ನಟ ಅರ್ಜುನ್ ರಮೇಶ್, ಕಿರುತೆರೆ, ಬಿಗ್ ಬಾಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಪತ್ನಿಯರೊಂದಿಗಿನ ಜೀವನದ ಬಗ್ಗೆ ಅವರು ಮಾತನಾಡಿದ್ದಾರೆ. ತಮ್ಮಿಬ್ಬರು ಪತ್ನಿಯರು ಹೊಂದಾಣಿಕೆಯಿಂದ ಇದ್ದಾರೆ. ಮನೆಯಲ್ಲಿ ನೆಮ್ಮದಿಯಿದೆ. ಮಕ್ಕಳು ಸಹ ಪ್ರೀತಿಯಿಂದ ಬೆಳೆದಿದ್ದಾರೆ. ತಾವು ಎಲ್ಲರಿಗೂ ಸಮಾನ ಆದ್ಯತೆ ನೀಡುತ್ತೇವೆ. ಇಬ್ಬರೂ ಪತ್ನಿಯರು ಕೊಡಗಿನವರಾಗಿದ್ದು, ತಮ್ಮ ಜೀವನವು ಸಂತೋಷವಾಗಿದೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹೆಚ್ಚಾಗಿ ಶಿವ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅರ್ಜುನ್ ರಮೇಶ್. ಹಲವಾರು ಸೀರಿಲ್, ರಾಜಕೀಯರ ಮತ್ತು ಬಿಗ್ ಬಾಸ್ ರಿಯಾಲಿಟಿ ಶೋ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟರು. ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ನನಗೆ ಇಬ್ಬರು ಹೆಂಡತಿಯರು ಅಂತ ಹೇಳಿದ್ದು ದೊಡ್ಡ ನ್ಯೂಸ್ ಆಗಿತ್ತು. ಅದಾದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಲು ಶುರು ಮಾಡಿದ್ದರು. ಇಬ್ಬರ ನಡುವೆ ಹೇಗಿರುತ್ತಾರೆ? ಮನೆಯಲ್ಲಿ ಜಗಳ ಆಗಲ್ವಾ? ಹೀಗೆ ಪ್ರತಿಯೊಂದಕ್ಕೆ ಅರ್ಜುನ್ ಉತ್ತರಿಸಿದ್ದಾರೆ.
'ನನಗೆ ಇಬ್ಬರು ಪತ್ನಿಯರು ಇರುವ ವಿಚಾರ ಹಾಗೂ ನಮ್ಮ ನಡುವೆ ಇರುವ ಹೊಂದಾಣಿಕೆ ಬಗ್ಗೆ ಯಾಕೆ ಎಷ್ಟೋಂದು ಜನರಿಗೆ ಕ್ಯೂರಿಯಾಸಿಟಿ ಇದೆ ಗೊತ್ತಿಲ್ಲ. ನಾನು ಇದನ್ನು ನಿಭಾಯಿಸುತ್ತಿದ್ದೀನಿ ಅನ್ನೋದಕ್ಕಿಂತ ಎರಡು ದೇವತೆಗಳು ನನ್ನ ಜೀವನವನ್ನು ನಿರೂಪಿಸಿಕೊಂಡು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ ಎನ್ನಬೇಕು. ನಿಜಕ್ಕೂ ನಾನು ಪುಣ್ಯ ಮಾಡಿದ್ದೀನಿ. ಮನೆಯಲ್ಲಿ ನೆಮ್ಮದಿ ಇದ್ರೆ ಈ ದೇಶನೂ ಗೆಲ್ಲಬಹುದು ಈ ಪ್ರಪಂಚವನ್ನು ಗೆಲ್ಲಬಹುದು. ನನ್ನ ಜೀವನದಲ್ಲಿ ದೇವರು ನನಗೆ ಕೊಟ್ಟಿರುವ ಮೊದಲ ವರ ಏನೆಂದರೆ ಮನೆಯಲ್ಲಿ ನನಗೆ ನೆಮ್ಮದಿ. ನಾನು ಏನ್ ಏನೋ ಎದುರಿಸಿದ್ದೀನಿ, ಏನೇ ಅದೃಷ್ಟ ಇಲ್ಲದೆ ಇರಬಹುದು ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಲು ಆಗದೇ ಇರಬಹುದು ಅಥವಾ ರಾಜಕೀಯದಲ್ಲಿ ದೊಡ್ಡ ಹೆಸರು ಮಾಡಲು ಆಗದೇ ಇರಬಹುದು ಆದರೆ ನನ್ನ ವೈವಾಹಿಕ ಜೀವನದಲ್ಲಿ ನನ್ನ ಸಂಸಾರದಲ್ಲಿ ಬಹಳ ಖುಷಿಯಾಗಿ ಇರವವರಲ್ಲಿ ನಾನು ಒಬ್ಬ. ಶಿವ ನನಗೆ ಏನಾದರೂ ಮೊದಲು ಆಶೀರ್ವಾದ ಮಾಡಿದ್ದರೆ ಅದು ನೆಮ್ಮದಿ. ಹೀಗಾಗಿ ನಾನು ತುಂಬಾ ನೆಮ್ಮದಿಯಾಗಿದ್ದೀಮನಿ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಅರ್ಜುನ್ ರಮೇಶ್ ಮಾತನಾಡಿದ್ದಾರೆ.
