Asianet Suvarna News Asianet Suvarna News

Rashmika Mandanna ಪದೇ ಪದೇ ಟ್ರೋಲ್ ಮಾಡಿ ನನ್ನ ಮನಸ್ಸು ಮುರಿದು ಬಿಟ್ಟಿದ್ದೀರಿ; ರಶ್ಮಿಕಾ ಭಾವುಕ

 ಮೌನ ಮುರಿದ ರಶ್ಮಿಕಾ ಮಂದಣ್ಣ. ಟ್ರೋಲ್‌ ಮಾಡುವವರು ಮತ್ತು ನೆಗೆಟಿವ್ ಆಗಿ ಮಾತು ತಿರುವು ಹಾಕುವವರಿಗೆ ಕಿವಿ ಮಾತು ಹೇಳಿದ ನಟಿ....
 

Im ridiculed and mocked by the internet says Rashmika Mandanna vcs
Author
First Published Nov 9, 2022, 10:20 AM IST

ಕಿರಿಕ್ ಪಾರ್ಟಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಿಂದ ಸಿನಿ ಜರ್ನಿ ಆರಂಭಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಈಗ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಮೊದಲ ಸಿನಿಮಾ ಚಿತ್ರೀಕರಣ ಸಮಯದಲ್ಲಿ ಕನ್ನಡದ ನಟನನ್ನು ಪ್ರೀತಿಸಿ ಪೋಷಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡರು. ವೈಯಕ್ತಿಕ ಕಾರಣಗಳಿಂದ ಈ ಸಂಬಂಧದಿಂದ ರಶ್ಮಿಕಾ ಹೊರ ಬಂದು ಹೆಚ್ಚಿನ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡರು. ರಶ್ಮಿಕಾ ತೆಗೆದುಕೊಂಡು ವೈಯಕ್ತಿಕ ನಿರ್ಧಾರದಿಂದ ಟ್ರೋಲ್‌ಗಳಿಗೆ ಗುರಿಯಾದ್ದರು. ಅಂದು ಶುರುವಾದ ಟ್ರೋಲ್ ಈ ಕ್ಷಣದವರೆಗೂ ಕಡಿಮೆ ಆಗಿಲ್ಲ ಹೀಗಾಗಿ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕುವ ಮೂಲಕ ಟ್ರೋಲ್‌ ಬಗ್ಗೆ ಮಾತನಾಡಿದ್ದಾರೆ. 

ರಶ್ಮಿಕಾ ಪೋಸ್ಟ್‌:

'ಹಾಯ್..ಕಳೆದ ಕೆಲವು ದಿನಗಳಿಂದ ವಾರಗಳಿಂದ ತಿಂಗಳುಗಳಿಂದ ಅಥವಾ ವರ್ಷಗಳಿಂದ ನನಗೆ ಕೆಲವೊಂದು ವಿಚಾರಗಳು ತುಂಬಾನೇ ತೊಂದರೆ ಕೊಡುತ್ತಿದೆ ಹೀಗಾಗಿ ಆ ವಿಚಾರಗಳ ಬಗ್ಗೆ ಮಾತನಾಡುವ ಸಮಯ ಈಗ ಬಂದಿದೆ. ಈ ಪೋಸ್ಟ್‌ನಲ್ಲಿ ನಾನು ನನ್ನ ಬಗ್ಗೆ ಮಾತ್ರ ಮಾತನಾಡುತ್ತಿರುವುದು - ಈ ಮಾತುಗಳನ್ನು ಹಲವು ವರ್ಷಗಳ ಹಿಂದೆಯೇ ಹೇಳಬೇಕಿತ್ತು' ಎಂದು ರಶ್ಮಿಕಾ ಪೋಸ್ಟ್‌ನಲ್ಲಿ ಆರಂಭಿಸಿದ್ದಾರೆ.

