ಮೊದಲೆಲ್ಲ ರಕ್ಷಿತ್ ಶೆಟ್ಟಿ- ರಶ್ಮಿಕಾ ಮಂದಣ್ಣ ಅಂದ್ರೆ ಅವ್ರು ಮುಗ್ದು ಹೋದ ಕತೆ ಬಿಡಿ ಅನ್ನೋರೇ ಇರ್ತಿದ್ರು ಎಲ್ಲಾ. ಆದರೆ ಈಗ ಇವರಿಬ್ಬರ ಹೆಸರು ಕೇಳಿದ ಕೂಡಲೇ ಅಭಿಮಾನಿಗಳ ಮುಖದಲ್ಲಿ ಸಣ್ಣ ಮುಗುಳ್ನಗೆ ಮೂಡುತ್ತದೆ. ಈ ಮುದ್ದಾದ ಜೋಡಿ ಮತ್ತೆ ಒಂದಾಗ್ತಾರಾ ಅನ್ನೋ ಕುತೂಹಲ ಕಾಣಿಸಿಕೊಳ್ಳುತ್ತೆ. ಇದಕ್ಕೆಲ್ಲ ಕಾರಣ ಮೊನ್ನೆಯಿಂದ ವೈರಲ್ ಆಗ್ತಿರೋ ಇವರಿಬ್ಬರ ಟ್ವೀಟ್ ಜೊತೆಗೆ  'ಬೆಳಗೆದ್ದು ಯಾರ ಮುಖವ ನಾನು ನೋಡಿದೆ...' ಅನ್ನುವ ಹಾಡು. ಬಹುಶಃ ಈಚೀಚೆಗೆ ಎಲ್ಲರ ಮನೆಯಲ್ಲೂ ಬೆಳಗಾಗೆದ್ದು ಕೇಳುವ ಸುಪ್ರಭಾತ ಈ ಹಾಡೇನೋ ಅನ್ನುವ ಸಂದೇಹ ಬರುವಂತೆ 'ಬೆಳಗೆದ್ದು ..' ಹಾಡು ನೂರು ಮಿಲಿಯನ್ ಅಂದರೆ ೧೦ ಕೋಟಿಗೂ ಅಧಿಕ ವೀಕ್ಷಣೆ ದಾಖಲಿಸಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಈ ಖುಷಿ ಕಂಡು ಫುಲ್ ಎಕ್ಸೈಟ್ ಆದ ರಶ್ಮಿಕಾ ಬೆಳಬೆಳಗ್ಗೇನೇ ಒಂದು ಟ್ವೀಟ್ ಮಾಡ್ತಾರೆ. ' ಈ ಹಾಡು ನನ್ನ ಮೊದಲ ಹಾಡು. ನನಗೆ ಬಹಳ ಇಷ್ಟವಾದ ಹಾಡು. ಇದೀಗ ನೂರು ಮಿಲಿಯನ್ ವ್ಯೂ ದಾಖಲಿಸಿರುವುದಕ್ಕೆ ತುಂಬ ಖುಷಿ ಆಗ್ತಿದೆ..' ಹೀಗನ್ನೋ ಜೊತೆಗೆ 'ಈ ಹಾಡಿನ ಶೂಟಿಂಗ್ ಮಾಡಿದ ಕ್ಷಣಗಳೆಲ್ಲ ನೆನಪಿವೆ, ನನ್ನೊಳಗಿನ ಸಾನ್ವಿಯನ್ನು ನಾನು ಹುಡುಕುತ್ತಿದ್ದೇನೆ' ಅಂದುಬಿಡ್ತಾರೆ! ಅಲ್ಲಿಗೆ ಅವರೂ ಭಾವುಕರಾದ್ರು, ಜೊತೆಗೆ ಈ ಪೋಸ್ಟ್ ಓದುವವರ ಮನಸ್ಸೂ ಕರಗಿ ನೀರಾಗುವ ಹಾಗೆ ಮಾಡಿದ್ರು. ಅರೆ, ಈ ರಶ್ಮಿಕಾಳನ್ನು ತಪ್ಪಾಗಿ ತಿಳ್ಕೊಂಡ್ವಾ ಅಂತ ಮರುಗಿದರು ಅಭಿಮಾನಿಗಳು. 