ಇಷ್ಟು ಗಾಢ ಹಸಿರು ನಿಮಗೆ ಬೇಡವೆಂದ ನೆಟ್ಟಿಗರು: ಶ್ವೇತಾ ಚಂಗಪ್ಪ ಫೋಟೋಸ್ ವೈರಲ್
ನನ್ನ ಜೀವನವನ್ನು ಯಾವತ್ತೂ ಡ್ರಮಾಟಿಕ್ ಆಗಿ ಇಟ್ಟಿಲ್ಲ. ಜೀವನದಲ್ಲಿ ನಾನು ಸಿಕ್ಕಾಪಟ್ಟೆ ಪ್ರಾಕ್ಟಿಕಲ್ ಮನುಷ್ಯ. ಈ ಹಬ್ಬಕ್ಕೆ ಇವರು ಮೊದಲು ಕರೆದಿದ್ದಾರಾ ಮೊದಲು ಅಲ್ಲಿಗೆ ಹೋಗುತ್ತೀನಿ. ಮೊದಲು ಕರೆದಿರುವವರಿಗೆ ಆಧ್ಯತೆ ಕೊಡುತ್ತೀನಿ. ನಾವು ದೇವಸ್ಥಾನಕ್ಕೆ ಹೋದರೆ ತಂದೆ-ತಾಯಿಯಿಂದ ಶುರುವಾಗುತ್ತದೆ ನಂತರ ಮಿಲನ್ ಆನಂತರ ರಮಿಕಾ ಆಮೇಲೆ ದೊಡ್ಡ ಮಗಳು ಆಮೇಲೆ ಚಿಕ್ಕ ಮಗಳು....ಆ ಪ್ರೋಟೋಕಾಲ್ ಪ್ರಕಾರನೇ ಲೈಫ್‌ನ ಮುಂದೆ ತೆಗೆದುಕೊಂಡು ಬಂದಿದ್ದೀನಿ. ಇಬ್ಬರು ಮಕ್ಕಳು ಕೂಡ ಅವರ ತಾಯಿಯನ್ನು ಮಮ್ಮ ಅಂತಾರೆ ಮತ್ತೊಬ್ಬರನ್ನು ಅಮ್ಮ ಅಂತಾರೆ. ಮಕ್ಕಳಲ್ಲಿ ಯಾವತ್ತೂ ಸಪರೇಷನ್ ಬರಬಾರದು ಅನ್ನೋ ಕಾರಣಕ್ಕೆ ಮಮ್ಮ-ಅಮ್ಮ ಈ ಕಾಂಬಿನೇಷನ್‌ನಲ್ಲಿ ಅವರು ಇದ್ದಾರೆ. ನಾವು ಎಲ್ಲೇ ಹೋದರೂ ಒಟ್ಟಿಗೆ ಟ್ರಿಪ್ ಹೋಗುವುದು. ಸೀರಿಯಲ್ ಲೈಫ್ ಬಿಟ್ಟು ಮಜವಾದ ಲೈಫ್ ನೋಡುವುದು ಟ್ರಿಪ್ ಹೋದಾಗಲೇ. ನಮ್ಮಲ್ಲಿ ಇರುವ ಸಣ್ಣ ಹುಡುಗಾಟತನ ಹೊರ ಬರುವುದು ಅವಾಗಲೇ. ನಾನು ಖುಷಿಯಾಗಿದ್ದೀನಿ. ಇಬ್ಬರು ಹೆಂಡತಿಯರು ತುಂಬಾ ಮೆಚ್ಯೂರ್ ಆಗಿದ್ದಾರೆ, ಚೆನ್ನಾಗಿ ಓಡದಿಕೊಂಡಿದ್ದಾರೆ ಇಬ್ಬರು ಒಳ್ಳೆ ಕುಟುಂಬದಿಂದ ಬಂದಿದ್ದಾರೆ ಇಬ್ಬರು ಕೂಡ ಮೂಲತಃ ಕೊಡಗಿನ ಹುಡುಗಿಯರು. ಹೀಗಾಗಿ ನಾನು ಜೀವನದಲ್ಲಿ ಖುಷಿಯಾಗಿದ್ದಿನಿ ಎಂದು ಅರ್ಜುನ್ ರಮೇಶ್ ಹೇಳಿದ್ದಾರೆ.
ನನ್ನ ತಂಗಿಗೆ ಸೌಲಭ್ಯಗಳನ್ನು ಕೊಡಬಾರದು ನಾನು ಕಷ್ಟ ಪಟ್ಟು ಬೆಳೆದಿರುವುದು: ರಶ್ಮಿಕಾ ಮಂದಣ್ಣ ಶಾಕಿಂಗ್ ಹೇಳಿಕೆ
