ಫ್ಯಾಂಟಮ್‌ ಬೇಡ, ವಿಕ್ರಾಂತ್‌ ರೋಣ ಇರಲಿ ಎಂದಿದ್ದೇ ನಾನು: ಸುದೀಪ್‌ | ಬುರ್ಜ್ ಖಲೀಫ ಕಟ್ಟಡದಲ್ಲಿ ಕಿಚ್ಚ-25 ಸಂಭ್ರಮ 

ಸುದೀಪ್‌ ಹಾಗೂ ಅನೂಪ್‌ ಭಂಡಾರಿ ಅವರ ಕಾಂಬಿನೇಷನ್‌ನಲ್ಲಿ ಬರುತ್ತಿರುವ ‘ಫ್ಯಾಂಟಮ್‌’ ಎನ್ನುವ ಹೆಸರು ಬದಲಾಗಿ ‘ವಿಕ್ರಾಂತ್‌ ರೋಣ’ ಆಗಿದೆ. ಈ ಬಗ್ಗೆ ಸುದೀಪ್‌ ವಿವರಣೆ ಇಲ್ಲಿದೆ.

- ಫ್ಯಾಂಟಮ್‌ ಶೂಟಿಂಗ್‌ಗೆ ಹೊರಡುವ ಮುನ್ನ ‘ವಿಕ್ರಾಂತ್‌ ರೋಣ ರೀಪೋರ್ಟಿಂಗ್‌’ ಎಂದು ಬರೆದು ಒಂದು ಫೋಟೋ ಪೋಸ್ಟ್‌ ಮಾಡಿದೆ. ಆ ಫೋಟೋ ತುಂಬಾ ವೈರಲ್‌ ಆಯಿತು. ಫ್ಯಾಂಟಮ್‌ಗಿಂತ ಪಾತ್ರದ ಹೆಸರು ವಿಕ್ರಾಂತ್‌ ರೋಣ ಹೆಚ್ಚು ಫೇಮಸ್‌ ಆಯಿತು. ಆಗಲೇ ನಾನು ನಿರ್ಮಾಪಕ ಜಾಕ್‌ ಮಂಜು ಅವರಿಗೆ ಇದೇ ಹೆಸರು ನೋಂದಾಯಿಸಿಕೊಳ್ಳುವಂತೆ ಹೇಳಿದ್ದೆ.

ಟಾಲಿವುಡ್‌ನಲ್ಲಿ ದರ್ಶನ್‌ ರಾಬರ್ಟ್‌ ಹವಾ: ಡಿಬಾಸ್‌ಗೆ ಸ್ವಾಗತ ಎಂದ ತೆಲುಗು ಮಂದಿ

- ಆಗ ಎಲ್ಲರಿಗೂ ಫ್ಯಾಂಟಮ್‌ ಹೆಸರಿನ ಮೇಲೆಯೇ ಹೆಚ್ಚು ಪ್ರೀತಿ ಇತ್ತು. ಆದರೆ, ಯಾವಾಗ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ಹಾಗೂ ಆಪ್ತರಲ್ಲಿ ವಿಕ್ರಾಂತ್‌ ರೋಣ ಎನ್ನುವ ಹೆಸರೇ ಹೆಚ್ಚು ಕೇಳಿ ಬರುತ್ತಿತ್ತೋ ಆಗಲೇ ನನಗೆ ಚಿತ್ರದ ಹೆಸರು ಬದಲಿಸಬೇಕೆಂಬ ಯೋಚನೆ ಬಂತು. ಕೊನೆಗೆ ಎಲ್ಲರೂ ನನ್ನ ಮಾತಿಗೆ ಸ್ಪಂದಿಸಿದರು.

- ಸುಮಾರು 2,500 ಅಡಿಗಿಂತಲೂ ಎತ್ತರವಾದ, ವಿಶ್ವಪ್ರಸಿದ್ಧ ಬುಜ್‌ರ್‍ ಖಲೀಫ ಕಟ್ಟಡದ ಮೇಲೆ ನಮ್ಮ ಚಿತ್ರದ ಟೈಟಲ್‌ ರಿವೀಲ್‌ ಹಾಗೂ ಚಿತ್ರದಲ್ಲಿ ನನ್ನ 25 ವರ್ಷಗಳ ಪಯಣವನ್ನು ಬಿಂಬಿಸುವ ಸಂಭ್ರಮ ನಡೆಯುತ್ತಿದೆ ಎಂದರೆ ಒಬ್ಬ ನಟನಿಗೆ ಇದಕ್ಕಿಂತ ಹೆಮ್ಮೆ ಮತ್ತು ಸಂಭ್ರಮ ಮತ್ತೊಂದಿಲ್ಲ.

ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಶಾನ್ವಿ ಶ್ರೀವಾಸ್ತವ್..! ರಗಡ್ ಲುಕ್ ಹೇಗಿರ್ಬೋದು..?

- ಸದ್ಯದಲ್ಲೇ ನನ್ನ ನಿರ್ದೇಶನದ 25ನೇ ಸಿನಿಮಾ ಸೆಟ್ಟೇರುತ್ತಿದೆ. ಇದರ ಕತೆ ರೆಡಿಯಾಗಿದೆ. ಕೋಟಿಗೊಬ್ಬ 3 ಹಾಗೂ ವಿಕ್ರಾಂತ್‌ ರೋಣ ಚಿತ್ರಗಳ ಶೂಟಿಂಗ್‌ ಮುಗಿದಿದೆ. ಸದ್ಯದಲ್ಲೇ ನನ್ನ ನಿರ್ದೇಶನದ ಸಿನಿಮಾ ಸೆಟ್ಟೇರಲಿದೆ.