..!?

Follow Us:
Download App:
  • android
  • ios