 

 

ಇದಕ್ಕಿಂತ ಮಜಾ ಅನಿಸಿದ್ದು ರಶ್ಮಿಕಾ ಈ ಪೋಸ್ಟ್ ಗೆ ರಕ್ಷಿತ್ ಶೆಟ್ಟಿಯನ್ನು ಟ್ಯಾಗ್ ಮಾಡಿದಾಗ. ಅದನ್ನು ಮತ್ತೆ ಮತ್ತೆ ನೋಡಿ ಕನ್‌ಫರ್ಮ್ ಮಾಡಿಕೊಂಡು ತಲೆಗೆ ಹುಳ ಬಿಟ್ಕೊಂಡ್ರು ಫ್ಯಾನ್ಸ್. ಆದರೆ ರಕ್ಷಿತ್ ಶೆಟ್ಟಿ ಮಾತ್ರ ಈ ಖುಷಿಯನ್ನುನಿರ್ದೇಶಕರ ಜೊತೆಗೆ ಮಾತ್ರ ಹಂಚಿಕೊಂಡಿದ್ರು. ರಶ್ಮಿಕಾಳ ಈ ಟ್ವೀಟ್, ಅದಕ್ಕೆ ತನ್ನನ್ನು ಟ್ಯಾಗ್ ಮಾಡಿದ್ದು ಕಂಡು ಏನನಿಸಿತೋ ಏನೋ, ರಕ್ಷಿತ್ ಅದಕ್ಕೊಂದು ಕ್ಯೂಟ್ ರಿಪ್ಲೈ ಮಾಡ್ತಾರೆ. 'ಬೆಳೀತಿರು ಹುಡುಗಿ, ನಿನ್ನ ಕನಸುಗಳೆಲ್ಲ ನನಸಾಗಲಿ' ಅಂತ. ಆಗ ಮಾತ್ರ ಜನ ಈ ಜೋಡಿ ಮತ್ತೆ ಒಂದಾದ ಹಾಗೆ ಕನಸು ಕಂಡರು. ಸ್ವತಃ ರಶ್ಮಿಕಾ ಇದಕ್ಕೆ ಪ್ರೀತಿಯ ಇಮೋಜಿ ಹಾಕಿ ರಿಪ್ಲೈ ಮಾಡಿದ್ರು. ಅಲ್ಲಿಗೆ ಮುನಿಸಿಕೊಂಡಿದ್ದ ಜೋಡಿ ಒಂದಾಯ್ತು ಅನ್ನೋ ತೀರ್ಮಾನ ಜನರದ್ದು. ಇವರಿಬ್ಬರ ಟ್ವೀಟ್ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಮೇಲೆ ಚರ್ಚೆ ನಡೀತಿದೆ. ಪ್ರಜ್ಞಾವಂತರೆಸಿಕೊಂಡವರು, 'ಅವರಿಬ್ಬರು ಫ್ರೆಂಡ್ಸ್ ಮಗಾ, ನಾವು ಸುಮ್ನೇ ಅವರ ಬಗ್ಗೆ ತಪ್ಪು ತಿಳ್ಕೊಂಡಿದ್ದು' ಅನ್ನೋ ದಾಟಿಯಲ್ಲಿ ಚರ್ಚೆ ನಡೀತಿದೆ. ಕೊಂಚ ಅತಿಯಾಗಿ ರಿಯಾಕ್ಟ್ ಮಾಡೋರು ಇಲ್ಲೂ ರಕ್ಷಿತ್ ನ ಸಾಕ್ಷಾತ್ ದೇವ್ರಿಗೆ ಹೋಲಿಸಿದ್ರು. 

2020 ಪಡೆದುಕೊಂಡಿದ್ದು, ಕಳೆದುಕೊಂಡಿದ್ದು; ಕವಿರಾಜ್, ಅದಿತಿ ಮಾತು! ...

