ಸ್ಯಾಂಡಲ್‌ವುಡ್‌ ಸುಂದರಿ, ಯಾವುದೇ ವಿಚಾರವಿದ್ದರೂ ನೇರ ನುಡಿಯಲ್ಲಿ ಉತ್ತರಿಸುವ ಹುಡುಗಿ, ಹ್ಯಾಂಡ್ಸಮ್‌ ಕ್ರೀಡಾ ನಿರೂಪಕನ ಪತ್ನಿ ಹಿತಾ ಚಂದ್ರಶೇಖರ್‌ ಕೆಲ ದಿನಗಳಿಂದ ತಮ್ಮ ಮನೆಯಲ್ಲಿ ನಾಯಿಯೊಂದನ್ನು ಸಾಕುತ್ತಿದ್ದರು. ದೃಷ್ಟಿ ಕಳೆದುಕೊಂಡಿದ್ದರೂ ಅದರ ಕಣ್ಣುಗಳು ನೋಡಲು ಗೋಲಿಗಳಂತೆ ಇದ್ದ ಕಾರಣ ಅದನ್ನು 'ಗೋಲಿ' ಎಂದೇ ಕರೆಯಲಾಗಿತ್ತು. ಇತ್ತೀಚಿಗೆ ಗೋಲಿ ತೀರಾ ಅನಾರೋಗ್ಯದಿಂದ ಕೊನೆ ಉಸಿರೆಳೆದಿದೆ. 

ಸಿಹಿ ಕಹಿ ಚಂದ್ರು ಪುತ್ರಿ ಹಿತಾ ಮನೆಗೆ ಹೊಸ ಅತಿಥಿ ಆಗಮನ! 

ದುಃಖದಲ್ಲಿದ್ದ ಹಿತಾ ಚಂದ್ರಶೇಖರ್ ಕೆಲವು ದಿನಗಳ ಕಾಲ ಸೋಷಿಯಲ್ ಮೀಡಿಯಾದಿಂದಲೂ ದೂರ ಉಳಿದಿದ್ದರು. ಆದರೀಗ ಗೋಲಿಯನ್ನು ಮುದ್ದು ಮಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿ  ಭಾವುಕ ಸಾಲುಗಳನ್ನು ಬರೆದಿದ್ದಾರೆ.

ಹಿತಾ ಪೋಸ್ಟ್:
'ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿದೆ, ಕೈ ನಡುಗುತ್ತಿದೆ, ಮೈಂಡ್‌ ಕಳೆದೋಗಿದೆ..ನನ್ನ ಬೇಬಿ ನನ್ನಿಂದ ದೂರವಾಗಿರುವುದು ಕಲ್ಪಿಸಿಕೊಳ್ಳಲೂ ಅಸಾಧ್ಯ. ನನ್ನ ಭಾವನೆಗಳನ್ನು ಪದಗಳ ಮೂಲಕ ವರ್ಣಿಸಲು ಆಗುತ್ತಿಲ್ಲ ಆದರೆ ಇದನ್ನು ಹಂಚಿಕೊಳ್ಳದಿರಲೂ ಆಗುತ್ತಿಲ್ಲ. ಗೋಲಿ ನನ್ನ ಮೊದಲ ಬೇಬಿ, ನಮ್ಮ ಸ್ಪೆಷಲ್ ಬೇಬಿ.  ಆಕೆ ನಮ್ಮ ಜೀವನಕ್ಕೆ ಹೇಗೆ ಎಂಟ್ರಿ ಕೊಟ್ಟಳು, ಹೇಗೆ ದೂರವಾದಳು ಎಂದು ಕಲ್ಪಿಸಿಕೊಳ್ಳುವುದು ಕಷ್ಟ. ಇದು ಫಾರ್‌ ಎವರ್ 5 ತಿಂಗಳು. ಮುಂದೊಂದು ದಿನ ಈ ರೀತಿಯ ದಿನ ಬರುತ್ತದೆ. ಹೀಗೆಲ್ಲಾ ಆಗುತ್ತದೆ ಎಂದು ನನ್ನ ಪೋಷಕರು ಪ್ರಾಣಿಗಳನ್ನು ಸಾಕಲು ಬಿಡುತ್ತಿರಲಿಲ್ಲ. ಈ ನೋವು, ಸಂಕಟ ಜೀವನದಲ್ಲಿ ಒಂದೊಳ್ಳೆ ಪಾಠ ಹೇಳಿ ಕೊಡುತ್ತಿದೆ.  ಕಳೆದ ಎರಡು ತಿಂಗಳು ಜೀವನ ಹೇಗೆಂದು ಹೇಳಿ ಕೊಟ್ಟಿದೆ,' ಎಂದು ಬರೆದುಕೊಂಡಿದ್ದಾರೆ.

ಲಾಕ್‌ಡೌನ್‌ನಲ್ಲಿ ಸಿಹಿ-ಕಹಿ ಚಂದ್ರು ಪುತ್ರಿ ಹಿತಾ ಇಷ್ಟೊಂದು ಸಣ್ಣ ಆಗೋದ್ರಾ? 

'ಗೋಲಿ ನಮ್ಮ ಜೀವನದ ಭಾಗವಾಗಿರಲು ಒಂದು ಕಾರಣವಿದೆ ಎಂದು ಭಾವಿಸಿರುವೆ. ಪರಿಶುದ್ಧವಾದ ಪ್ರೀತಿ ಬಗ್ಗೆ ನನಗೆ ಹೇಳಿಕೊಟ್ಟಿದ್ದಾಳೆ. ನನಗೆ ತಾಯಿ ಸ್ಥಾನ ಕೊಟ್ಟು ಜವಾಬ್ದಾರಿಯನ್ನು ಕೊಟ್ಟಳು. ನನ್ನ ಬೇಬಿ ಆರೋಗ್ಯದಲ್ಲಿ ತುಂಬಾನೇ ತೊಂದರೆಗಳಿದ್ದವು, ಬದುಕಲು ನಿರಂತರವಾಗಿ ಹೋರಾಡಿದು. ಆಕೆಯ ನೋವಿನಪ್ರತಿ ಕ್ಷಣದಲ್ಲಿಯೂ ನಾವು ಭಾಗಿಯಾಗಿದ್ದೆವು. ಈ ನೋವಿನಿಂದ ನಾನು ಸಂಪೂರ್ಣವಾಗಿ ಹೊರ ಬರಲು ಆಗುತ್ತೋ, ಇಲ್ವೋ ಗೊತ್ತಿಲ್ಲ. ಆದರೆ ಈ ಕ್ಷಣದಲ್ಲಿ ನನ್ನ ಜೊತೆಗಿದ್ದ ಸ್ನೇಹಿತರು, ಕುಟುಂಬದವರು ಹಾಗೂ ಅಪರಿಚಿತರಿಗೆ ತುಂಬಾ ಥ್ಯಾಂಕ್ಸ್‌,' ಎಂದು ಹೇಳಿದ್ದಾರೆ.