ಫಾರ್ ರಿಜಿಸ್ಟ್ರೇಷನ್ ಚಿತ್ರಕ್ಕೆ ದೊಡ್ಡ ಸಾಹಸ ಮಾಡಿದ ಮಿಲನಾ ನಾಗರಾಜ್. ತೂಕ ಬಟ್ಟೆ ಧರಿಸಿ 9 ಗಂಟೆ ನೀರಲಿದ್ದ ನಟಿ....
ಪೃಥ್ವಿ ಅಂಬಾರ್ ಮತ್ತು ಮಿಲನಾ ನಾಗರಾಜ್ ಅಭಿನಯಿಸಿರುವ ಫಾರ್ ರಿಜಿಸ್ಟ್ರೇಷನ್ ಚಿತ್ರ ಫೆ 10ಕ್ಕೆ ತೆರೆ ಮೇಲೆ ಮೂಡಿ ಬರಲಿದೆ. ಕೆಲವು ದಿನಗಳ ಹಿಂದೆ ಚಿತ್ರದ ಸ್ಪೆಷಲ್ ಹಾಡು ಚಿತ್ರೀಕರಣ ನಡೆದಿದೆ, ಇಮ್ರಾನ್ ಸರ್ದಾರಿಯಾ ಕೋರಿಯೋಗ್ರಫ್ ಮಾಡಿದ್ದು ಮಿಲನಾ ಶ್ರಮವನ್ನು ಮೆಚ್ಚಿದ್ದಾರೆ.
ನೀರಿನೊಳಗೆ ಚಿತ್ರೀಕರಣ ಮಾಡುವುದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ವಿಚಾರವಲ್ಲ. ಹಿಂದಿನ ಕಾದಲ್ಲಿ ಹೆಚ್ಚಿಗೆ ಮಾಡುತ್ತಿದ್ದರು ಈಗ ಆ ಟ್ರೆಂಡ್ ಮತ್ತೆ ಬಂದಿದೆ. ಅಂಡರ್‌ವಾಟರ್ ಚಿತ್ರೀಕರಣ ಕೋರಿಯೋಗ್ರಫ್ ಮಾಡಿರುವ ಇಮ್ರಾನ್ 'ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಿಗೆ ಕೆಂಟೆಂಟ್ ಇರುವ ಸಿನಿಮಾಗಳನ್ನು ನೋಡುತ್ತಾರೆ. ವಿಭಿನ್ನ ಪ್ರಯತ್ನ ಮಾಡಿಲ್ಲ ಅಂದ್ರೆ ನಮ್ಮ ಶ್ರಮ ಗೊತ್ತಾಗುವುದಿಲ್ಲ. ಹೀಗಾಗಿ ಫಾರ್ ರಿಜಿನ್ ಸಿನಿಮಾಗೆ ಅಂಡರ್‌ವಾಟರ್ ಸಾಂಗ್ ಶೂಟಿಂಗ್ ಮಾಡುವ ಪ್ಲ್ಯಾನ್ ಮಾಡಲಾಗಿತ್ತು. ಮಿಲನಾ ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿರುವ ಕಾರಣ ನೀರಿನಲ್ಲಿ ಡಾಲ್ಫಿನ್ ರೀತಿ ಇದ್ದರು. ನೀರಿನಲ್ಲಿ ಚಾಲೆಂಜ್ ಶಾಟ್ ಚಿತ್ರೀಕರಣ ಮಾಡಿರುವೆ. ನೀರಿನಲ್ಲಿ ಪೃಥ್ವಿ ಕಣ್ಣು ಹೊಡೆಯುವ ಸೀನ್ ನೋಡಬಹುದು ಇದೆಲ್ಲಾ ಚಿತ್ರೀಕರಣ ಮಾಡುವುದು ಕಷ್ಟ. ಯಾವ ಎಮೋಷನ್‌ನೂ ಮಿಸ್ ಮಾಡಿಲ್ಲ' ಎಂದು ಇಮ್ರಾನ್ ಬೆಂಗಳೂರು ಟೈಮ್ಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಈ ಹಾಡಿನಲ್ಲಿ ಮೂರು ಡಿಫರೆಂಟ್ ಎಲಿಮೆಂಟ್‌ಗಳಿದೆ, ಒಂದು ಅಂಡರ್‌ವಾಟರ್, ಒಂದು 5 ಸಾವಿರ ಪಕ್ಷಿಗಳ ಜೊತೆ ಮತ್ತೊಂದು 10 ಸಾವಿರ ಫ್ಲೋಟಿಂಗ್ ಫೋಟೋಗ್ರಫ್‌ಗಳ ಜೊತೆ. ಇವಳುಗಳ ಚಿತ್ರೀಕರಣಕ್ಕೆ ರೋಬಾಟಿಕ್ ಕ್ಯಾಮೆರಾಗಳನ್ನು ಬಳಸಿರುವೆ ಫ್ಯಾಂಟಮ್ ಕ್ಯಾಮೆರಾದಲ್ಲಿ ultraslow ಶಾಟ್ ಕ್ಲಿಕ್ ಮಾಡಿದೆವು. ನೀರಿನಲ್ಲಿ ಇಬ್ಬರೂ 9 ಗಂಟೆಗಳ ಕಾಲ ಇದ್ದರು ಅಂದು ಬಿಸಲು ಇರುತ್ತದೆ ಎಂದುಕೊಂಡೆವು ಆದರೆ ಮಳೆ ಇತ್ತು. ಪೂನ್‌ಯಿಂದ ಹೊರ ಬರುತ್ತಿದ್ದಂತೆ ಚಳಿ ಶುರುವಾಗುತ್ತದೆ ಹೀಗಾಗಿ ಕೆಲವು ನಿಮಿಷಗಳ ಕಾಲ ನೀರಿನಲ್ಲಿದ್ದು ಹೊರ ಬಂದ್ದರು. ಮಿಲನಾ ತೂಕ ಬಟ್ಟೆ ಧರಿಸಿದ್ದರು ಸ್ವಿಮಿಂಗ್ ಅಭ್ಯಾಸವಿದ್ದ ಕಾರಣ ಕೆಲಸ ಸುಲಭವಾಯ್ತು. ಪೃಥ್ವಿ ಮತ್ತು ಮಿಲನಾ ಏನೂ ತಿಂದಿರಲಿಲ್ಲ..ಊಟ ಮಾಡಿದ್ದರೆ ನೀರಿನಲ್ಲಿ ಹೆಚ್ಚಿನ ಸಮಯ ಇರಲು ಕಷ್ಟವಾಗುತ್ತದೆ. ಹಾಲಿವುಡ್ ರೇಜ್‌ಗೆ ದೃಶ್ಯಗಳು ಮೂಡಿ ಬಂದಿದೆ' ಎಂದು ಇಮ್ರಾನ್ ಹೇಳಿದ್ದಾರೆ.