'ಕಾಂತಾರ' ನೋಡಿಲ್ಲ ಎಂದ ರಶ್ಮಿಕಾ ಮಂದಣ್ಣ; ಉಡಾಫೆ ಉತ್ತರ ಎಂದು ನೆಟ್ಟಿಗರಿಂದ ಸಖತ್ ಕ್ಲಾಸ್

'ನನ್ನ ವೃತ್ತಿ ಜೀವನ ಆರಂಭಿಸಿದ ಕ್ಷಣದಿಂದಲ್ಲೂ ನಾನು ತುಂಬಾನೇ hate ಸ್ವೀಕರಿಸುತ್ತಿರುವೆ. ಅಕ್ಷರಶಃ ಪಂಚಿಂಗ್ ಬ್ಯಾಗ್,  ಎಷ್ಟು ಟ್ರೋಲ್‌ಗಳು ಎಷ್ಟು ನೆಗೆಟಿವಿಟಿ...ನಾನು ಆಯ್ಕೆ ಮಾಡಿಕೊಂಡಿರುವ ಜೀವನಕ್ಕೆ ಬೆಲೆ ಇದೆ ಎಂದು ನನಗೆ ಗೊತ್ತಿದೆ ಹೀಗಾಗಿ ನಾನು everyone’s cup of tea ಅಲ್ಲ ಅನ್ನೋ ವಿಚಾರ ಸ್ಪಷ್ಟವಾಗಿ ಗೊತ್ತಿದೆ, ಪ್ರತಿಯೊಬ್ಬರೂ ನನ್ನನ್ನು ಪ್ರೀತಿಸಬೇಕು ಎಂದು ನಿರೀಕ್ಷೆ ಮಾಡುತ್ತಿಲ್ಲ. ನನ್ನನ್ನು ಒಪ್ಪಿಕೊಂಡಿಲ್ಲ ಅಂದ ಮಾತ್ರಕ್ಕೆ ನೀವು ನೆಗೆಟಿವಿಟಿ ಕೊಡಬೇಕು ಅಂತಲ್ಲ. ನಾನು ಮಾಡುವ ಕೆಲಸದ ಬಗ್ಗೆ ನನಗೆ ಮಾತ್ರ ಗೊತ್ತಿದೆ, ದಿನ ಬೆಳಗ್ಗೆಯಿಂದ ರಾತ್ರಿವರೆಗೂ ಶ್ರಮಿಸಿ ನಿಮ್ಮನ್ನು ನಗಿಸುವೆ. ನನ್ನ ಬಗ್ಗೆ ನಾನು ಕೇರ್ ಮಾಡುವುದು ಒಂದೇ ವಿಚಾರ ಕೆಲಸವನ್ನು ಮನಸ್ಸಿನಿಂದ ಸಂತೋಷದಿಂದ ಕೆಲಸ ಮಾಡುವುದು. ಅತಿ ಹೆಚ್ಚು ಶ್ರಮ ವಹಿಸಿ ನನ್ನ ಬೆಸ್ಟ್‌ ನೀಡುತ್ತಿರುವೆ ಇದರ ಬಗ್ಗೆ ನಿಮಗೆ ಮಾತ್ರವಲ್ಲ ನನಗೂ ಹೆಮ್ಮೆ ಇದೆ' ಎಂದು ರಶ್ಮಿಕಾ ಮಂದಣ್ಣ ಬರೆದುಕೊಂಡಿದ್ದಾರೆ.

'ನಾನು ಹೇಳದೇ ಇರುವ ಮಾತಿಗೆ ನನ್ನನ್ನು ಹಾಸ್ಯಾಸ್ಪದವಾಗಿ ಕಾಣುವುದು, ವ್ಯಂಗ್ಯ ಮಾಡುವುದು ಸಾಮಾಜಿಕ ಜಾಲಾತಾಣಗಳಲ್ಲಿ ನಡೆಯುತ್ತಿವೆ. ಇದು ನಿಜಕ್ಕೂ ಮನಸ್ಸಿಗೆ ನೋವು ಕೊಡುತ್ತಿದೆ ಮತ್ತು ನನ್ನ ಸ್ಥೈರ್ಯವನ್ನು ಕೆಡಿಸುತ್ತಿದೆ.ನನ್ನ ಗಮನಕ್ಕೆ ಬಂದಿರುವ ಪ್ರಕಾರ ನನ್ನ ಕೆಲವೊಂದು ಸಂದರ್ಶನಗಳ ಕ್ಲಿಪ್‌ಗಳನ್ನು ತಪ್ಪಾಗಿ ತೋರಿಸಿ ನನ್ನ ವಿರುದ್ಧ ತಿರುಗಿ ಬೀಳುವಂತೆ ಮಾಡಿದ್ದಾರೆ. ಬಳಸದ ಪದಗಳು ಹೇಳದ ಮಾತುಗಳನ್ನು ಹೇಳಿರುವಂತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದರಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿ ಹಾಗೆ ಅಕ್ಕಪಕ್ಕದ ಇಂಡಸ್ಟ್ರಿ ಜೊತೆ ನನ್ನ ಸಂಬಂಧ ಹಾಳು ಮಾಡುತ್ತಿದೆ. ಖಂಡಿತ ನಾನು ನೆಗೆಟಿವ್ ಕಾಮೆಂಟ್‌ಗಳನ್ನು ಸ್ವೀಕರಿಸುತ್ತೀನಿ ಏಕೆಂದರೆ ಅದೇ ನನ್ನ ಶ್ರಮಕ್ಕೆ ಕಾರಣ ಹಠದಿಂದ ಕೆಲಸ ಮಾಡುವ ಹುಮ್ಮಸ್ಸು ನೀಡುತ್ತದೆ ಆದರೆ ಈ ದೇಷ ಬೆಳೆಸುವುದರಲ್ಲಿ ಏನಿದೆ ಅರ್ಥ?  ತುಂಬಾ ವರ್ಷಗಳಿಂದ ಇದನ್ನು ನಿರ್ಲಕ್ಷಿಸುವಂತೆ ಹೇಳುತ್ತಿದ್ದಾರೆ ಆದರೆ ಇದರಿಂದ ಏನೂ ಪರಿಹಾರ ಸಿಕ್ಕಿಲ್ಲ ಸಮಯ ಇನ್ನು ಹೆಚ್ಚಿಗೆ ಕೆಟ್ಟದಾಗುತ್ತಿದೆ. ಇಲ್ಲಿ ನಾನು ಯಾರನ್ನೂ ಗೆಲ್ಲುವುದಕ್ಕೆ ಬಂದಿಲ್ಲ.' ಎಂದು ರಶ್ಮಿಕಾ ಹೇಳಿದ್ದಾರೆ.