ಆದರೆ ಈಗ ಎದ್ದಿರುವ ಪ್ರಶ್ನೆ ರಕ್ಷಿತ್ ವ್ಯಂಗ್ಯವಾಗಿ ಈ ಟ್ವೀಟ್ ಮಾಡಿರಬಹುದಾ ಅಂತ. ಏಕೆಂದರೆ ಅವರ ಮದುವೆ ಮುರಿದು ಬೀಳೋದಕ್ಕೆ ಕಾರಣವೇ ರಶ್ಮಿಕಾ ತಾನು ಈಗಲೇ ಮದುವೆ ಆಗಲ್ಲ, ನಾನಿನ್ನೂ ಎತ್ತರಕ್ಕೆ ಬೆಳೀಬೇಕು ಅಂದಿದ್ದು. ಆಗ ರಶ್ಮಿಕಾಳನ್ನು ಬಹಳ ಕೆಟ್ಟದಾಗಿ ಬಿಂಬಿಸೋ ಪ್ರಯತ್ನ ನಡೆಯಿತು. ಆದರೆ ಇನ್ನೂ ಇಪ್ಪತ್ತರ ಹರೆಯದಲ್ಲಿರುವ ಹುಡುಗಿ ಇಷ್ಟರಲ್ಲಾಗಲೇ ಮದುವೆಯಾಗಿದ್ರೆ ಆಕೆ ಸಿನಿಮಾ ಕ್ಷೇತ್ರದಲ್ಲಿ ಈ ಮಟ್ಟಿಗೆ ಬೆಳೆಯೋದು ಸಾಧ್ಯವಾಗ್ತಿತ್ತಾ, ಇನ್ನೂ ಇಪ್ಪತ್ತೆರಡರಲ್ಲಿದ್ದ ರಶ್ಮಿಕಾ ಸಿನಿಮಾ ಲೈಫ್ ಅಲ್ಲಿಗೇ ಕೊನೆಯಾಗುತ್ತಿತ್ತಲ್ವಾ, ಆಕೆ ತನ್ನ ಈ ನಿರ್ಧಾರದಿಂದ ದೇಶವೇ ತಿರುಗಿ ನೋಡುವಂಥಾ ನಟಿಯಾಗಿ ಬೆಳೆದಳಲ್ವಾ.. ಅನ್ನೋ ಮಾತುಗಳೂ ಕೇಳಿ ಬರ್ತಿವೆ. ಇಂಥಾ ಟೈಮ್ ನಲ್ಲೇ ರಕ್ಷಿತ್ ಬೆಳೆಯುತ್ತಿರು ಹುಡುಗಿ ಅಂದಿದ್ದು ಆಕೆಯ ಬೆಳೀಬೇಕು ಅನ್ನೋ ಹಂಬಲವನ್ನು ಟೀಸ್ ಮಾಡಿ ಇರಬಹುದಾ, ರಕ್ಷಿತ್ ಮನಸ್ಸಲ್ಲಿ ಇನ್ನೂ ಈಕೆಯ ಬಗ್ಗೆ ಕಹಿ ಉಳಿದುಕೊಂಡಿರಬಹುದಾ ಅನ್ನೋ ಪ್ರಶ್ನೆಯೂ ಏಳುತ್ತೆ.

ಯಶ್ ದಂಪತಿಯ ಕ್ರಿಸ್‌ಮಸ್ ಸಂಭ್ರಮಾಚರಣೆ... ವಾವ್ಹ್..! ಸೂಪರ್.. ...

 ಆದರೆ ರಕ್ಷಿತ್ ಹಿನ್ನೆಲೆ ಗಮನಿಸಿದ್ರೆ ಅವರು ಹೃದಯ ತುಂಬಿಯೇ ವಿಶ್ ಮಾಡಿದ್ದು ಅನ್ನೋದು ಸ್ಪಷ್ಟ. ಹಿಂದೆ ಬ್ರೇಕ್ ಅಪ್ ಆಗಿ ಜನ ರಶ್ಮಿಕಾಗೆ ಜನ ಬಾಯಿಗೆ ಬಂದಹಾಗೆ ಬೈಯ್ಯುತ್ತಿದ್ದಾಗ, ಆಕೆಯ ಬಗ್ಗೆ ಬಹಳ ಕಾಳಜಿಯಿಂದ ರಕ್ಷಿತ್ ಮಾತನಾಡಿದ್ದರು. ಇಲ್ಲೂ ಆ ಕಾಳಜಿಯೇ ಇದೆ ಅಂದುಕೊಳ್ಳಲು ಅಡ್ಡಿಯಿಲ್ಲ. 

ಅಕ್ಷಯ್ ಕುಮಾರ್, ಪ್ರಿಯಾಂಕ ಚೋಪ್ರಾ ಆಮೇಲೆ ಜೊತೆಗೇಕೆ ನಟಿಸಲಿಲ್ಲ? ...

"