ಪೃಥ್ವಿ ಮಾತು:
'ಕರಾವಳಿ ಹುಡುಗನಾಗಿದ್ದ ಕಾರಣ ಸಮುದ್ರದಲ್ಲಿ ಹೆಚ್ಚಿಗೆ ಸಮಯ ಕಳೆದಿರುವೆ. ಆದರೆ ಇದೊಂದು ಅದ್ಭುತ ಅನುಭವ ಆಗಿತ್ತು. ನಾನು ನೀರಿನಲ್ಲಿ ಸನ್ನೆಗಳನ್ನು ಮಾಡಿದಾಗ ನನಗೆ ವ್ಯತ್ಯಾಸ ಗೊತ್ತಾಗುತ್ತಿದ್ದು. ಭೂಮಿ ಮೇಲೆ ಚಿತ್ರೀಕರಣ ಮಾಡುವುದು ಸುಲಭ ಆದರೆ ನೀರಿನಲ್ಲಿ ಮಾಡುವುದು ಕಷ್ಟ. ನಿರೀಕ್ಷೆಗೂ ಮೀರಿದ ರೀತಿಯಲ್ಲಿ ಬಂದಿರುವ ಕಾರಣ ಖುಷಿಯಾಗಿದೆ. ಮಿಲನಾ ಅವರಿಗೆ ಪರ್ಫೆಕ್ಟ್ ಫಿಟ್ನೆಸ್ ಇದೆ ಅವರಿಂದ ಅನೇಕ ವಿಚಾರಗಳನ್ನು ಕಲಿತಿರುವೆ' ಎಂದಿದ್ದಾರೆ ಪೃಥ್ವಿ.
ಫೆ.10ಕ್ಕೆ For Registration ತೆರೆಗೆ: ಮಿಲನಾ - ಪೃಥ್ವಿ ಕಾಂಬಿನೇಷನ್ ಸಿನಿಮಾವಿದು!
ಮಿಲನಾ ಮಾತು:
'ನಾನು ನ್ಯಾಷನಲ್ ಲೆವೆಲ್ ಸ್ವಿಮ್ಮರ್ ಆಗಿರುವ ಕಾರಣ ಶೂಟ್ ಮಾಡಲು ಸುಲಭವಾಯ್ತು. ಕಷ್ಟ ಅನಿಸಿದ್ದು ಆ ಭಾರದ ಬಟ್ಟೆ ಧರಿಸಿ ನೀರಿನಲ್ಲಿ ಇರುವುದು. ಸ್ವಿಮ್ಮಿಂಗ್ ಮಾಡುವಾಗ ಗಾಗ್ಲ್ಸ್ ಬಳಸುತ್ತೀವಿ ಆದರೆ ಇಲ್ಲಿ ಆ ಅವಕಾಶ ಇರಲಿಲ್ಲ. 9 ಗಂಟೆಗಳ ಚಿತ್ರೀಕರಣ ನಡೆದ ನಂತರ ಕಣ್ಣುಗಳು ಉರಿಯುತ್ತಿತ್ತು ಅಷ್ಟು chlorine ಇತ್ತು. ವಾತಾವರಣ ನಮಗೆ ಸಪೋರ್ಟ್ ಮಾಡಲಿಲ್ಲ.ನೀರಿನಲ್ಲಿದ್ದರೂ ಭೂಮಿ ಮೇಲಿದ್ದರೂ ನಟನೆ ಒಂದೆ ಆದರೆ ಉಸಿರು ಕಟ್ಟುವುದು ಕಷ್ಟ. ನನ್ನ ಡ್ರೆಸ್ 25 ಮೀಟರ್ ಉದ್ದವಿತ್ತು. ವಿಡಿಯೋ ನೋಡಿದ ಮೇಲೆ ಆ ಕಷ್ಟ ಎಲ್ಲ ಮರೆತು ಬಿಟ್ಟೆ' ಎಂದಿದ್ದಾರೆ ಮಿಲನಾ.