'ಕಿರಿಕ್ ಪಾರ್ಟಿ' ಪ್ರೊಡಕ್ಷನ್ ಹೌಸ್ ಹೆಸರೇಳಲು ಹಿಂಜರಿದ ರಶ್ಮಿಕಾ; ಕೃತಜ್ಞತೆ ಇಲ್ಲದವಳೆಂದು ಹಿಗ್ಗಾಮುಗ್ಗ ಟ್ರೋಲ್

'ನನ್ನ ಮೇಲೆ ಜನರು ಸಾರುತ್ತಿರುವ ದ್ವೇಷದಿಂದ ನಾನು ಬದಲಾಗುತ್ತೀನಿ ಅಥವಾ ಜನರನ್ನು ಪ್ರೀತಿಸುವ ರೀತಿ ಬದಲಾಗುತ್ತದೆ ಅಂದ್ರೆ ಅದು ಸುಳ್ಳು. ಈ ಬೇಸರದ ನಡುವೆಯೂ ನನಗೆ ಸಿಗುತ್ತಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ನಾನು ಗುರುತಿಸುತ್ತಿರುವೆ ಎಲ್ಲವೂ ನನ್ನ ಗಮನದಲ್ಲಿದೆ. ನಿನ್ನ ಸಪೋರ್ಟ್‌ನಿಂದ ನಾನು ವೃತ್ತಿ ಜೀವನದಲ್ಲಿ ಈ ಮಟ್ಟಕ್ಕೆ ಬರಲು ಸಾಧಯವಾಗಿದ್ದು. ಹಾಗೂ ಅದೇ ಪ್ರೀತಿ ನನ್ನ ನೋವನ್ನು ಹೇಳಿಕೊಳ್ಳಲು ಧೈರ್ಯ ಕೊಟ್ಟಿದ್ದು. ಅದೆಷ್ಟೋ ಜನರಿಂದ ನಾನು ಸ್ಪೂರ್ತಿಗೊಂದು ಕೆಲಸ ಮಾಡುತ್ತಿರುವೆ, ಆರಂಭದಲ್ಲಿ ಹೇಗೆ ನಿಮ್ಮನ್ನು ನಾನು ಪ್ರೀತಿಸುತ್ತಿದ್ದೆ ಅದೇ ರೀತಿ ಪ್ರೀತಿ ಮಾಡುತ್ತೀನಿ. ಶ್ರಮದಿಂದ ಕೆಲಸ ಮಾಡಿ ಒಳ್ಳೆ ವ್ಯಕ್ತಿಯಾಗಿ ಗುರುತಿಸಿಕೊಳ್ಳುತ್ತೀನಿ. ನಾನು ಹೇಳಿದ ಹಾಗೆ ನೀವು ಖುಷಿಯಾಗಿದ್ದರೆ ನಾನು ಖುಷಿಯಾಗಿರುವೆ' ಎಂದಿದ್ದಾರೆ ರಶ್ಮಿಕಾ ಮಂದಣ್ಣ.

ರಶ್ಮಿಕಾ ಪೋಸ್ಟ್‌ಗೆ ಸ್ಟಾರ್ ನಟ-ನಟಿಯರು ಕಾಮೆಂಟ್ ಮಾಡುವ ಮೂಲಕ ಬಿಗ್ ಸಪೋರ್ಟ್‌ ಕೊಟ್ಟಿದ್ದಾರೆ. 'ನಿಮ್ಮಂತೆ ಜೀವನ ಮಾಡಲು ಇಷ್ಟ ಪಡುವವರು ಈ ಪ್ರೀತಿ ಕೊಡುತ್ತಿದ್ದಾರೆ, ಯಾರಿಂದ ಸಾಧ್ಯವಿಲ್ಲ ಅವರು ದ್ವೇಷ ಸಾಧಿಸುತ್ತಿದ್ದಾರೆ. ನೀನು ನೀನಾಗಿರು. ನಾನು ಕಂಡ ಅದ್ಭುತ ವ್ಯಕ್ತಿ ನೀವು' ಎಂದು ಮಲಯಾಳಂ ನಟ ದುಲ್ಕರ್ ಸಲ್ಮಾನ್ ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios